ಮುಂಡೂರು ಗ್ರಾ.ಪಂ ವಠಾರದಲ್ಲಿ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಶಿಬಿರ

0

ಸಾಕು ನಾಯಿಗಳನ್ನು ಮುದ್ದಾಡುವಾಗ ಎಚ್ಚರಿಕೆಯಿರಲಿ-ಚಂದ್ರಶೇಖರ್ ಎನ್‌ಎಸ್‌ಡಿ

ಪುತ್ತೂರು: ಪಶು ಸಂಗೋಪನಾ ಇಲಾಖೆ ಪುತ್ತೂರು, ಮುಂಡೂರು ಗ್ರಾಮ ಪಂಚಾಯತ್ ಇದರ ಸಂಯುಕ್ತ ಆಶ್ರಯದಲ್ಲಿ ಸರ್ವೆ ಪಶು ಚಿಕಿತ್ಸಾಲಯ ಇದರ ಸಹಯೋಗದಲ್ಲಿ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರ ಸೆ.19ರಂದು ಮುಂಡೂರು ಗ್ರಾ.ಪಂ ವಠಾರದಲ್ಲಿ ನಡೆಯಿತು.


ದೀಪ ಬೆಳಗಿಸಿ ಲಸಿಕಾ ಶಿಬಿರಕ್ಕೆ ಚಾಲನೆ ನೀಡಿದ ಮುಂಡೂರು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ್ ಎನ್‌ಎಸ್‌ಡಿ ಸರ್ವೆದೋಳಗುತ್ತು ಮಾತನಾಡಿ ನಾಯಿಗಳನ್ನು ಮುದ್ದಾಡುವ ಹವ್ಯಾಸ ಅನೇಕ ಜನರಿಗಿದ್ದು ಇದು ಕೆಲವೊಮ್ಮೆ ಅಪಾಯಕಾರಿಯಾಗಿ ಪರಿಣಮಿಸಲಿದೆ, ನಾಯಿಯನ್ನು ಮುದ್ದಾಡುವುದು ಒಳ್ಳೆಯದಲ್ಲ, ನಾಯಿಗಳಿಂದ ರೇಬಿಸ್ ರೋಗ ಹರಡುವ ಸಾದ್ಯತೆಯಿದ್ದು ಈಗಾಗಲೇ ಕೆಲವು ದುರಂತಗಳು ಕೂಡಾ ನಡೆದಿದೆ, ಹಾಗಾಗಿ ನಾಯಿಗಳನ್ನು ಮುದ್ದಾಡುವವರು ಎಚ್ಚರ ವಹಿಸಬೇಕು ಎಂದು ಹೇಳಿದರು.

ಸರ್ವೆ ಪಶು ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ಎಂ.ಪಿ ಪ್ರಕಾಶ್ ಮಾತನಾಡಿ ಮುಂಜಾಗ್ರತಾ ಕ್ರಮವಾಗಿ ಸಾಕು ನಾಯಿಗಳಿಗೆ ಲಸಿಕೆ ಹಾಕುತ್ತಿದ್ದೇವೆ ಎಂದು ಹೇಳಿದರು. ಪಶು ಚಿಕಿತ್ಸಾಲಯದ ಸಿಬ್ಬಂದಿಗಳಾದ ಕುಮಾರ್, ಪ್ರತಿಮಾ, ಲತಾ ಹಾಗೂ ಪಶು ಸಖಿ ರಮ್ಯಾ, ಮುಂಡೂರು ಗ್ರಾ.ಪಂ ಪಿಡಿಒ ಅಜಿತ್ ಜಿ.ಕೆ, ಸದಸ್ಯ ಅಶೋಕ್ ಕುಮಾರ್ ಪುತ್ತಿಲ, ಗ್ರಾಮಸ್ಥ ರಾಮಣ್ಣ ಮುಂಡೂರು ಹಾಗೂ ಗ್ರಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸರ್ವೆ ಪಶು ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ಎಂ.ಪಿ ಪ್ರಕಾಶ್ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here