ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಡಾ.ಕೆ.ಸಿ. ನಾಯ್ಕ್ ರವರ 86ನೇ ಜನ್ಮದಿನಾಚರಣೆ

0

ವಿಟ್ಲ: ಶಕ್ತಿ ನಗರದಲ್ಲಿರುವ ಶಕ್ತಿ ವಸತಿ ಶಾಲೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಡಾ.ಕೆ.ಸಿ. ನಾಯ್ಕ್ ರವರ 86ನೇ ಜನ್ಮದಿನಾಚರಣೆಯನ್ನು  ವಿದ್ಯಾರ್ಥಿಗಳು  ಮತ್ತುಸಂಸ್ಥೆಯಎಲ್ಲಾ ಸಿಬ್ಬಂದಿಗಳ ಸಮ್ಮುಖದಲ್ಲಿಭಾರತೀಯ ಸಂಸ್ಕಾರ ಸಂಪ್ರದಾಯದಂತೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ. ರವರು ಮಾತನಾಡಿ, 86ನೇ ಜನ್ಮದಿನಾಚರಣೆಯ ಹೊಸ್ತಿಲಲ್ಲಿರುವ ಕೆ.ಸಿ.ನಾಯ್ಕ್  ರವರು ನಮಗೆಲ್ಲಾ ಸ್ಪೂರ್ತಿಯಾಗಿದ್ದಾರೆ.ಅವರು ತಮ್ಮ 80ನೇ ವಯಸ್ಸಿನಲ್ಲಿ ಈ ಶಕ್ತಿ ವಿದ್ಯಾ ಸಂಸ್ಥೆಯನ್ನುಕಟ್ಟಿ ಸಾವಿರಾರು ಮಕ್ಕಳಿಗೆ ವಿದ್ಯಾದಾನವನ್ನು ಮಾಡುತ್ತಿದ್ದಾರೆ. ಸದಾ ಮಕ್ಕಳ ಏಳಿಗೆಯನ್ನು ಬಯಸುವ ಕೆ.ಸಿ.ನಾಯ್ಕ್ ರವರ ಕನಸು ಇಲ್ಲಿ ಓದುವ ಮಕ್ಕಳು ಭಾರತೀಯರಾಗಿ ಸಂಪ್ರದಾಯ, ಸಂಸ್ಕಾರಗಳನ್ನು ರೂಢಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅವರು ಮಕ್ಕಳ ಸರ್ವಾಂಗೀಣ ಪ್ರಗತಿಗೆ ಸಕಲ ಸೌಲಭ್ಯವನ್ನು ಒದಗಿಸಿಕೊಡುತ್ತಿದ್ದಾರೆ. ಒಬ್ಬ ಉದ್ಯಮಿಯಾಗಿದ್ದರೂ ಕೂಡಾ ಶಿಕ್ಷಣ ಕ್ಷೇತ್ರದಲ್ಲಿಯೂ ತಮ್ಮನ್ನು ತಾವು ಸಕ್ರಿಯರಾಗಿ ತೊಡಗಿಸಿಕೊಂಡಿದ್ದಕ್ಕಾಗಿ ಅವರ ಸಾಧನೆಗೆ ಮಂಗಳೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪದವಿಯನ್ನು ನೀಡಿರುವುದನ್ನು ಸ್ಮರಿಸಿಕೊಂಡರು. 

 ಶಕ್ತಿ ಪದವಿಪೂರ್ವಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ಮೂರ್ತಿ ರವರು ಮಾತನಾಡಿ, ನಾವು ದೇವರನ್ನು ಕಂಡಿಲ್ಲ. ಆದರೆ ದೇವರು ಕೆ.ಸಿ.ನಾಯ್ಕ್ ರಂತಹ ಹಿರಿಯರ ಮೂಲಕ ನಮಗೆ ಕಾಣಿಸಿಕೊಳ್ಳುತ್ತಾರೆ. ನೂರಾರು ಕುಟುಂಬಗಳಿಗೆ ಉದ್ಯೋಗ ನೀಡಿರುವ ಕೆ.ಸಿ.ನಾಯ್ಕ್ ಅವರಿಂದ ನಾವು ಕಲಿಯುವುದು ಬಹಳಷ್ಟಿದೆ ಎಂದರು.

 ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಡಾ.ಕೆ.ಸಿ.ನಾಯ್ಕ್  ರವರು ಮಾತನಾಡಿ, ನೂರಾರು ಮಕ್ಕಳ ಸಮ್ಮುಖದಲ್ಲಿ ಜನ್ಮದಿನವನ್ನು ಆಚರಿಸಿಕೊಂಡಿದ್ದು ನನಗೆ ಬಹಳ ಸಂತೋಷವಾಗಿದೆ. ಮಕ್ಕಳೆಲ್ಲರೂ ಸೇರಿ ತಮ್ಮ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಏಳಿಗೆಯನ್ನು ಗಳಿಸಿ ಉತ್ತಮ ಫಲಿತಾಂಶಗಳನ್ನು ತಂದುಕೊಟ್ಟರೆ ಅದೇ ನನಗೆ ದೊಡ್ಡ ಉಡುಗೊರೆಯಾಗಲಿದೆ ಎಂದರು.

ಮಕ್ಕಳೆಲ್ಲರೂ ಸೇರಿ ಡಾ.ಕೆ.ಸಿ.ನಾಯ್ಕ್  ರವರಿಗೆ ವಿವಿಧ ಗ್ರೀಟಿಂಗ್‌ಕಾರ್ಡ್ ಮತ್ತು ಉಡುಗೊರೆಗಳನ್ನು ನೀಡುವ ಮೂಲಕ ಶುಭ ಹಾರೈಸಿದರು. ವಿದ್ಯಾರ್ಥಿನಿ ತೃಪ್ತಿ ಕೆ.ಸಿ.ನಾಯ್ಕ್ ರ ಬಗ್ಗೆ ಸಂಸ್ಕೃತದಲ್ಲಿ ಶುಭಶಯದ ನುಡಿಗಳನ್ನು ಆಡಿದರು. ಇದೇ ಸಂದರ್ಭದಲ್ಲಿ ಡಾ.ಕೆ.ಸಿ.ನಾಯ್ಕ್  ಅವರು ನಡೆದು ಬಂದ ಹಾದಿಯನ್ನು ಸ್ಮರಿಸುವಂತೆ ಒಂದು ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. 

ಶಕ್ತಿ ವಸತಿ ಶಾಲಾ ಪ್ರಾಂಶುಪಾಲರಾದ ಬಬಿತಾ ಸೂರಜ್‌ ಉಪಸ್ಥಿತರಿದ್ದು, ವಿವಿಧ ಭಾಷೆಗಳಲ್ಲಿ ಶುಭಾಶಯ ಸಲ್ಲಿಸಿದರು. ಶಿಕ್ಷಕಿ ಚೇತನಾ ಕಾರ್ಯಕ್ರಮ ನಿರೂಪಿಸಿದರು. 

LEAVE A REPLY

Please enter your comment!
Please enter your name here