ಇರ್ದೆ-ಬೆಟ್ಟಂಪಾಡಿ ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಮಹಾಸಭೆ

0

1,04,97,244.20 ರೂ. ಲಾಭ, ಶೇ.13 ಡಿವಿಡೆಂಡ್

ಪುತ್ತೂರು: ಇರ್ದೆ-ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ ಮಹಾಸಭೆ ಸೆ.21ರಂದು ಸಂಘದ ಸಭಾಭವನದಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಂಗನಾಥ ರೈ ಕೆ.ಎಸ್. ವರದಿ ವಾಚಿಸಿ ವರ್ಷಾಂತ್ಯಕ್ಕೆ ಸಂಘದಲ್ಲಿ 3313 ಸದಸ್ಯರಿದ್ದು ರೂ.3,38,27,000 ಪಾಲು ಬಂಡವಾಳವಿರುತ್ತದೆ. ರೂ.32,19,96,027.15 ಮೊತ್ತದ ಠೇವಣಿ ಇದ್ದು ಸದಸ್ಯರ ಸಾಲ ರೂ.43,09,94,233 ಇರುತ್ತದೆ. ವರ್ಷಾಂತ್ಯಕ್ಕೆ ರೂ.2,74,59,405.50 ಒಟ್ಟು ನಿಧಿಗಳು ಇರುತ್ತದೆ ಎಂದರು. ಸಂಘದ ಕಾರ್ಯವ್ಯಾಪ್ತಿಯಲ್ಲಿ ಒಟ್ಟು 112 ಸ್ವಸಹಾಯ ಗುಂಪುಗಳಿದೆ. ಸಂಘದ ಮುಖಾಂತರ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳು, ಕೃಷಿ ಉಪಕರಣಗಳು, ಅಡುಗೆ ಅನಿಲ ಮತ್ತು ಪಡಿತರ ವಸ್ತುಗಳ ವ್ಯಾಪಾರ ವಹಿವಾಟು ನಡೆಸಲಾಗುತ್ತಿದ್ದು ರೂ.7,40,004.76 ವ್ಯಾಪಾರ ಲಾಭ ಬಂದಿರುತ್ತದೆ ಕ್ಯಾಂಪ್ಕೋ ಸಂಸ್ಥೆಗಳೊಂದಿಗೆ ಅಡಿಕೆ, ಕಾಳುಮೆಣಸು, ಮತ್ತಿತರ ಕೃಷಿ ಉತ್ತಪನ್ನಮಾರಾಟದಿಂದ ರೂ.55,842.72 ಕಮಿಶನ್ ಬಂದಿದೆ ಎಂದು ಹೇಳಿದ ಅವರು ಸಂಘವು ಕಳೆದ ಸಾಲಿನಲ್ಲಿ 1,04,97,244.20 ಲಾಭ ಗಳಿಸಿದೆ ಎಂದು ಹೇಳಿದರು. ನಮ್ಮ ಸಂಘಕ್ಕೆ ಬ್ಯಾಂಕ್‌ನ ಇತಿಹಾಸದಲ್ಲಿ ಗರಿಷ್ಟ ಮಟ್ಟದ ಲಾಭವನ್ನು ಪಡೆಯಲು ಅವಕಾಶ ಮಾಡಿಕೊಟ್ಟಿದ್ದೀರಿ. 2025ರ ಜನವರಿಯಲ್ಲಿ ನೂತನ ಆಡಳಿತ ಮಂಡಳಿ ರಚನೆಯಾಗಲಿದೆ. ಮುಂದಿನ ವರ್ಷಕ್ಕೆ ಇನ್ನೂ ಕೂಡ ಹೆಚ್ಚಿನ ಲಾಭ ಬಂದು ಹೆಚ್ಚಿನ ಡಿವಿಡೆಂಡ್ ಕೂಡ ನಿಡುವಂತಾಗಲಿ ಎಂದು ಹೇಳಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಮಯ್ಯ ರೈ ಮಹಾಸಭೆಯ ನೊಟೀಸು ಓದಿ ದಾಖಲಿಸಿದರು. 2023-24ನೇ ಸಾಲಿನ ಲೆಕ್ಕಪರಿಶೋಧನಾ ವರದಿ ಮತ್ತು ಅದರ ಅನುಪಾಲನಾ ವರದಿ ಮಂಡಿಸಿದರು. 2023-24ನೇ ಸಾಲಿನಲ್ಲಿ ಬಜೆಟ್‌ಗಿಂತ ಹೆಚ್ಚು ಖರ್ಚಾದ ವಿವರ ಓದಿದರು. ಮುಂದಿನ ಆಯವ್ಯಯ ಪಟ್ಟಿ ತಿಳಿಸಿದರು. ಸಂಘದ ಮುಂದಿನ ಕಾರ್ಯಯೋಜನೆಗಳನ್ನು ತಿಳಿಸಿದರು. 2023-24ನೇ ಸಾಲಿನ ಲಾಭ ವಿಂಗಡನೆ ವಿವರ ನೀಡಿ ಶೇ.13 ಡಿವಿಡೆಂಡ್ ನೀಡುವುದಾಗಿ ಘೋಷಿಸಿದರು.

