ಅಕ್ಷಯ ಕಾಲೇಜಿನಲ್ಲಿ ವಿಜ್ರಂಭಿಸಿದ ಓಣಂ ಹಬ್ಬಾಚರಣೆ

0

ಪರಸ್ಪರ ಸಹೋದರತ್ವ ಭಾವನೆ ಬಿಂಬಿಸುವ ಹಬ್ಬ ಓಣಂ ಹಬ್ಬ-ಡಾ.ಪ್ರದೀಪ್ ಕುಮಾರ್

ಪುತ್ತೂರು: ಕೇರಳದಲ್ಲಿ ಓಣಂ ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತಿದ್ದು ಪ್ರಸ್ತುತ ಇದು ಜಗತ್ತಿನಾದ್ಯಂತ ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ. ಓಣಂ ಹಬ್ಬವನ್ನು ಎಲ್ಲಾ ಜಾತಿ, ಧರ್ಮದವರು ಯಾವುದೇ ಬೇಧಭಾವವಿಲ್ಲದೆ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದು ಹಬ್ಬದ ಸಂಕೇತವಾಗಿರುವ ಪೂಕಳಂ ಅನ್ನು ಬಿಡಿಸಿ ಒಂಭತ್ತು ದಿನಗಳಲ್ಲೂ ಆಚರಿಸುವ ಮೂಲಕ ಸಹೋದರತ್ವ ಭಾವನೆಯನ್ನು ತೋರಿಸಿಕೊಡುತ್ತದೆ ಎಂದು ಡಾ.ಪ್ರದೀಪ್ ಕುಮಾರ್ಸ್ ಹಾಸ್ಪಿಟಾಲಿಟಿ ಆಫ್ ಆಯುರ್ವೇದ ಇದರ ನಿರ್ದೇಶಕ ಹಾಗೂ ಮುಖ್ಯ ಫಿಸಿಶೀಯನ್ ಡಾ.ಪ್ರದೀಪ್ ಕುಮಾರ್‌ರವರು ಹೇಳಿದರು.


ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಸೆ.21ರಂದು ಸಂಭ್ರಮದ ಓಣಂ ಹಬ್ಬಾಚರಣೆಯಾಗಿದ್ದು, ಈ ಹಬ್ಬಾಚರಣೆಯ ಪ್ರಯುಕ್ತ ಕಾಲೇಜು ಪ್ರವೇಶ ದ್ವಾರ ಬಳಿ ನಿರ್ಮಿಸಲಾದ ‘ಪೂಕಳಂ’ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಈ ಹಬ್ಬವು ಸಿಹಿ, ಉಪ್ಪು, ಖಾರ, ಹುಳಿ, ಕಷಾಯ ಹೀಗೆ ಆರು ತರಹದ ರಸಗಳು ಸೇರಿ ಆರೋಗ್ಯ ಸಂಪೂರ್ಣತೆಯನ್ನು ಪಡೆಯುತ್ತದೆ ಎಂಬುದು ಇತಿಹಾಸ ಹೇಳುತ್ತದೆ. ಹೇಗೆ ಶಾಲೆಯಲ್ಲಿ ಎಲ್ಲರೂ ಒಂದೇ ಎಂಬ ಭಾವನೆಯಿಂದ ಸಮವಸ್ತ್ರವಿದೆಯೋ ಹಾಗೆಯೇ ಈ ಓಣಂ ಹಬ್ಬದಲ್ಲಿ ಕೂಡ ಎಲ್ಲರೂ ಒಂದೇ ತೆರನಾದ ಸಮವಸ್ತ್ರವನ್ನು ಧರಿಸಿ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಎತ್ತಿ ತೋರಿಸಿಕೊಡುತ್ತದೆ ಎಂದರು.


ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವು ಸಾಗಬೇಕು-ಜಯಂತ್ ನಡುಬೈಲು:
ಅಧ್ಯಕ್ಷತೆ ವಹಿಸಿದ ಅಕ್ಷಯ ಕಾಲೇಜಿನ ಚೇರ್‌ಮ್ಯಾನ್ ಜಯಂತ್ ನಡುಬೈಲು ಮಾತನಾಡಿ, ದೇವರ ನಾಡು ನೆರೆಯ ಕೇರಳ ರಾಜ್ಯದ ಈ ಹಬ್ಬವು ತುಳುನಾಡಿನಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ಈ ಓಣಂ ಹಬ್ಬವನ್ನು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯ ಮೂಲಕ ಈಗಾಗಲೇ ತೋರ್ಪಡಿಸಿದ್ದಾರೆ. ಕೇವಲ ಓದು ಬರಹ ಮಾತ್ರವಲ್ಲ, ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವುದು ಮುಖ್ಯವಾಗಿದೆ. ಮಕ್ಕಳಿಗೆ ನಮ್ಮ ಸಂಸ್ಕೃತಿಯ ಬಗ್ಗೆ, ನಮ್ಮ ನೆರೆಯ ರಾಜ್ಯದ ಬಗ್ಗೆ, ನಮ್ಮ ನಾಡಿನ ಬಗ್ಗೆ ಪ್ರತಿಯೊಂದು ತಿಳಿಯುವವರಾಗಬೇಕು ಎಂದ ಅವರು ನಮ್ಮ ಹಿಂದಿನ ಕಾಲದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವು ಸಾಗಬೇಕು ಮಾತ್ರವಲ್ಲ ಜೀವನದಲ್ಲಿ ಸಫಲವಾಗುತ್ತಾರೆ. ಅಕ್ಷಯ ಕಾಲೇಜು ಓದಿನೊಂದಿಗೆ ಸಾಂಸ್ಕೃತಿಕ ಅಭಿಯಾನವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಯಾಕೆಂದರೆ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವುದಾಗಿದೆ ಎಂದರು.


ಎಲ್ಲಾ ಮತದವರು ಸೇರುವ ಆರಾಧನಾ ಕ್ಷೇತ್ರವೇ ವಿದ್ಯಾದೇಗುಲ-ಗೋಪಾಲಕೃಷ್ಣ ಕುಲಾಲ್:
ಮುಖ್ಯ ಅತಿಥಿ, ಬದಿಯಡ್ಕ ಉಪ್ಲೇರಿ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಂತಿಚ್ಚಾಲ್ ಮಾತನಾಡಿ,ಹಿಂದು ಧರ್ಮದಲ್ಲಿ ದೇವಸ್ಥಾನ, ಮುಸ್ಲಿಂ ಧರ್ಮದಲ್ಲಿ ಮಸೀದಿ, ಕ್ರೈಸ್ತ ಧರ್ಮದಲ್ಲಿ ಚರ್ಚ್ ಆರಾಧನಾ ಕ್ಷೇತ್ರಗಳಾಗಿವೆ. ಆದರೆ ಎಲ್ಲಾ ಮತದವರು ಸೇರುವ ಆರಾಧನಾ ಕ್ಷೇತ್ರವೆಂದರೆ ಅದು ವಿದ್ಯಾದೇಗುಲವಾಗಿದೆ. ಇಲ್ಲಿ ಜಾತಿ-ಮತ-ಭೇದವಿಲ್ಲದೆ ಇಲ್ಲಿ ಎಲ್ಲರೂ ಒಟ್ಟು ಸೇರಿ ತಾಯಿ ವಿದ್ಯಾಮಾತೆಯನ್ನು ಪೂಜಿಸಲ್ಪಡುತ್ತದೆ. ಕೇರಳದ ಸಂಸ್ಕೃತಿಯ ರಾಜಧಾನಿ ತ್ರಿಶೂರ್. ಇಲ್ಲಿ ಶಿಸ್ತುಬದ್ಧವಾಗಿ ನಡೆಯುವ ರಾಷ್ಟ್ರೀಯ ಹಬ್ಬವಾದ ಓಣಂ ಹಬ್ಬವನ್ನು ಈ ಅಕ್ಷಯ ಕಾಲೇಜಿನಲ್ಲಿ ಆಚರಿಸುತ್ತಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ ಎಂದು ಹೇಳಿ ಒಣಂ ಹಬ್ಬದ ಮಹತ್ವದ ಬಗ್ಗೆ ವಿವರಿಸಿದರು.


