ಪುತ್ತೂರು: ಶ್ರೀ ಶಾರದಾಂಭ ಸೇವಾ ಸಮಾಜ ಸುಧಾರಣಾ ಸಂಘ(ರಿ) ಬಪ್ಪಲಿಗೆ ಪುತ್ತೂರು ಇದರ 37 ನೇ ವಾರ್ಷಿಕ ಮಹಾಸಭೆ ಸೆ.15ರಂದು ಶ್ರೀ ಶಾರದಾ ಭವನ ಬಪ್ಪಲಿಗೆಯಲ್ಲಿ ನಡೆಯಿತು. ಶ್ರೀ ಶಾರದಾಂಭ ಸೇವಾ ಸಮಾಜದ ಅಧ್ಯಕ್ಷ ರಾಜೇಶ್ ನಾಯಕ್ ನೆಕ್ಕಿಲಾಡಿ ಉಪ್ಪಿನಂಗಡಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿ ಮಹಾಮ್ಮಾಯಿ ದೇವಸ್ಥಾನ ಸರಪಾಡಿ ಇದರ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್ ಮಂಗಳೂರು ಮಾತನಾಡಿ, ಯಾವುದೇ ಒಂದು ಸಮಾಜವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆ ಸಮಾಜವು ಸರ್ವತೋಮುಖ ಅಭಿವೃಧ್ಧಿ ಹೊಂದಲು ಧಾರ್ಮಿಕ ಚಿಂತನೆಗಳೂ ಪೂರಕವಾಗಿರುತ್ತವೆ. ಆದುದರಿಂದ ನಮ್ಮ ಸಮಾಜವೂ ಈ ಮೇಲಿನ ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರಿಯಬೇಕಾದರೆ ಸದೃಢ, ಬಲಿಷ್ಠವಾದ ಆಡಳಿತ ಮಂಡಳಿಯ ಅವಶ್ಯಕತೆ ಇದೆ ಎಂದರು. ಸಮಾಜದ ಅಭಿವೃದ್ಧಿಯ ಕನಸನ್ನು ಹೊಂದಿರುವ ನಾಯಕತ್ವದ ಅವಶ್ಯಕತೆ ಇರುವುದರಿಂದ ಇಂದು ನಡೆಯಲಿರುವ ಚುನಾವಣೆಯಲ್ಲಿ ಸಮುದಾಯದ ಜನರು ಅಂತಹ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು. ಇನ್ನೊರ್ವ ಮುಖ್ಯ ಅತಿಥಿ ಇಂಡಿಯನ್ ಓವರ್ಸಿಸ್ ಬ್ಯಾಂಕಿನ ನಿವೃತ್ತ ಅಧಿಕಾರಿ ಯಶೋದ ಆನಂದ್ ಹೆಬ್ರಿ ಮಹಾಸಭೆಗೆ ಶುಭ ಹಾರೈಸಿದರು. ಚುನಾವಣಾಧಿಕಾರಿ ವಿಜಯಕುಮಾರ್ ಕೈಪಂಗಳ ಹಿರಿಯರನ್ನು ನೆನಪಿಸುತ್ತಾ 1951 ರಿಂದ ನಮ್ಮ ಸಮಾಜದ ಸಂಘ ಬೆಳೆದು ಬಂದ ಹಾದಿಯನ್ನು ವಿವರಿಸಿದರು.
ರಮೇಶ್ ನಾಯಕ್ ಉಪ್ಪಿನಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿ ಭಾಷಣದಲ್ಲಿ ಸಂಘವು ಕಳೆದ ಮೂರು ವರ್ಷಗಳಲ್ಲಿ ಮಾಡಿದ ಪ್ರತಿಯೊಂದು ಕೆಲಸ ಕಾರ್ಯಗಳನ್ನು ಸಮಾಜದ ಮುಂದೆ ಇಟ್ಟರು. ಪ್ರಧಾನ ಕಾರ್ಯದರ್ಶಿ ಶಶಿಶೇಖರ ಪಾಪೆತಡ್ಕ2023 ರ ವರದಿ ವಾಚನ ಮಾಡಿದರು. ಕವಿತಾ ಜೀವನ್ 2023 ರ ಸಾಲಿನ ಆಯವ್ಯಯ ಮಂಡನೆ ಅಂಗೀಕಾರ ಮತ್ತು ಮಂಜೂರು, 2024 ನೇ ಸಾಲಿಗೆ ಅಂದಾಜು ಮುಂಗಡ ಪತ್ರ ಮಂಡನೆ ಮಾಡಿದರು.