sಸನ್ಮಾನ ಸ್ವೀಕರಿಸಿದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ ನಮ್ಮ ಸಹಕಾರಿ ಸಂಘ ಸತತ 11 ವರ್ಷ ಸಾಧನ ಪ್ರಶಸ್ತಿ ಪಡೆದುಕೊಂಡ ಸಂಘವಾಗಿದೆ. ಸಂಘಕ್ಕೆ ಉತ್ತಮವಾದ ಕಟ್ಟಡ ನಿರ್ಮಾಣ ಮಾಡಿದ್ದೇವೆ ಎಂದರು. ನೀವು ಸಂಘದಲ್ಲಿ ಇಟ್ಟಂತಹ ಠೇವಣಿಯಿಂದ ಸಾಲ ನೀಡುತ್ತಿದ್ದೇವೆ. ನಿಮ್ಮ ಠೇವಣಿಗಳಿಗೆ ಇನ್ಸೂರೆನ್ಸ್ ವ್ಯವಸ್ಥೆಯೊಂದಿಗೆ ಸೂಕ್ತ ಭದ್ರತೆ ನೀಡುತ್ತಿದ್ದೇವೆ ಎಂದರು. ಶೂನ್ಯ ಬಡ್ಡಿದರ ಮತ್ತು ಶೇ.3ರ ಬಡ್ಡಿದರದಲ್ಲಿ ಸಾಲ ನೀಡುವ ವ್ಯವಸ್ಥೆ ಇದ. ಅಲ್ಲದೆ ಹೈನುಗಾರಿಕೆ ನಡೆಸಲು ಕೂಡ ಸಾಲ ನೀಡುತ್ತೇವೆ. ಈ ಮೂಲಕ ಹೈನುಗಾರಿಕೆಗೆ ಅಮೂಲ್ಯ ಕೊಡುಗೆ ನೀಡಲಾಗುತ್ತದೆ. ಸಹಕಾರಿ ಕ್ಷೇತ್ರ ಒಬ್ಬ ವ್ಯಕ್ತಿಗೆ ಹುಟ್ಟಿನಿಂದ ಸಾಯುವವರೆಗೂ ಬೇಕಾದ ಸೇವೆ ನೀಡುತ್ತದೆ ಎಂದರು. ಆದ್ದರಿಂದ ಮುಂದಿನ ದಿನಗಳಲ್ಲಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ವ್ಯವಹಾರ ಮಾಡಿ ಸಂಘವನ್ನು ಬೆಳೆಸಿ ಎಂದು ಹೇಳಿದ ಅವರು ಕೃತಜ್ಞತೆ ಸಲ್ಲಿಸಿದರು.

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವಲಯ ಮೇಲ್ವಿಚಾರಕ ವಸಂತ್ ಎಸ್. ಮಾತನಾಡಿ ಇರ್ದೆ-ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆಡಳಿತ ಮಂಡಳಿಯ ಯೋಜನೆ ಅನುಷ್ಠಾನವಾಗಬೇಕಾದರೆ ಸಿಬಂದಿಗಳ ಹಾಗೂ ಸದಸ್ಯರ ಸಹಕಾರ ಮುಖ್ಯ. ನಿಮ್ಮೆಲ್ಲರ ವ್ಯವಹಾರವನ್ನು ಸಂಘದಲ್ಲಿ ನಿರ್ವಹಿಸಿ ಯೋಜನೆಗಳನ್ನು ಪಡೆದುಕೊಳ್ಳಿ ಎಂದರು.

ಧನಲಕ್ಷ್ಮೀ ನಿಧಿ ಯೋಜನೆ ಉದ್ಘಾಟನೆ:
ಸಂಘದ ವತಿಯಿಂದ ಆಕರ್ಷಕ ಬಡ್ಡಿದರದ ವಿಶೇಷ ಮಾಸಿಕ ಠೇವಣಿ ಯೋಜನೆ ಧನಲಕ್ಷ್ಮೀ ನಿಧಿ ಯೋಜನೆ ಆರಂಭಿಸಿದ್ದು ಇದರ ಉದ್ಘಾಟನೆ ನಡೆಯಿತು. ಸಂಘದ ಹಿರಿಯ ಸದಸ್ಯ ನಾರಾಯಣ ಘಾಟೆ ದಂಪತಿಯವರು ಉದ್ಘಾಟಿಸಿ ಯೋಜನೆಗೆ ಚಾಲನೆ ನೀಡಿದರು.

