ಪುತ್ತೂರು : ಕಳೆದ 32 ವರ್ಷಗಳಿಂದ ಇಲ್ಲಿನ ಕೋಡಿಂಬಾಡಿಯಲ್ಲಿ ವ್ಯವಹರಿಸುತ್ತಿರುವ ಯು.ಕೆ ಸುಪಾರಿಯು ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆಗೊಳಿಸಿರುವ ಅಡಿಕೆಯಿಂದ ತಯಾರಾದ ಹೊಸ ಉತ್ಪನ್ನ ಯು.ಕೆ.ರೋಯಲ್ ಫಾಲ್ಕನ್ ಇದರ ಲೋಗೋವನ್ನು ಸೆ.19 ರಂದು ಬಿಡುಗಡೆಗೊಳಿಸಲಾಯಿತು.ಸ್ಪೀಕರ್ ಯು.ಟಿ.ಖಾದರ್ ಕೋಡಿಂಬಾಡಿಯ ಯು.ಕೆ ಮ್ಯಾನ್ಸನ್ ನಲ್ಲಿ ಲೋಗೋ ಬಿಡುಗಡೆ ಮಾಡಿ , ಹಾರೈಸಿದರು.
ಈ ವೇಳೆ ಯು.ಕೆ ಸುಪಾರಿ ಇದರ ಮಾಲೀಕ ಹಾಗೂ ಕೋಡಿಂಬಾಡಿ ಜುಮ್ಮ ಮಸೀದಿ ಇದರ ಅಧ್ಯಕ್ಷ ಯು.ಕೆ ಉಮ್ಮರ್ ಹಾಜಿ ಕೋಡಿಂಬಾಡಿ , ಯು.ಕೆ.ರೋಯಲ್ ಫಾಲ್ಕನ್ ನ ಮಾಲೀಕ ಹಾಗೂ ಬೊಳುವಾರು ಫೇಬರ್ ಫ್ರಾಂಚೈಸಿ ಇದರ ಪಾಲುದಾರ ಶಬಾಝ್ ಯು.ಕೆ ,ಮುನೀರ್ ಪಾಟ್ರಕೋಡಿ ,ಜಝಿಲ್ ಉಪ್ಪಳ ,ಇಸ್ಮಾಯಿಲ್ ಉಳ್ಳಾಲ ,ಆರ್ಯಾಪು .ಪ್ರಾ.ಕೃ.ಪ. ಸ.ಸಂ. ದ ಅಧ್ಯಕ್ಷ ಮಹಮ್ಮದ್ ಆಲಿ , ಫೇಬರ್ ಫ್ರಾಂಚೈಸಿ ಇದರ ಇನ್ನಿಬ್ಬರು ಪಾಲುದಾರರಾದ ಹನೀಶ್ ಮಾಡಾವು ಮತ್ತು ರುಶೆಲ್ ,ಉದ್ಯಮಿ ಹುಸೈನಾರ್,ಅಬ್ದುಲ್ ಹಮೀದ್ ಬನ್ನೂರು ಹಾಗೂ ಇರ್ಷಾದ್ ಉಪ್ಪಿನಂಗಡಿ ಮತ್ತು ಗಫೂರ್ ಈಸ್ಟರ್ನ್ ಹಾಜರಿದ್ದರು. ಯು.ಕೆ ರೋಯಲ್ ಫಾಲ್ಕನ್ ಇದರ ಉತ್ಪನ್ನಗಳು ಗುಜರಾತ್ ,ಮಹಾರಾಷ್ಟ್ರ ,ಮಧ್ಯಪ್ರದೇಶ ,ಉತ್ತರ ಪ್ರದೇಶ ,ಬಿಹಾರ ,ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಈಗಾಗಲೇ ಮಾರುಕಟ್ಟೆ ಹೊಂದಿದೆ.