ಪುತ್ತೂರು ನಗರ ಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಪುತ್ತೂರು ಸಾರಿಗೆ ಕ್ಷೇತ್ರದಲ್ಲಿ ” ಸಾರಿಗೆ ರತ್ನ” ಪ್ರಶಸ್ತಿಯನ್ನು ಪಡೆದ ನಿತೀಶ್ ನಾಯಕ್ ಮತ್ತು ಶಿಕ್ಷಣ ಕ್ಷೇತ್ರದಲ್ಲಿ “ಉತ್ತಮ ಶಿಕ್ಷಕಿ” ಪ್ರಶಸ್ತಿ ಪಡೆದ ಚಿತ್ರಲೇಖ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಶ್ರೀ ಶಾರದಾಂಭ ಸೇವಾ ಸಮಾಜದ 2024 – 2027 ರ ಅವಧಿಗೆ ನೂತನ ಆಡಳಿತ ಮಂಡಳಿಗೆ ಚುನಾವಣೆ ನಡೆದು “ಆರ್ಯ ತಂಡ” ದ ಬೆಂಬಲಿತ ಸದಸ್ಯರು ಗೆದ್ದು ಹೊಸ ಆಡಳಿತ ಮಂಡಳಿಯ ರಚನೆಯಾಯಿತು. ಅಧ್ಯಕ್ಷರಾಗಿ ರಾಜೇಶ್ ನಾಯಕ್ ಉಪ್ಪಿನಂಗಡಿ ಪುನರಾಯ್ಕೆಯಾದರು. ಗೌರವ ಅಧ್ಯಕ್ಷರಾಗಿ ಪದ್ಮನಾಭ ನಾಯಕರು, ಉಪಾಧ್ಯಕ್ಷರಾಗಿ ಗೋಪಾಲಕೃಷ್ಣ ನಾಯಕ್, ವಸಂತ ಕುಮಾರ್ ಮುಕ್ರಂಪಾಡಿ, ಕೋಶಾದಿಕಾರಿಯಾಗಿ ಶಶಿಶೇಖರ ಪಾಪೆತ್ತಡ್ಕ, ಪ್ರಧಾನ ಕಾರ್ಯದರ್ಶೀಯಾಗಿ ಜಯಪ್ರಸಾದ್ ಚೆಲ್ಯಡ್ಕ, ಜೊತೆ ಕಾರ್ಯದರ್ಶೀಯಾಗಿ ರವಿಕುಮಾರ್, ಚಿತ್ರಲೇಖ, ಸಂಘಟನಾ ಕಾರ್ಯದರ್ಶಿಯಾಗಿ ಮಹಾಬಲ ಪುತ್ತೂರು, ಪುರುಷೋತ್ತಮ ನಾಯಕ್, ರಮೇಶ್ ನಾಯಕ್, ಶಾರದಾ ಕೇಶವ ನಾಯಕ್, ಶೋಭಾ ಬಾಲಕೃಷ್ಣ, ಸದಸ್ಯರುಗಳಾಗಿ ಕೃಷ್ಣ ಮಾಡಾವು, ಸುದೀರ್ ಕಜೆ, ಕೇಶವ ದೈಪಿಲ, ಸಂತೋಷ್ ಪಡ್ಡಾಯೂರು, ಆನಂದ ಚಂದಳಿಕೆ, ಬಾಲಕೃಷ್ಣ ಮೂರ್ನಾಡ್ ಆಯ್ಕೆಯಾದರು.
ಚುನಾವಣೆಯನ್ನು ಚುನಾವಣಾಧಿಕಾರಿ ಶ್ರೀ ವಿಜಯಕುಮಾರ್ ಕೈಪಂಗಳ ಅವರ ಸಾರಥ್ಯದಲ್ಲಿ ಜಯಪ್ರಕಾಶ್ ನಾಯಕ್, ಈಶ್ವರ ನಾಯಕ್, ವಿಧುಶೇಖರ ನಾಯಕ್ ರ ತಂಡ ನಡೆಸಿತು.ಈ ಸಂದರ್ಭದಲ್ಲಿ ಉಚಿತ ವೈದ್ಯಕೀಯ ಶಿಬಿರದಲ್ಲಿ ಆರ್ಯ ತಂಡದಿಂದ ಕೊಡಲ್ಪಟ್ಟ ಉಚಿತ ಕನ್ನಡಕಗಳನ್ನು ಫಲಾನುಭವಿಗಳಿಗೆ ನೀಡಲಾಯಿತು.
ಕಾರ್ಯಕ್ರಮವನ್ನು ವಿಶಾಲಾಕ್ಷಿ ಕೃಷ್ಣ ನಾಯಕ್ ಪ್ರಾರ್ಥಿಸಿ, ಶಶಿಶೇಖರ ಪಾಪೆತಡ್ಕ ವಂದಿಸಿದರು. ಚಿತ್ರಲೇಖ ಶ್ಯಾಂಸುಂದರ್ ನಿರೂಪಿಸಿದರು.