ಸಂಘದ ನಿರ್ದೇಶಕರುಗಳಾದ ಚಂದ್ರನ್ ತಲೆಪ್ಪಾಡಿ, ಶೇಷಪ್ಪ ರೈ ಎಂ., ಕರುಣಾಕರ ಶೆಟ್ಟಿ ಕೆ., ಹರೀಶ್ ಗೌಡ, ಸದಾಶಿವ ರೈ, ದೇವಪ್ಪ ನಾಯ್ಕ, ನಾಗರಾಜ ಕೆ., ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ಗುಮಾಸ್ತೆ ಸ್ವಾತಿ ಎಂ., ಸನ್ಮಾನ ಪತ್ರ ವಾಚಿಸಿದರು. ಸಂಘದ ನಿರ್ದೇಶಕಿಯರಾದ ದೀಪಿಕಾ ಪ್ರಕಾಶ್ ರೈ ಮತ್ತು ಆಶಾ ಅರವಿಂದ್ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಗಿರೀಶ್ವರ ಭಟ್ ಎಂ. ಸ್ವಾಗತಿಸಿ ಹಿರಿಯ ಗುಮಾಸ್ತ ಆರ್.ಬಿ.ಸುವರ್ಣ ವಂದಿಸಿದರು. ಸಹಾಯಕ ಕಾರ್ಯನಿರ್ವಹಣಾಧಿಕಾರಿ ಲಿಂಗಪ್ಪ ಗೌಡ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಲೆಕ್ಕಿಗ ಮಹಮ್ಮದ್ ಕುಂಞ, ಮಾರಾಟ ಸಹಾಯಕ ಬಾಲಕೃಷ್ಣ ನಾಯ್ಕ, ಕಛೇರಿ ಸಹಾಯಕ ರವಿ ಜಿ., ಜವಾನ ಅಬ್ದುಲ್ ಕುಂಞ, ಸಿಬಂದಿಗಳಾದ ನವ್ಯಾ ಬಿ., ಪ್ರಜ್ಞಾ, ಅಶ್ವಿನಿ, ನವೋದಯ ಪ್ರೇರಕಿ ತುಳಸಿ ಎನ್. ಸಹಕರಿಸಿದರು. ಸದಸ್ಯರಿಗೆ ಗಿಫ್ಟ್ ನೀಡಲಾಯಿತು.

25 ವರ್ಷದ ಸೇವೆಗೆ ಶಶಿಕುಮಾರ್ ರೈರವರಿಗೆ ಸನ್ಮಾನ
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಹಾಗೂ ಇರ್ದೆ-ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಶಶಿಕುಮಾರ್ ರೈರವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದಲ್ಲಿ 1999ರಿಂದ ನಿರ್ದೇಶಕರಾಗಿ ಆಯ್ಕೆಗೊಂಡು ಸತತ 25 ವರ್ಷ ನಿರ್ದೇಶಕರಾಗಿ ಹಾಗೂ 2010ರಿಂದ 2013ರವರೆಗೆ ಅಧ್ಯಕ್ಷರಾಗಿ ಅನನ್ಯ ಸೇವೆ ಸಲ್ಲಿಸಿ, ಸಂಘದ ನೂತನ ಕಟ್ಟಡಗಳ ನಿರ್ಮಾಣಕ್ಕೆ ಸಹಕರಿಸಿದ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ವಿವಿಧ ಅನುದಾನಗಳನ್ನು ನೀಡುವಲ್ಲಿ ಶ್ರಮಿಸಿದ ಶಶಿಕುಮಾರ್ ರೈರವರನ್ನು ಶಲ್ಯ, ಪೇಟ, ಹಾರ, ಫಲಪುಷ್ಪ ಹಾಗೂ ಬೆಳ್ಳಿದೀಪ ನೀಡಿ ಸನ್ಮಾನಿಸಿದರು. ಸಂಘದ ಹಿರಿಯ ಸದಸ್ಯರುಗಳಾದ ವಿಠಲ ರೈ ಬೈಲಾಡಿ, ಕೆ.ಪರಮೇಶ್ವರ ಭಟ್ ಕೋನಡ್ಕ, ಜಗನ್ನಾಥ ರೈ ಕೊಮ್ಮಂಡ, ಮಾಜಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ರಮೇಶ್ ರೈ ಪಂಜೊಟ್ಟು, ವಿಷ್ಣು ರಾವ್ ಬೆಟ್ಟಂಪಾಡಿರವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here