ಬಾಲ್ ಬ್ಯಾಡ್ಮಿಂಟನ್-ಉಪ್ಪಳಿಗೆ ಪ್ರೌಢಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಪುತ್ತೂರು: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಸರಕಾರಿ ಪ್ರೌಢಶಾಲೆ ಇರ್ದೆ ಉಪ್ಪಳಿಗೆ ಇದರ ಆಶ್ರಯದಲ್ಲಿ ಸೆ.19ರಂದು ನಡೆದ ಪುತ್ತೂರು ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಬಾಲಕರ ಮತ್ತು ಬಾಲಕಿಯರ ತಂಡ ಇರ್ದೆ ಉಪ್ಪಳಿಗೆ ಪ್ರೌಢಶಾಲಾ ತಂಡವು ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.


ಬಾಲಕರು ತಂಡದಲ್ಲಿ ಮಯೂರು ಶೆಟ್ಟಿ, ಚ್ಯವನ್, ಲಿಖಿತ್, ಯಶ್ವಿತ್ ಆಳ್ವ, ಯಶ್ವಿನ್ ಆಳ್ವ, ಲಿಖಿಲ್, ವಿಭಿನ್ ರೈ, ಲಿಖಿತ್, ಬಾಲಕಿಯರ ತಂಡದಲ್ಲಿ ಸಂಜನಾ, ಮಧುರಾ, ಆಶಿತಾ, ವಿಜ್ಞಾ ಕೆ., ಪೃಥ್ವಿ ತಂಡದಲ್ಲಿ ಭಾಗವಹಿಸಿದ್ದರು. ಮುಖ್ಯ ಶಿಕ್ಷಕಿ ಅನ್ನಮ್ಮರವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ರಾಮಕೃಷ್ಣ ಪಡುಮಲೆಯವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುತ್ತಾರೆ.

LEAVE A REPLY

Please enter your comment!
Please enter your name here