ಪುತ್ತೂರು:ಇಲ್ಲಿನ ಮುಖ್ಯರಸ್ತೆಯಲ್ಲಿರುವ ಹೆಗ್ಡೆ ಆರ್ಕೆಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ನಂದನ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ 2023-24ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸೆ.17ರಂದು ಕೋರ್ಟ್‌ರಸ್ತೆಯ ಜೇಸಿಐ ಮುಳಿಯ ಹಾಲ್‌ನಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚಂದ್ರಶೇಖರ ಎಸ್.ರವರು ಮಾತನಾಡಿ, ನಮ್ಮ ಸಹಕಾರಿಯು 11 ವರ್ಷಗಳಿಂದ ಮುನ್ನಡೆಯುತ್ತಿದೆ. ಸಂಘವು ಸ್ವಂತ ಕಟ್ಟಡದಲ್ಲಿ ವ್ಯವಹರಿಸುತ್ತಿದ್ದು ಇದರ ಮೊತ್ತ ಸುಮಾರು ರೂ.1.50ಕೊಟಿ ಬೆಳೆಯಿದೆ. ಮರೀಲ್‌ನಲ್ಲಿ ನಿವೇಶನ ಹೊಂದಿದೆ. ವಿವಿಧೋದ್ದೇಶ ಸೌಹಾರ್ದ ಸಹಕಾರಿಯಾಗಿದ್ದು ಸಂಘದ ಆದಾಯದ ದೃಷ್ಠಿಯಿಂದ ಇತರ ಯೋಜನೆಗಳಲ್ಲಿ ಹೂಡಿಕೆ ಮಾಡಲಾಗಿದೆ. ಸಾಲಕ್ಕೆ ಬೇಡಿಕೆಯಿದೆ. ಸದಸ್ಯರು ನಮ್ಮ ಸಂಘದಲ್ಲಿಯೇ ಹೆಚ್ಚಿನ ಠೇವಣಿ ಇಡುವುದಲ್ಲದೆ ಎಲ್ಲ ವ್ಯವಹಾರಗಳನ್ನು ಸಂಘದ ಮೂಲಕ ನಡೆಸಬೇಕು. ಸಂಘವು ಲಾಭದಲ್ಲಿ ಮುನ್ನಡೆಯುವ ತನಕ ನಿರ್ದೇಶಕ ಯಾವುದೇ ಭತ್ಯೆಗಳನ್ನು ಪಡೆಯುತ್ತಿಲ್ಲ. ಸಿಟ್ಟಿಂಗ್ ಫೀಸ್ ಪಡೆಯುತ್ತಿಲ್ಲ. ಮೃತಪಟ್ಟ ಸಂಘದ ಸದಸ್ಯರ ಕುಟುಂಬಕ್ಕೆ ರೂ.5000 ಮರಣ ಸಾಂತ್ವನ ನೀಡುವ ಯೋಜನೆಯಿದೆ. ಸದಸ್ಯರು ಸಂಘದೊಂದಿಗೆ ವ್ಯವಹಾರ ನಡೆಸಿ ಸಂಘದ ಅಭಿವೃದ್ಧಿ ಸಹಕರಿಸುವಂತೆ ವಿನಂತಿಸಿದರು.
ನಿರ್ದೇಶಕ ಲಾರೆನ್ಸ್ ಎ. ಪಿಂಟೋ, ಸುದರ್ಶನ್ ಪಾಟಾಳಿ, ಸಂದೀಪ್ ಶಂಕರ್, ವೀಣಾ ಮಸ್ಕರೇನಸ್, ದಿನೇಶ್ ಕುಮಾರ್, ಗಿರೀಶ್ ವಿ. ಹಾಗೂ ತೇಜೇಶ್ವರ ರಾವ್, ಫ್ರಾನ್ಸಿಸ್ ವಲ್ಲಿ ಲೋಬೋ, ಜಾನ್ ಕ್ಯಾನ್ಯೂಟ್ ಮಸ್ಕರೇನಸ್ ಉಪಸ್ಥಿತರಿದ್ದರು.
ಉಪಾಧ್ಯಕ್ಷ ದಾಮೋದರ ಪಾಟಾಳಿ ಸ್ವಾಗತಿಸಿದರು. ಪ್ರಬಂಧಕ ಮೋಹನ್ ಕುಮಾರ್ ನೋಟೀಸ್ ಓದಿದರು. ನಿರ್ದೇಶಕ ಶ್ರೀಲತಾ ರೈ ವರದಿ ವಾಚಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಶೇಖರ್ ಎಂ. ಲೆಕ್ಕಪತ್ರ, ಮುಂದಿನ ಬಜೆಟ್‌ಗಳನ್ನು ಮಂಡಿಸಿದರು. ನಿರ್ದೇಶಕ ಉಪೇಂದ್ರ ಬಲ್ಯಾಯ ವಂದಿಸಿದರು.