ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮಹಾಸಭೆಯಲ್ಲಿ ಸದಸ್ಯರಿಂದ ಅವ್ಯವಹಾರದ ಆರೋಪ :ಮಾತಿನ ಚಕಮಕಿ -ಗೊಂದಲದ ಗೂಡಾದ ಮಹಾಸಭೆ

0

ವಿಟ್ಲ: ಸಹಕಾರ ಸಂಘವೊಂದರ ಮಹಾಸಭೆಯಲ್ಲಿ ಸದಸ್ಯರುಗಳ ಪೈಕಿ ಕೆಲವರು ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಅಧ್ಯಕ್ಷರು ಹಾಗೂ ಮುಖ್ಯಕಾರ್ಯನಿರ್ವಾಹಣಾಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಬಂಟ್ವಾಳ ತಾಲೂಕಿನ ಮಾಣಿಲ ಎಂಬಲ್ಲಿ ನಡೆದಿದೆ.

ಪೆರುವಾಯಿ ವ್ಯವಸಾಯ ಸೇವಾ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷರಾದ ಗೀತಾನಂದ ಶೆಟ್ಟಿ ಮಾಣಿಲಗುತ್ತುರವರ ಅಧ್ಯಕ್ಷತೆಯಲ್ಲಿ ಮಾಣಿಲ ಶಾಖೆಯ ವಠಾರದಲ್ಲಿ ನಡೆದಿತ್ತು‌. ಈ ವೇಳೆ ಸಂಘದ ಸದಸ್ಯರ ಪೈಕಿ ಹಲವರು ನೆರೆದಿದ್ದು, ಸಂಘದ ಮಹಾಸಭೆ ಆರಂಭಗೊಂಡು ಲೆಕ್ಕಪತ್ರಗಳ ಮಂಡನೆ ನಡೆಯುತ್ತಿದ್ದ ವೇಳೆ ಸದಸ್ಯರುಗಳ ಪೈಕಿ ಕೆಲವರು ಕೆಲವೊಂದು ಲೆಕ್ಕಾಚಾರವನ್ನು‌ ಕೇಳಿದ್ದರು. ಆದರೆ ಸದಸ್ಯರುಗಳ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುವಲ್ಲಿ ಸಂಘದ ಅಧ್ಯಕ್ಷರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಯವರು ವಿಫಲರಾದ ಹಿನ್ನೆಲೆಯಲ್ಲಿ ಸದಸ್ಯರುಗಳು ಪಟ್ಟುಬಿಡದೆ ಲೆಕ್ಕಾಚಾರದ ಪಾರದರ್ಶಕತೆಯನ್ನು ತಿಳಿಸುವಂತೆ ಕೇಳಿಕೊಂಡಿದ್ದರು.


ಪ್ರಮುಖವಾಗಿ ಜಮಾ ಖರ್ಚಿನಲ್ಲಿ ವ್ಯತ್ಯಾಸ ಸೇರಿದಂತೆ ಹಲವಾರು ಲೋಪಗಳನ್ನು ಮುಂದಿಟ್ಟುಕೊಂಡು ಸದಸ್ಯರುಗಳು ಸಭೆಯಲ್ಲಿ ಪ್ರಶ್ನೆ ಮಾಡಿದ್ದರು.
ಈ ವೇಳೆ ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿ ಸದಸ್ಯರುಗಳು ಹಾಗೂ ಸಂಘದ ಅಧ್ಯಕ್ಷರ ಮಧ್ಯೆ ಮಾತಿನ ಚಕಮಖಿ ನಡೆದಿತ್ತು‌. ಬಳಿಕ ಅಲ್ಲಿ ನೆರೆದಿದ್ದ‌‌ ಸದಸ್ಯರುಗಳ ಪೈಕಿ ಕೆಲವರು ಇತ್ತಂಡಗಳವನ್ನು ಸಮಾಧಾನಿಸಿ ಪರಿಸ್ಥಿತಿ ಹತೋಟಿಗೆ ತಂದರು ಎಂದು ಮಾಹಿತಿ ಲಭಿಸಿದೆ.

ನಮ್ಮ ಲೆಕ್ಕಾಚಾರ ಪಕ್ಕ‌ ಇದೆ.ಇದೊಂದು ರಾಜಕೀಯ ಪ್ರೇರಿತ ಆರೋಪ
ಮಹಾಸಭೆಯಲ್ಲಿ ಯಾರೋ ಮೂವರು ರಾಜಕೀಯ ಪ್ರೇರಿತವಾಗಿ ಗೊಂದಲ ಸೃಷ್ಠಿಮಾಡಿ ಗಲಬೆ ಎಬ್ಬಿಸಿದ್ದಾರೆ ಬಿಟ್ಟರೆ ನಮ್ಮಲ್ಲಿ ಯಾವುದೇ ತರಹದ ಅವ್ಯವಹಾರ ನಡೆದಿಲ್ಲ. ನಮ್ಮಲ್ಲಿ ಎಲ್ಲಾ ತರಹದ ಲೆಕ್ಕಾಚಾರಗಳು ಪಾರದರ್ಶಕವಾಗಿದೆ. ನಾವು ಈಗಾಗಲೇ ನಮ್ಮ ಹಳೇ ಕಟ್ಟಡವನ್ನು ಸುಮಾರು 35ಲಕ್ಷರೂಪಾಯಿ ವೆಚ್ಚದಲ್ಲಿ ವಿಸ್ತರಣೆ ಮಾಡಿದ್ದೇವೆ. ಅದರಲ್ಲಿ ಮೂರು ಅಂಗಡಿ ಬಾಡಿಗೆ ಕೋಣೆಗಳನ್ನು ನಿರ್ಮಾಣ ಮಾಡಿಕೊಂಡಿದ್ದೇವೆ‌. ನಮ್ಮಲ್ಲಿ ಯಾವುದೆ ಗೊಂದಲಗಳಿಲ್ಲ.
ಗೀತಾನಂದ ಶೆಟ್ಟಿ ಮಾಣಿಲಗುತ್ತು
ಅಧ್ಯಕ್ಷರು
ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘ

LEAVE A REPLY

Please enter your comment!
Please enter your name here