ಇಂದಿನಿಂದ (ಸೆ.20) ಪುತ್ತೂರಿನಲ್ಲಿ ಭಾರತ್ ನೆಕ್ಸಾ ವತಿಯಿಂದ ಬೃಹತ್ ಎಕ್ಸ್ಚೇಂಜ್ ಲೋನ್ ಮೇಳ – ಫ್ರೀ ಚೆಕ್ ಅಪ್ ಕ್ಯಾಂಪ್…

0

ಪುತ್ತೂರು : ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಝುಕಿ ಹಾಗೂ ಭಾರತ್ ನೆಕ್ಸಾ ಇದರ ಸಹಭಾಗಿತ್ವದಲ್ಲಿ ಎರಡು ದಿನಗಳ ಮೆಗಾ ಎಕ್ಸ್ಚೇಂಜ್ ಲೋನ್ ಮೇಳ ಮತ್ತು ಫ್ರೀ ಚೆಕ್ ಅಪ್ ಕ್ಯಾಂಪ್ ಇಲ್ಲಿನ ಕಿಲ್ಲೆ ಮೈದಾನದಲ್ಲಿ ಆಯೋಜನೆ ಮಾಡಿದೆ.


ಸೆ.20 ಮತ್ತು 21 ರಂದು ಈ ಮೇಳ ನಡೆಯಲಿದ್ದು , ಮೆಚ್ಚಿನ ಮಾರುತಿ ಗ್ರಾಹಕರು ಈ ಮೇಳದ ಪ್ರಯೋಜನ ಪಡೆಯುವಂತೆ ನೆಕ್ಸಾ ಸಂಸ್ಥೆ ಪ್ರಕಟಣೆ ತಿಳಿಸಿದೆ. ಇದರ ಜೊತೆಗೆ ಬೃಹತ್ ಕೊಡುಗೆಗಳು ಕೂಡ ಇರಲಿದ್ದು ಕಾರು ಪ್ರಿಯರು ತಮ್ಮ ಇಷ್ಟದ ಕಾರುಗಳ ಖರೀದಿಗೆ ಭಾರತ್ ನೆಕ್ಸಾ ವತಿಯಿಂದ ಭರ್ಜರಿ ಕೊಡುಗೆಯೂ ಸಿದ್ಧವಾಗಿದೆ.


ಸುಮಾರು 2.53 ಲಕ್ಷ ರೂಪಾಯಿವರೆಗಿನ ಕೊಡುಗೆಗಳನ್ನು ಘೋಷಣೆ ಮಾಡಿರುವ ಭಾರತ್ ನೆಕ್ಸಾ , ಗುಣಮಟ್ಟದ ವ್ಯಾರಂಟಿ ಅಥವಾ ಐದು ವರ್ಷಗಳಿಗೆ ಹೆಚ್ಚಿಸಿದ ವ್ಯಾರಂಟಿಯನ್ನು ಗ್ರಾಹಕರ ಪಾಲಿಗೆ ನೀಡುವಂತಹ ವಾಗ್ದಾನವನ್ನು ಘೋಷಣೆ ಮಾಡಿದೆ.


ಯುವ ಸಮೂಹದ ಮೆಚ್ಚಿನ ಜಿಮ್ನಿ ಖರೀದಿಗೆ 2.53 ಲಕ್ಷ ಉಳಿತಾಯವಿದ್ದರೆ, ಫ್ರಾಂಕ್ಸ್ ಗೆ 86 ಸಾವಿರ , ಗ್ರ್ಯಾಂಡ್ ವಿಟಾರ 1.31 ಲಕ್ಷ ಜೊತೆಗೆ 5 ವರುಷಗಳ ಎಕ್ಸ್ಟೆಂಡೆಡ್ ವ್ಯಾರಂಟಿ ಹಾಗೂ ಬೆಲೆನೋ ಮೇಲೆ 1.05 ಲಕ್ಷ ಮತ್ತು ಇಗ್ನಿಸ್ ಗೆ 56ಸಾವಿರ ರೂಪಾಯಿಯ ಕೊಡುಗೆಯನ್ನು ಘೋಷಣೆ ಮಾಡಿದೆ. ಇಷ್ಟೇಯಲ್ಲದೇ ಇಗ್ನೀಶ್ ಮತ್ತು ಬೆಲೆನೋ ಮೇಲೆ 100% ಫಂಡಿಂಗ್ ನೀಡಿದೆ. ಸರಳ ,ಸುಲಭ ದಾಖಲೆ , ತ್ವರಿತ ಸಾಲ ವ್ಯವಸ್ಥೆ , ಕಡಿಮೆ ದರದ ಲೋನ್ ಸೌಲಭ್ಯ ಸಿಗಲಿದೆ.


ಇನ್ನೂ ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ 8050293030 , 7624893030, 9620893030 ಸಂಪರ್ಕಿಸುವಂತೆ ಕೋರಲಾಗಿದೆ.

LEAVE A REPLY

Please enter your comment!
Please enter your name here