





ಈಶ್ವರಮಂಗಲ: ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮಾಜಿ ಆಡಳಿತ ಮೊಕ್ತೇಸರ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಕರ್ನೂರು ಗುತ್ತು ನರಸಿಂಹ ಪಕ್ಕಳರ ಶ್ರದ್ಧಾಂಜಲಿ ಸಭೆಯು ಈಶ್ವರಮಂಗಲ ಸಿ.ಎ ಬ್ಯಾಂಕ್ ನ ಸಭಾಂಗಣದಲ್ಲಿ ಜರಗಿತು.


ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಕಾಸರಗೋಡಿನ ಕಾಂಗ್ರೆಸ್ ಮುಖಂಡ ಬೆಳ್ಳಿಪ್ಪಾಡಿ ಸದಾಶಿವ ರೈ, ನಿವೃತ್ತ ಶಿಕ್ಷಕ ಮಹಾಬಲ ರೈ, ಕಾವು ಸಿ.ಎ ಬ್ಯಾಂಕ್ ನಿರ್ದೇಶಕ ಮಜುನಾಥ ರೈ ಸಾಂತ್ಯ, ಗ್ರಾ.ಪಂ ಸದಸ್ಯ ರಮೇಶ್ ರೈ ಸಾಂತ್ಯ ಮುಂತಾದವರು ದಿವಂಗತರ ಬಗ್ಗೆ ಗುಣಗಾನ ಮಾಡಿದರು.






ಸಭೆಯಲ್ಲಿ ವಲಯ ಕಾಂಗ್ರಸ್ ಅಧ್ಯಕ್ಷ ಮೂಸಾನ್ ಕರ್ನೂರು, ದಿವಂಗತರ ಪುತ್ರ ಶ್ರೀ ರಾಮ್ ಪಕ್ಕಳ, ವಿಕ್ರಂ ರೈ ಸಾಂತ್ಯ, ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಗ್ರಾ.ಪಂ ಸದಸ್ಯ ಇಬ್ರಾಹಿಂ ಪಳ್ಳತ್ತೂರು, ಅಬ್ದುಲ್ಲ ಮೆಣಸಿನ ಕಾನ, ಅಂದ್ರು ಸುರುಳಿಮೂಲೆ, ಯೂಸುಫ್ ಹಾಜಿ ಚೇಚಗದ್ದೆ, ಅಬ್ದುಲ್ ಖಾದರ್ ಗೋಳಿತ್ತಡಿ. ಕೆ ಯಂ ಮಹಮ್ಮದ್, ಸೂಫಿ ಬಾಂಟಡ್ಕ
ಎಂ.ಬಿ ಇಬ್ರಾಹಿಂ ಮೈರೋಳು, ಯೂಸೂಫ್ ಹಾಜಿ ತೋಟ ಅಲ್ಲದೆ ಹಲವಾರು ಹಿತೈಷಿಗಳು ಭಾಗವಹಿಸಿದ್ದರು. ಗ್ರಾ.ಪಂ ಉಪಾಧ್ಯಕ್ಷ ರಾಮಮೇನಾಲ ಪ್ರಸ್ತಾವಣೆಗೈದು ನಿರೂಪಿಸಿದರು.







