ಶ್ರೀ ಭುವನೇಂದ್ರ ಸ್ವಾಮೀಜಿ ವಿವಿಧೋದ್ದೇಶ ಸೌಹಾರ್ದ ಸ.ಸಂಘದ ವಾರ್ಷಿಕ ಮಹಾಸಭೆ

0

ಶೇ.10 ಡಿವಿಡೆಂಡ್ | 2024-25ರ ಅಂತ್ಯಕ್ಕೆ ರೂ.100 ಕೋಟಿ ವ್ಯವಹಾರದ ಗುರಿ

ಪುತ್ತೂರು: ಮಂಗಳೂರಿನಲ್ಲಿ ಕೇಂದ್ರ ಕಛೇರಿ ಹೊಂದಿರುವ ಶ್ರೀ ಭುವನೇಂದ್ರ ಸ್ವಾಮೀಜಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ 14ನೇ ವಾರ್ಷಿಕ ಸಾಮಾನ್ಯ ಸಭೆಯು ಸೆ.15 ರಂದು ಶ್ರೀ ವಿಠೋಬಾ ರುಕುಮಾಯಿ ದೇವಸ್ಥಾನದ ರಾಜಾಂಗಣದಲ್ಲಿ ಎಸ್.ಸತೀಶ್ ನಾಯಕ್‌ರವರ ಅಧ್ಯಕ್ಷತೆಯಲ್ಲಿ ಜರಗಿತು.

15 ಫೆಬ್ರವರಿ 2011ರಂದು ಕೇವಲ ರೂ.20 ಲಕ್ಷ ಶೇರು ಬಂಡವಾಳ ಹಾಗೂ ರೂ.13.30 ಲಕ್ಷ ಠೇವಣಿಯೊಂದಿಗೆ ಪ್ರಾರಂಭವಾದ ಈ ಸಂಘವು 31 ಮಾರ್ಚ್ 2024ರ ಅಂತ್ಯಕ್ಕೆ ರೂ 72 ಲಕ್ಷಕ್ಕೂ ಹೆಚ್ಚಿನ ಶೇರು ಬಂಡವಾಳದೊಂದಿಗೆ 4,953 ಸದಸ್ಯರ ಸಹಕಾರದಿಂದ ಉತ್ತಮ ರೀತಿಯಲ್ಲಿ ವ್ಯವಹಾರ ನಡೆಸುತ್ತಿದೆ ಎಂದು ಅಧ್ಯಕ್ಷ ಎಸ್.ಸತೀಶ್ ನಾಯಕ್‌ ಸಭೆಯಲ್ಲಿ ತಿಳಿಸಿದರು. ರೂ.18.80 ಕೋಟಿ ಹೂಡಿಕೆಯೊಂದಿಗೆ, ರೂ 55.75 ಕೋಟಿ ದುಡಿಯುವ ಬಂಡವಾಳ ಹಾಗೂ ರೂ.34.68 ಲಕ್ಷ ಮೀಸಲಿನೊಂದಿಗೆ ಮಾರ್ಚ್ 2024ರ ಅಂತ್ಯಕ್ಕೆ ರೂ.46.42 ಕೋಟಿ ಠೇವಣಿ ಹಾಗೂ ರೂ.30.75 ಕೋಟಿ ಸಾಲ ಮತ್ತು ಒಟ್ಟು ವ್ಯವಹಾರ 77.17 ಕೋಟಿ ಆಗಿರುವುದರ ಬಗ್ಗೆ ಸದಸ್ಯರನ್ನುದ್ದೇಶಿಸಿ ಅವರು ಸಂತಸ ವ್ಯಕ್ತಪಡಿಸಿದರು.


ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಚ್.ಎಲ್ ಕಮಲಾಕ್ಷ ಮಾರ್ಚ್ 2024ರ ಅಂತ್ಯಕ್ಕೆ ಗಳಿಸಿದ ನಿವ್ವಳ ಲಾಭ ಹಾಗೂ ಸದಸ್ಯರಿಗೆ ಶೇ.10 ಡಿವಿಡೆಂಡ್‌ನನ್ನು ನೀಡುವ ಬಗ್ಗೆ ಸಭೆಯ ಒಪ್ಪಿಗೆ ಪಡೆದರು. ಮಾರ್ಚ್ 2024ರ ಅಂತ್ಯಕ್ಕೆ ಲೆಕ್ಕಪರಿಶೋಧನೆಯಲ್ಲಿ ಸಹಕಾರಿಗೆ ‘ಎ’ ಶ್ರೇಣಿ ದೊರಕಿರುವುದನ್ನು ಕೂಡ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳು ಸದಸ್ಯರಿಗೆ ತಿಳಿಸಿದರು. ಉಪಾಧ್ಯಕ್ಷ ಸಿಎ.ಎಮ್ ಜಗನ್ನಾಥ ಕಾಮತ್‌ ಸ್ವಾಗತಿಸಿ 2024-25ರ ಅಂತ್ಯಕ್ಕೆ ಸಹಕಾರಿಯ ಒಟ್ಟು ವ್ಯವಹಾರವು ರೂ.100 ಕೋಟಿ ತಲುಪುವ ಗುರಿ ಹೊಂದಿರುವುದಾಗಿ ಸದಸ್ಯರಿಗೆ ತಿಳಿಸುತ್ತಾ ಎಲ್ಲಾ ಸದಸ್ಯರು ಈ ಗುರಿ ತಲುಪಲು ಸಂಪೂರ್ಣ ಸಹಕಾರ ನೀಡಬೇಕೆಂದರು. ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರ್ದೇಶಕ ಮಂಡಳಿಯ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು. ಮಹಿಳಾ ಪ್ರತಿನಿಧಿಯಾದ ನಿವೇದಿತಾ ಜಿ ಪ್ರಭು ವಂದಿಸಿದರು.

LEAVE A REPLY

Please enter your comment!
Please enter your name here