ಅನೇಕ ಕ್ಷೇತ್ರದಲ್ಲಿದ್ದ ನನಗೆ ಕೊನೆಗೆ ಕೈ ಹಿಡಿದಿದ್ದು ರಂಗಭೂಮಿ-ಸುಂದರ್ ರೈ ಮಂದಾರ:
ಗೌರವ ಅತಿಥಿ, ತುಳು ರಂಗಭೂಮಿ ನಟ, ರಂಗ್‌ದ ರಾಜೆ ಸುಂದರ್ ರೈ ಮಂದಾರ ಮಾತನಾಡಿ, ತುಳು ರಂಗಭೂಮಿಯಲ್ಲಿ ನಿಮ್ಮೆಲ್ಲರ ಆಶೀರ್ವಾದದಿಂದ ನಾನಿಂದು ಬದುಕು ಕಟ್ಟಿಕೊಂಡಿದ್ದೇನೆ. ಪುತ್ತೂರಿನಲ್ಲಿ ಇಂದು ನೆರೆಯ ಕೇರಳವನ್ನು ನೋಡಿದೆ. ಕೇರಳ ಸಂಸ್ಕೃತಿಯನ್ನು ಅನಾವರಣಗೊಳಿಸುವ ಈ ಓಣಂ ದಿನಾಚರಣೆಯನ್ನು ಕಣ್ಣಾರೆ ಕಂಡು ಖುಶಿ ಪಟ್ಟುಕೊಳ್ಳುವ ಅವಕಾಶ ನನಗೆ ಬಂದೊದಗಿರುವುದು ಭಾಗ್ಯವೇ ಸರಿ. ಉದ್ಯಮದೊಂದಿಗೆ ಶೈಕ್ಷಣಿಕ ವಲಯದಲ್ಲೂ ಕೈಯಾಡಿಸುವ ಮೂಲಕ ಕಾಲೇಜಿನ ಚೇರ್‌ಮ್ಯಾನ್ ಜಯಂತ್‌ರವರು ಓರ್ವ ಯಶಸ್ವಿ ಸಾಧಕರಾಗಿದ್ದಾರೆ ಎಂದ ಅವರು ಅನೇಕ ಕ್ಷೇತ್ರದಲ್ಲಿದ್ದ ನನಗೆ ಕೊನೆಗೆ ಕೈ ಹಿಡಿದಿದ್ದು ರಂಗಭೂಮಿ. ತನಗೆ ಸಿನೆಮಾದಲ್ಲಿ ಅಭಿನಯಿಸುವ ಅವಕಾಶ ಇತ್ತಾದರೂ ಕೇವಲ ತನ್ನ ಓರ್ವನ ಬದುಕನ್ನು ನೋಡದೆ ನನ್ನೊಂದಿಗೆ 22 ಮಂದಿ ಕಲಾವಿದರ ಬದುಕಿಗಾಗಿ ರಂಗಭೂಮಿಯನ್ನು ನೆಚ್ಚಿಕೊಂಡಿದ್ದೇನೆ ಎಂದು ಅವರು ಹೇಳಿದರು.


ವೇದಿಕೆಯಲ್ಲಿ ಅಕ್ಷಯ ಕಾಲೇಜಿನ ವ್ಯವಸ್ಥಾಪಕಿ ನಿರ್ದೇಶಕಿ ಕಲಾವತಿ ಜಯಂತ್, ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ಸಾಂಸ್ಕೃತಿಕ ವೇದಿಕೆಯ ಸಂಯೋಜಕಿ ಪ್ರಭಾವತಿ, ಉದ್ಯಮಿ ಜಯಕುಮಾರ್ ನಾಯರ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೀವನ್‌ರವರು ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲ ಸಂಪತ್ ಪಿ.ಪಕ್ಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಥಮ ಬಿಕಾಂನ ಸೂರ್ಯ ಸ್ವಾಗತಿಸಿದರು. ಪ್ರಥಮ ಬಿಕಾಂನ ಕಾವ್ಯ ಗಣೇಶ್ ಪ್ರಾರ್ಥಿಸಿದರು. ಕನ್ನಡ ವಿಭಾಗದ ಉಪನ್ಯಾಸಕ ಹರಿಶ್ಚಂದ್ರ, ಪ್ರಥಮ ಬಿಕಾಂ ನ ಉದಿತ್, ಅಂತಿಮ ಫ್ಯಾಷನ್ ಡಿಸೈನ್‌ನ ಮಧುರಾ ಅತಿಥಿಗಳ ಪರಿಚಯ ಮಾಡಿದರು. ಬಿಸಿಎ ವಿಭಾಗದ ಪ್ರತೀಕ್ಷಾ ವಂದಿಸಿದರು. ವಿದ್ಯಾರ್ಥಿನಿ ಅರ್ಚನಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸ್ವಾಗತ, ಪ್ರಾರ್ಥನೆ, ನಿರೂಪಣೆ ಎಲ್ಲವೂ ಮಲಯಾಳಂ ಭಾಷೆಯಲ್ಲಿ ನಿರ್ವಹಿಸಲಾಗಿರುವುದು ವಿಶೇಷವಾಗಿದೆ.

