ಪುತ್ತೂರು ಘಟಕದ ನಿವೃತ್ತ ಗೃಹರಕ್ಷಕ ಸುದರ್ಶನ್ ಜೈನ್ ಇವರಿಗೆ ಸನ್ಮಾನ

0

ಪುತ್ತೂರು: ಇತ್ತೀಚಿಗೆ ಇಲಾಖೆಯಿಂದ ನಿವೃತ್ತರಾದ ಪುತ್ತೂರು ಘಟಕದ ಗೃಹರಕ್ಷಕ ಸುದರ್ಶನ್ ಜೈನ್ ಇವರಿಗೆ ಬೀಳ್ಕೊಡುಗೆ ಮತ್ತು ಸನ್ಮಾನ ಸಮಾರಂಭ ನಡೆಯಿತು.

ಇಲಾಖೆಯಲ್ಲಿ ಸುಮಾರು 25 ವರ್ಷಗಳ ಕಾಲ ಗೃಹರಕ್ಷಕ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಆ.10 ರಂಸು ಸೇವಾ ನಿವೃತ್ತಿ ಹೊಂದಿದ್ದರು. ಈ ನಿಟ್ಟಿನಲ್ಲಿ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಠರಾದ ಡಾ. ಮುರಲೀ ಮೋಹನ್ ಚೂಂತಾರು ಇವರು ಪುತ್ತೂರು ಘಟಕದ ಗೃಹರಕ್ಷಕ ಸುದರ್ಶನ್ ಜೈನ್ ಇವರಿಗೆ ಹೂ, ಹಾರ, ಹಣ್ಣು ಹಂಪಲು ನೀಡಿ ಶಾಲು ಹೊದಿಸಿ ಸನ್ಮಾನ ಮಾಡಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ ನಿವೃತ್ತ ಗೃಹರಕ್ಷಕರ ಸೇವೆ ಬಹಳ ಸ್ಮರಣೀಯ. ಇವರು ಇತರ ಎಲ್ಲಾ ಗೃಹರಕ್ಷಕರಿಗೆ ಮಾದರಿಯಾಗಿ ಕೆಲಸ ಮಾಡಿದ್ದಾರೆ. ಇವರು ಇತರ ಇಲಾಖೆಗಳಾದ ಅಗ್ನಿಶಾಮಕ, ಆರ್‍ಟಿಓ, ಕೆಎಸ್‍ಆರ್‍ಟಿಸಿ, ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ ಹಾಗೂ ಚುನಾವಣಾ ಬಂದೋಬಸ್ತ್ ಕರ್ತವ್ಯ ಹಾಗೂ ನೆರೆಹಾವಳಿ, ಕೋಮುಗಲಭೆ ನಿಯಂತ್ರಣ, ಹಬ್ಬಗಳ ಸಮಯದಲ್ಲಿ ಬಂದೋಬಸ್ತ್ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿರುತ್ತಾರೆ. ಜನರ ರಕ್ಷಣೆ ಮತ್ತು ಸಮಾಜದ ಆಸ್ತಿ ಪಾಸ್ತಿ ರಕ್ಷಣೆಯಲ್ಲಿ ಗೃಹರಕ್ಷಕರ ಪಾತ್ರ ಬಹಳ ದೊಡ್ಡದು. ಸಮಾಜದ ಆರೋಗ್ಯವನ್ನು ಕಾಪಾಡುವಲ್ಲಿ ಗೃಹರಕ್ಷಕರು ಬಹುಮುಖ್ಯ ಭೂಮಿಕೆ ವಹಿಸಿದ್ದಾರೆ. ಅವರ ನಿವೃತ್ತಿಯಿಂದ ಇಲಾಖೆಗೆ ಬಹಳ ತುಂಬಲಾರದ ನಷ್ಟ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು.


ಈ ಸಂದರ್ಭದಲ್ಲಿ ಜಿಲ್ಲಾ ಕಛೇರಿಯ ಪ್ರಥಮ ದರ್ಜೆ ಸಹಾಯಕಿ ಶ್ಯಾಮಲಾ ಎ., ಕಛೇರಿ ಸಿಬ್ಬಂದಿ ಮಂಜುಳಾ, ಸಂಜಯ್, ಸುಲೋಚನ, ನಿಶಾ, ಪುತ್ತೂರು ಘಟಕದ ಗೃಹರಕ್ಷಕ ಸತ್ಯನಾರಾಯಣ ಭಟ್, ಮೂಲ್ಕಿ ಘಟಕದ ರಂಜನಿ ಮತ್ತು ರೇಣುಕಾ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here