ಬೆಂಗಳೂರು: ನವೀನ್ ಭಂಡಾರಿಯವರಿಂದ ಶಿವಗುಡಿ ನಿರ್ಮಾಣಕ್ಕೆ 25 ಲಕ್ಷ ರೂ ದೇಣಿಗೆ

0

ಪುತ್ತೂರು: ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಉತ್ತರ ವಲಯದ ಮಾಜಿ ನಿರ್ದೇಶಕ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಪುತ್ತೂರು ಮೂಲದ ಅಗರಿ ನವೀನ್ ಭಂಡಾರಿರವರು ಬೆಂಗಳೂರು ಬೊಮ್ಮನ ಹಳ್ಳಿಯಲ್ಲಿಯ ಮೂಲ್ಕಿ ಸುಂದರರಾಮ್ ಶೆಟ್ಟಿ ನಗರದ ವಿಜಯಾ ಬ್ಯಾಂಕ್ ಎಂಪ್ಲಾಯೀಸ್ ಲೇಜೌಟ್‌ನಲ್ಲಿ ಇರುವ ಶ್ರೀ ಅಯ್ಯಪ್ಪ ದೇವಾಲಯದಲ್ಲಿ ಶಿವನ ಗುಡಿ ಸ್ಥಾಪನೆಗೆ ಒಟ್ಟು 25 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.

ನವೀನ್ ಭಂಡಾರಿಯವರ ಸಹೋದರರಾಗಿರುವ ಮೂಲ್ಕಿ ಸುಂದರ ರಾಮ್ ಶೆಟ್ಟಿ ನಗರ ವೇಲ್ ಫೇರ್ ಅಸೋಸಿಯೇಷನ್ ನ ಅಧ್ಯಕ್ಷ ಕರ್ನಲ್ ಜಗಜೀವನ್ ಭಂಡಾರಿ ರವರು‌ ನಾಗನ ಪ್ರತಿಷ್ಠೆಗೆ 3 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ನವೀನ್ ಭಂಡಾರಿಯವರು ಈಗಾಗಲೇ ಬೆಂಗಳೂರು ನಗರದ ಬೊಮ್ಮನಹಳ್ಳಿಯಲ್ಲಿ ಸುಸಜ್ಜಿತವಾದ ಮೂಲ್ಕಿ ಸುಂದರರಾಮ್ ಶೆಟ್ಟಿ ಬಡಾವಣೆ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಇದು ಬೆಂಗಳೂರಿನಲ್ಲೇ ಮಾದರಿ ಬಡಾವಣೆಯಾಗಿ ಬೆಳೆದಿದೆ. ಇದರ ಬೆಳವಣಿಗೆ. ಅಭಿವೃದ್ಧಿ ಹಿಂದೆ ಡಾ| ಅಗರಿ ನವೀನ್ ಭಂಡಾರಿ ಮತ್ತು ಅವರ ತಂಡದ ಸದಸ್ಯರ ಪರಿಶ್ರಮವಿದೆ. ಅಗರಿ ನವೀನ್ ಭಂಡಾರಿಯವರು ಮೂಲ್ಕಿ ಸುಂದರರಾಮ್ ಶೆಟ್ಟಿ ನಗರ ಸೌಹಾರ್ದ ಸಹಕಾರಿ ಸಂಘದಲ್ಲಿ ಕಳೆದ 19 ವರ್ಷಗಳಿಂದ ಹಾಗೂ ವಿಜಯ ಬ್ಯಾಂಕ್ ಗೃಹ ನಿರ್ಮಾಣ ಸಂಘದ ಅಧ್ಯಕ್ಷರಾಗಿರುತ್ತಾರೆ.

LEAVE A REPLY

Please enter your comment!
Please enter your name here