ವಿಟ್ಲ ಸರಕಾರಿ ತರಬೇತಿ ಸಂಸ್ಥೆಯಲ್ಲಿ “ಸ್ವಾಸ್ಥ್ಯ ಸಂಕಲ್ಪ” ಕಾರ್ಯಕ್ರಮ

0

ವಿಟ್ಲ : ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ವಿಟ್ಲ ,ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಬಂಟ್ವಾಳ ಮತ್ತು, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ವಿಟ್ಲ ಯೋಜನೆಯ ಸಹಯೋಗದಲ್ಲಿ “ಸ್ವಾಸ್ಥ್ಯ ಸಂಕಲ್ಪ” ಕಾರ್ಯಕ್ರಮವನ್ನು ಸೆ.20ರಂದು ಆಯೋಜಿಸಲಾಯಿತು.

ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ವಿಟ್ಲ ಇದರ ಅದ್ಯಕ್ಷ ಕೃಷ್ಣಯ್ಯ ಬಳ್ಳಾಲ್ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಜನ ಜಾಗೃತಿ ವೇದಿಕೆ ವಿಟ್ಲ ಇದರ ಸದಸ್ಯರಾದ ನಟೇಶ್ ವಿಟ್ಲ  ಉಪಸ್ಥಿತರಿದ್ದರು.

 ಹದಿಹರೆಯದ ವಯಸ್ಸಿನಲ್ಲಿ ಯುವಕ/ಯುವತಿಯರು ವಯೋಸಹಜ ಬದಲಾವಣೆಯಿಂದ ತಮ್ಮ ಬುದ್ದಿ ಚಿಂತನೆಯಲ್ಲಿ ಕುತೂಹಲ ಪರೀಕ್ಷಿಸುವ ಉತ್ಸಾಹದಿಂದ ದಾರಿ ತಪ್ಪುತ್ತಿದ್ದು ಇತ್ತೀಚಿನ ಯುವಜನರಿಗೆ ಸರಿಯಾದ ಮಾರ್ಗದರ್ಶನದ ಅಗತ್ಯವಿದೆ. ಸಮಾಜದಲ್ಲಿ ಯುವಜನರು ಗೌರವಯುತವಾಗಿ ಬದುಕಲು ಸರಿಯಾದ ನಿರ್ಧಾರದ ಅಗತ್ಯವಿದ್ದು, ತಮ್ಮ ಆತ್ಮಸಾಕ್ಷಿಗೆ ಸರಿಯಾಗಿ ಬದುಕುವ ನಿರ್ಣಯವನ್ನು ತೆಗೆದು ಕೊಳ್ಳಬೇಕಾಗಿದ್ದು. ಇಂತಹ ನಿರ್ಧಾರದಿಂದ ಬದುಕಿನಲ್ಲಿ ದಾರಿ ತಪ್ಪಲು ಸಾದ್ಯವಿಲ್ಲ .ಇತ್ತೀಚಿನ ಯುವ ಜನರು ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಈಗ ಕಾನೂನು ಕ್ರಮಗಳು ಕಟ್ಟು ನಿಟ್ಟಾಗಿದ್ದು, ಈ ನಿಟ್ಟಿನಲ್ಲಿ ತಾವು ವ್ಯವಹರಿಸುವ ಪ್ರತಿ ವ್ಯವಹಾರವನ್ನು ಬುದ್ದಿವಂತಿಕೆಯಿಂದ ನಿಭಾಯಿಸಿ ಸಮಾಜದಲ್ಲಿ ಗೌರವಯುತವಾಗಿ ಬದುಕಬೇಕು . ಪ್ರತಿಯೊಬ್ಬರಿಗೂ ತಮ್ಮ ಗುರಿಯ ಬಗ್ಗೆ ಸ್ಪಷ್ಟ ಕಲ್ಪನೆ ಇದ್ದಲ್ಲಿ ಶಿಸ್ತಿನ ಬದುಕನ್ನು ನಿರ್ವಹಿಸಿ ಸಮಾಜದಲ್ಲಿ ಶ್ರೇಷ್ಟ ವ್ಯಕ್ತಿಯಾಗಿ ಗುರಿತಿಸಿಕೊಳ್ಳಬಹುದು ಎಂದು ಮುಖ್ಯ ಸಂಪನ್ಮೂಲ ವ್ಯಕ್ತಿ ನಿವೃತ್ತ ಆರೋಗ್ಯ ಮೇಲ್ವಿಚಾರಕ ಜಯರಾಮ ಪೂಜಾರಿ ಹೇಳಿ ತರಬೇತಿದಾರರಿಗೆ ಪ್ರತಿಜ್ಞಾ ವಿಧಿಯನ್ನು ಬೋದಿಸಿದರು.

ಸಂಸ್ಥೆಯ ಪ್ರಾಚಾರ್ಯ ಹರೀಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾಕ ಸರಿತ ಕಾರ್ಯಕ್ರಮವನ್ನು ನಿರೂಪಿಸಿದರು.ಕಿ.ತ.ಅ ಜೋಯ್ಲಿನ್ ಕ್ರಾಸ್ತಾ ಸ್ವಾಗತಿಸಿದರು. ಶರತ್ ಕುಮಾರ್ ಎಸ್ ಎಚ್ ವಂದಿಸಿದರು.ಕಿರಿಯ ತರಬೇತಿ ಅಧಿಕಾರಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here