ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್: ಕಟಾದಲ್ಲಿ ಕಂಚಿನ ಪದಕ ಪಡೆದ ತನ್ಮಯ್

0

ಉಪ್ಪಿನಂಗಡಿ: ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ 2024 ಕರಾಟೆ ಸ್ಪರ್ಧೆಯ 13 ವರ್ಷದ ವಿಭಾಗದಲ್ಲಿ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ತನ್ಮಯ್ ಕಟಾದಲ್ಲಿ ಕಂಚಿನ ಪದಕ ಗಳಿಸಿದ್ದಾರೆ.


ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಮತ್ತು ಮಂಗಳೂರು ಇಂಡಿಯನ್ ಕರಾಟೆ ಡೋಜೋ ವತಿಯಿಂದ ಕುಲಶೇಖರದ ಕೋರ್ಡೆಲ್ ಚರ್ಚ್ ಮೈದಾನದಲ್ಲಿ ಈ ಚಾಂಪಿಯನ್ ಶಿಪ್ ನಡೆಯಿತು. ಇವರು ಸೆನ್ಸಾಯಿ ಮೋಹನ್ ಪೂಜಾರಿ ಇವರಿಂದ ತರಬೇತಿ ಪಡೆದಿದ್ದು, ಡಿ. ನವೀನ್ ಕುಮಾರ್ ಮತ್ತು ಸೌಮ್ಯ ಕೆ.ಎಸ್. ದಂಪತಿಯ ಪುತ್ರ.

LEAVE A REPLY

Please enter your comment!
Please enter your name here