2,69,278.24 ರೂ. ನಿವ್ವಳ ಲಾಭ, ಪ್ರತೀ ಲೀ.ಗೆ 63 ಪೈಸೆ ಬೋನಸ್, ಶೇ.10 ಡಿವಿಡೆಂಡ್
ಪುತ್ತೂರು: ಕರ್ಕುಂಜ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.17ರಂದು ಸಂಘದ ಕಚೇರಿಯಲ್ಲಿ ನಡೆಯಿತು.
ಸಂಘದ ಕಾರ್ಯದರ್ಶಿ ಕೆ. ನಳಿನಾಕ್ಷಿ ವರದಿ ವಾಚಿಸಿ 2023-24ನೇ ಸಾಲಿನಲ್ಲಿ ಸಂಘ ರೂ.2,69,278.24 ನಿವ್ವಳ ಲಾಭ ಪಡೆದುಕೊಂಡಿದೆ. ಸದಸ್ಯರಿಗೆ ಪ್ರತೀ ಲೀ.ಗೆ 63 ಪೈಸೆ ಬೋನಸ್ ಹಾಗೂ ಶೇ.10 ಡಿವಿಡೆಂಡ್ ನೀಡಲಾಗುವುದು ಎಂದರು.
ದ.ಕ.ಹಾಲು ಉತ್ಪಾದಕರ ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಪಿ. ಮಾತನಾಡಿ ಸಂಘಕ್ಕೆ ಉತ್ತಮ ಗುಣಮಟ್ಟದ ಹಾಲನ್ನು ಪೂರೈಕೆ ಮಾಡಬೇಕು. ಪ್ರತೀ ರೈತರು ಹಸುಗಳನ್ನು ಸಾಕಿ ಗೋಬರ್ ಗ್ಯಾಸ್ ಅಳವಡಿಸಿಕೊಳ್ಳಿ ಆಗ ಪ್ರತೀ ಮನೆಯಲ್ಲಿಯೂ ಗೋ ಸಂಪತ್ತು ಉಳಿಯುತ್ತದೆ. ಗೋವುಗಳನ್ನು ಸಾಕಿದರೆ ನಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಒಕ್ಕೂಟದಿಂದ ರಬ್ಬರ್ ಮ್ಯಾಟ್, ಹುಲ್ಲು ಕತ್ತರಿಸುವ ಯಂತ್ರ, ಹಾಲು ಕರೆಯುವ ಯಂತ್ರ, ಹಸಿರು ಹುಲ್ಲು ಬೆಳೆಸಲು ಅನುದಾನ, ಸ್ಲರಿ ಪಂಪು, ಮಿನಿಡೈರಿ ಯೋಜನೆ, ವಾಣಿಜ್ಯ ಡೈರಿ ಘಟಕ ಸ್ಥಾಪನೆಗೆ ಅನುದಾನ ಲಬ್ಯವಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು. ಅಧ್ಯಕ್ಷತೆ ವಹಿಸಿದ್ದ ಸರೋಜಿನಿ ಕೆ.ಎಸ್. ಶುಭಹಾರೈಸಿದರು.
ಸಂಘದ ಉಪಾಧ್ಯಕ್ಷೆ ಗೀತಾ ಜೆ.ಎಸ್.ನಿರ್ದೇಶಕಿ ರಾಜೀವಿ, ಪುಷ್ಪಾವತಿ, ಶಶಿಕಲಾ, ಜಯಶ್ರೀ, ಸರಸ್ವತಿ, ಕಮಲಾಕ್ಷಿ, ದಮಯಂತಿ, ಪೂರ್ಣಿಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಬಂದಿಗಳಾದ ನಳಿನಿ, ಕೃಷ್ಣಪ್ಪ ಯು. ಸಹಕರಿಸಿದರು. ನಿರ್ದೇಶಕಿ ಜಯಂತಿ ಎಸ್. ಸ್ವಾಗತಿಸಿ ಶೋಭಾ ವಂದಿಸಿದರು.
ಅತೀ ಹೆಚ್ಚು ಹಾಲು ಪೂರೈಸಿದ ಸದಸ್ಯರಿಗೆ ಬಹುಮಾನ
ವರದಿ ಸಾಲಿನಲ್ಲಿ ಸಂಘಕ್ಕೆ ಅತೀಹೆಚ್ಚು ಹಾಲು ಪೂರೈಸಿದ ಸದಸ್ಯರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. 42,231ಲೀ. ಹಾಲು ಪೂರೈಸಿದ ಸದಸ್ಯೆ ಕಾವ್ಯಶ್ರೀ ಕೆ. ರವರಿಗೆ ಪ್ರಥಮ ಬಹುಮಾನ ಹಾಗೂ 9786ಲೀ. ಹಾಲು ಪೂರೈಸಿದ ಯಶೊಧ ಪಿ.ರವರಿಗೆ ದ್ವಿತೀಯ ಸ್ಥಾನ ಹಾಗೂ 7901ಲೀ. ಹಾಲು ಪೂರೈಸಿದ ಕೃಷ್ಣಮ್ಮರವರಿಗೆ ತೃತೀಯ ಬಹುಮಾನ ನೀಡಲಾಯಿತು.ಹಾಲು ಪೂರೈಕೆ ಮಾಡಿದ ಎಲ್ಲಾ ಸದಸ್ಯರಿಗೆ ಪ್ರೋತ್ಸಾಹಕರ ಬಹುಮಾನ ನೀಡಲಾಯಿತು.