ಬಡಗನ್ನೂರು ಹಾಲು ಉತ್ಪಾದಕರ ಸಂಘದ ಮಹಾಸಭೆ

0

ಬಡಗನ್ನೂರು: ಬಡಗನ್ನೂರು ಹಾಲು ಉತ್ಪಾದಕರ ಸಹಕಾರ ಸಂಘವು 2023-24ನೇ ಸಾಲಿನಲ್ಲಿ ರೂ.66513.14 ನಿವ್ವಳ ಲಾಭಗಳಿಸಿದ್ದು ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 26 ಪೈಸೆ ಬೋನಸ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಸೀತಾರಾಮ ಗೌಡ ಅವರು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಣೆ ಮಾಡಿದರು.

ಸಭೆಯು ಸೆ.21ರಂದು ಸಂಘದ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವರದಿ ವರ್ಷದಲ್ಲಿ ಸಂಘವು  1,20,431.4 ಲೀಟರ್ ಹಾಲನ್ನು 42,09,597.69 ರೂ ಗೆ ಖರೀದಿಸಿ ಅದರಲ್ಲಿ5004.5  ಲೀಟರ್ ಹಾಲು ಸ್ಥಳೀಯವಾಗಿ ಮಾರಾಟ ಮಾಡಲಾಗಿದ್ದು ರೂ 2,34,270 ಬಂದಿರುತ್ತದೆ. 

ಪಶು ಆಹಾರ ಹಾಗೂ ಲವಣ ಮಿಶ್ರಣ ಮಾರಾಟ ಮಾಡಿ 13,02,807.70 ವ್ಯವಹಾರ ಮಾಡಿ  27,400 ಲಾಭ ಬಂದಿದೆ ಇತರ ಮೂಲಗಳಿಂದ 83,274.45 ಲಾಭ ಬಂದಿದ್ದು ಒಟ್ಟು 4,84,628.32 ಲಾಭ ಗಳಿಸಿ ಒಟ್ಟು 1,32,666.99 ನಿವ್ವಳ ಲಾಭ ಗಳಿಸಿದೆ.

ದ.ಕ ಹಾಲು ಒಕ್ಕೂಟದ  ವ್ಯವಸ್ಥಾಪಕ ಡಾ.ಅನುದೀಪ್ ಮಾತನಾಡಿ, ಹಸುಗಳ ಪಾಲನೆ, ಪೋಷಣೆ ಮುಂಜಾಗ್ರತಾ ಕ್ರಮಗಳು, ವಿಮೆಯ ಸೌಲಭ್ಯಗಳು, ಒಕ್ಕೂಟದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ  ಮಾತನಾಡಿ, ಹಾಲು ಉತ್ಪಾದಕರಿಗೆ ಒಕ್ಕೂಟದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಬಹುಮಾನ ವಿತರಣೆ;-
ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಉಮೇಶ್ ರೆ ಕುದ್ಕಾಡಿ (ಪ್ರ),  ಮಹಮ್ಮದ್ ಕುಂಞಿ ಮೈಂದನಡ್ಕ  (ದ್ವಿ),  ಸುಧಾಕರ ರೈ ಈಶಮೂಲೆ( ತೃ)  ಮತ್ತು ಎಲ್ಲಾ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಬಹುಮಾನ ನೀಡಿ ಗೌರವಿಸಲಾಯಿತು.

ಸಂಘದ ಕಾರ್ಯದರ್ಶಿ ಮೋಹನ ಪಾಟಾಳಿ ಅಣಿಲೆ ಸ್ವಾಗತಿಸಿ, ಸಹಾಯಕಿ ಸುಜಾತ ಮೈಂದನಡ್ಕ ವರದಿ ವಾಚಿಸಿದರು, ಉಪಾಧ್ಯಕ್ಷೆ ಹೇಮಾವತಿ ವಂದಿಸಿದರು.

LEAVE A REPLY

Please enter your comment!
Please enter your name here