ಸೆ.19:ಬಡಗನ್ನೂರು ಗ್ರಾ.ಪಂ ನ ಜಮಾಬಂದಿ ಸಭೆ

0

ಪುತ್ತೂರು:ಬಡಗನ್ನೂರು ಗ್ರಾಮ ಪಂಚಾಯತ್  2023-2024 ಸಾಲಿನ ಜಮಾಬಂದಿ ಸಭೆಯು ಸರಕಾರದ ಆದೇಶದಂತೆ ಸೆ.19 ರಂದು ಪೂರ್ವಾಹ್ನ ಗಂ.11 ಕ್ಕೆ  ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ.

ಜಮಾಬಂದಿ ಅಧಿಕಾರಿ ಪುತ್ತೂರು,ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭಾಗವಹಿಸಲಿದ್ದಾರೆ.ಸದ್ರಿ ಸಭೆಯಲ್ಲಿ ಗ್ರಾಮ ಪಂಚಾಯತ್ ಲೆಕ್ಕ ಪತ್ರಗಳ ದಾಖಲೆ ಮತ್ತು 2023-2024ನೇ ವರ್ಷ ನಿರ್ವಹಿಸಿದ ಕಾಮಗಾರಿಗಳ ತಪಾಸಣೆ ನಡೆಯಲಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡುವಂತೆ  ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here