ಪುತ್ತೂರು: ವಿದ್ಯಾಭಾರತಿ ಕರ್ನಾಟಕ ಇದರ ಝೋನಲ್ ಲೆವೆಲ್ ಖೋ-ಖೋ ಪಂದ್ಯಾಟವು ಆಂಧ್ರಪ್ರದೇಶದ ವಿಜ್ಞಾನ ವಿಹಾರ ಆಂಗ್ಲ ಮಾಧ್ಯಮ ಪ್ರೌಢಶಾಲೆ ನುಟಾಕ್ಕಿ ಇವರ ಸಹಯೋಗದಲ್ಲಿ, ಕೆ.ಎಲ್. ಯುನಿವರ್ಸಿಟಿ ಕ್ರೀಡಾಂಗಣದಲ್ಲಿ ಸೆ.14ರಂದು ನಡೆಯಿತು. ಈ ಸ್ಪರ್ಧೆಯಲ್ಲಿ ನರೇಂದ್ರ ಪ.ಪೂ.ಕಾಲೇಜಿನ ವಿದ್ಯಾರ್ಥಿಗಳ ತರುಣ ವರ್ಗದ ಬಾಲಕಿಯರ ತಂಡ ಭಾಗವಹಿಸಿರುತ್ತದೆ. ಬಾಲಕಿಯರ ತಂಡದಲ್ಲಿರುವ ವಿದ್ಯಾರ್ಥಿಗಳಾದ ದ್ವಿತೀಯ ವಾಣಿಜ್ಯ ವಿಭಾಗದ ಆಶಾ,ಸಮೀಕ್ಷಾ,ಹರ್ಷಿತಾ, ಅನನ್ಯ, ದ್ವಿತೀಯ ವಿಜ್ಞಾನ ವಿಭಾಗದ ತನ್ಮಯಿ ಬಿ. ಸುವರ್ಣ,ಮೋಕ್ಷಿತಾ,ತೃಷಾ, ಪ್ರಥಮ ವಾಣಿಜ್ಯ ವಿಭಾಗದ ಸಿಂಚನಾ ಎಸ್. ಎಮ್.,ಕೃತಿ ಎಚ್.,ಶೀಲಾ ಎಸ್., ಪ್ರಥಮ ವಿಜ್ಞಾನ ವಿಭಾಗದ ಶ್ರಾವ್ಯಶ್ರೀ ಕೆ.,ಪ್ರತೀಕ್ಷಾ ಇವರು ಈ ಝೋನಲ್ ಲೆವೆಲ್ ಖೋ-ಖೋ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು, ಈ ವಿದ್ಯಾರ್ಥಿಗಳು ಗುಜರಾತಿನ ಆದಿಪುರದಲ್ಲಿ ಅ.3ರಂದು ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು,ಉಪನ್ಯಾಸಕ ವೃಂದ ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.