ಸನ್ಮಾನ..
ತುಳು ರಂಗಭೂಮಿ ಹಾಗೂ ತುಳು ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ರಂಗ್‌ದ ರಾಜೇ ಖ್ಯಾತಿಯ ಸುಂದರ್ ರೈ ಮಂದಾರರವರನ್ನು ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಆಕರ್ಷಕ ಮೆರವಣಿಗೆ..
ಸಭಾ ಕಾರ್ಯಕ್ರಮದ ಆರಂಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು, ಉಪನ್ಯಾಸಕ, ಆಡಳಿತ ವರ್ಗದವರು ಓಣಂ ಹಬ್ಬದ ವೈಶಿಷ್ಟ್ಯತೆಯನ್ನು ಸಾರುವ ಸಮವಸ್ತ್ರವನ್ನು ಧರಿಸುತ್ತಾ ಹಾಗೂ ಓಣಂ ಹಬ್ಬದ ಬ್ಯಾನರಿನೊಂದಿಗೆ ಕಾಲೇಜು ಆವರಣದಿಂದ ಸಂಪ್ಯ ಪೊಲೀಸ್ ಠಾಣೆಯವರೆಗೆ ಬಳಿಕ ಅಲ್ಲಿಂದ ಪುನಹ ಕಾಲೇಜಿಗೆ ಆಕರ್ಷಕ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಹಾಗೂ ಸಭಾ ವೇದಿಕೆಯಲ್ಲಿ ಓಣಂ ಹಬ್ಬವನ್ನು ಸಾರುವ ವಾಮನ ಹಾಗೂ ಬಲಿಚಕ್ರವರ್ತಿ ವೇಷಭೂಷಣ, ಮೋಹಿನಿಯಾಟ್ಟಂ, ಕಥಕ್ಕಳಿ, ಕೆದಿಲ ಎಸ್‌ಆರ್‌ಕೆ ಚೆಂಡೆ, ಇಡೀ ಮೆರವಣಿಗೆಯನ್ನು ಸೆರೆ ಹಿಡಿಯುವ ಡ್ರೋನ್ ಕ್ಯಾಮೆರಾ ಗಮನ ಸೆಳೆಯಿತು.

ಓಣಂ ಸ್ಪರ್ಧೆ..
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಓಣಂ ಸಾರುವ ಪೂಕಳಂ ಚಿತ್ರ ಬಿಡಿಸುವಿಕೆ, ಸಿಹಿ ತಿಂಡಿ ಹಾಗೂ ಖಾರ ತಿಂಡಿ ತಯಾರಿಕೆ ಸ್ಪರ್ಧೆಯನ್ನು ತರಗತಿವಾರು ಏರ್ಪಡಿಸಲಾಗಿತ್ತು. ಪೂಕಳಂ ಸ್ಪರ್ಧೆಯಲ್ಲಿ ಅಂತಿಮ ಫ್ಯಾಶನ್ ಡಿಸೈನಿಂಗ್ ವಿಭಾಗ(ಪ್ರ), ಪ್ರಥಮ ಫ್ಯಾಶನ್ ಡಿಸೈನಿಂಗ್(ದ್ವಿ), ದ್ವಿತೀಯ ಫ್ಯಾಶನ್ ಡಿಸೈನಿಂಗ್(ತೃ), ಸಿಹಿ ತಿಂಡಿ ತಯಾರಿಕೆಯಲ್ಲಿ ಪ್ರಥಮ ಬಿಎಚ್‌ಎಸ್‌ನ ಚೇತನ್(ಪ್ರ), ಪ್ರಥಮ ಬಿಎಯ ಹಶೀಮ್ ಮೊಹಮ್ಮದ್(ದ್ವಿ), ಪ್ರಥಮ ಬಿಎಯ ಹರಿಪ್ರಸಾದ್(ತೃ), ಖಾರ ತಿಂಡಿ ತಯಾರಿಕೆಯಲ್ಲಿ ಪ್ರಥಮ ಬಿಎಯ ಹರಿಪ್ರಸಾದ್(ಪ್ರ), ದ್ವಿತೀಯ ಬಿಎಸ್ಸಿಯ ವತ್ಸಲಾ ಬಿ(ದ್ವಿ), ದ್ವಿತೀಯ ಇಂಟೀರಿಯರ್ ಡಿಸೈನ್‌ನ ರಂಜಿತ್(ತೃ), ಪ್ರೋತ್ಸಾಹಕ ಬಹುಮಾನವಾಗಿ ಪ್ರಥಮ ಬಿಕಾಂ, ಅಂತಿಮ ಬಿಕಾಂ, ದ್ವಿತೀಯ ಇಂಟೀರಿಯರ್ ಡಿಸೈನ್

LEAVE A REPLY

Please enter your comment!
Please enter your name here