309 ಕೋಟಿ ರೂ. ವ್ಯವಹಾರ, 1.06 ಕೋಟಿ ರೂ. ಲಾಭ
ಪಾಣಾಜೆ: ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್ ಬ್ರಹ್ಮರಗುಂಡರವರ ಅಧ್ಯಕ್ಷತೆಯಲ್ಲಿ ಸೆ. 20 ರಂದು ಸಂಘದ ಸಭಾಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್‌ರವರು ಮಾತನಾಡಿ ʻಸಂಘವು ಪ್ರಸ್ತುತ 89ನೇ ವರ್ಷದಲ್ಲಿ ಮುನ್ನಡೆಯುತ್ತಿದ್ದು, ಪಾಣಾಜೆ ಮತ್ತು ನಿಡ್ಪಳ್ಳಿ 2ಗ್ರಾಮಗಳ 3,157 ʻಎʼ ತರಗತಿ ಸದಸ್ಯರನ್ನು ಹೊಂದಿದೆ. ವರ್ಷಾಂತ್ಯಕ್ಕೆ 40.52 ಕೋಟಿ ರೂ. ಠೇವಣಿ ಸಂಗ್ರಹಿಸಿ, 55.87 ಕೋಟಿ ಸಾಲ ಹೊರಬಾಕಿ ಹೊಂದಿದೆ. 309.11 ಕೋಟಿ ರೂ. ವ್ಯವಹಾರ ಮಾಡಿ ರೂ. 1,06,51,496 ಲಾಭ ಗಳಿಸಿರುತ್ತದೆ. ಸಂಘದ ಕಾರ್ಯವ್ಯಾಪ್ತಿಯಲ್ಲಿ ನೀಡಿರುವ ಗಣನೀಯ ಸೇವೆಯಲ್ಲಿ ಪರಿಗಣಿಸಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಪ್ರೋತ್ಸಾಹಕ ಪ್ರಶಸ್ತಿ ಲಭಿಸಿದೆ. ಸಂಘದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಿದ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮತ್ತು ನಿರ್ದೇಶಕರುಗಳಿಗೆ, ಸಂಘದ ಎಲ್ಲಾ ಸದಸ್ಯರಿಗೆ, ನಿರ್ದೇಶಕರುಗಳಿಗೆ, ಸಿಬಂದಿಗಳಿಗೆ, ವಲಯ ಮೇಲ್ವಿಚಾರಕರಿಗೆ, ಲೆಕ್ಕಪರಿಶೋಧಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆʼ ಎಂದರು. ವರದಿ ಸಾಲಿನಲ್ಲಾದ ಲಾಭವನ್ನು ಪರಿಗಣಿಸಿ ಸದಸ್ಯರಿಗೆ ಶೇ. 12 ಡಿವಿಡೆಂಡ್ ನೀಡಲಾಗುವುದು ಎಂದು ಅಧ್ಯಕ್ಷರು ಘೋಷಿಸಿದರು.
ಸದಸ್ಯರಿಂದ ಸಲಹೆ, ಸೂಚನೆ:
ಮಹಾಸಭೆಯಲ್ಲಿ ಹಲವು ವಿಷಯಗಳ ಬಗ್ಗೆ ಸದಸ್ಯರು ಆಡಳಿತ ಮಂಡಳಿಗೆ ಸಲಹೆ ಸೂಚನೆ ನೀಡಿದರು. ಆಡಳಿತ ವರದಿಯಲ್ಲಿದ್ದ ಕೆಲವೊಂದು ವಿಷಯಗಳ ಬಗ್ಗೆ ಚರ್ಚೆ ನಡೆದು, ಕಾನೂನಾತ್ಮಕ ಬದಲಾವಣೆಗಳ ಬಗ್ಗೆಯೂ ಸೂಚನೆಗಳನ್ನು ಬರೆದುಕೊಳ್ಳಲಾಯಿತು.
ಸಂಘದ ಸದಸ್ಯತನವು 3,035 ರಿಂದ 3,157 ಕ್ಕೆ ಏರಿಕೆಯಾಗಿದೆ. ಪಾಲು ಬಂಡಬಾಳದಲ್ಲಿ ಕಳೆದ ಸಾಲಿಗಿಂತ ಶೇ. 8.20 ವೃದ್ದಿಯಾಗಿದೆ. ಠೇವಣಾತಿಯಲ್ಲಿ ಕಳೆದ ವರ್ಷಕ್ಕಿಂತ ಶೇ. 10.74 ಹೆಚ್ಚಳ, ವರ್ಷಾಂತ್ಯಕ್ಕೆ ಠೇವಣಿಗಳ ಮೇಲಿನ ಬಡ್ಡಿ ರೂ. 1,07,91,895 ನ್ನು ಕಾಯ್ದಿರಿಸಲಾಗಿದೆ. ಸಂಘವು ವರ್ಷಾಂತ್ಯಕ್ಕೆ ರೂ. 2.23 ಕೋಟಿ ನಿಧಿ ಹೊಂದಿದ್ದು, 1.28 ಕೋಟಿ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಕ್ಷೇಮ ನಿಧಿ ಹೂಡಿಕೆ ಮಾಡಲಾಗಿದೆ. ಈ ಸಾಲಿನಲ್ಲಿ ರೂ. 27.55 ಲಕ್ಷ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಸಾಲ ಪಡೆಯಲಾಗಿದೆ. ಸದಸ್ಯರ ಹೊರ ಬಾಕಿ ಸಾಲವು ರೂ. 55.87 ಕೋಟಿ ಇದ್ದು, ವರದಿ ಸಾಲಿನಲ್ಲಿ ರೂ. 45.66 ಕೋಟಿ ಸಾಲ ವಿತರಿಸಲಾಗಿದೆ. ರೂ. 44.16 ಕೋಟಿ ಸಾಲ ಮರುಪಾವತಿಯಾಗಿರುತ್ತದೆ. ವರದಿ ಸಾಲಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ರೂ. 2.39 ಕೋಟಿ ಬಡ್ಡಿ ಸಹಾಯಧನ ಬಂದಿರುತ್ತದೆ. ವರ್ಷಾಂತ್ಯಕ್ಕೆ ವಿವಿಧ ಆರ್ಥಿಕ ಸಂಸ್ಥೆಗಳಲ್ಲಿ ಠೇವಣಿ ಹಾಗೂ ಪಾಲುಗಳಲ್ಲಿ ರೂ. 14.16 ಕೋಟಿ ಹೂಡಿಕೆ ಮಾಡಲಾಗಿದೆ. ಹೂಡಿಕೆಯಲ್ಲಿ ಶೇ. 5.09 ಪ್ರಗತಿ ಕಂಡಿದೆ.
ನವೋದಯ ಸ್ವ-ಸಹಾಯ ಗುಂಪುಗಳು:
ಸಂಘದ ಕಾರ್ಯವ್ಯಾಪ್ತಿಯಲ್ಲಿ ಒಟ್ಟು 141 ನವೋದಯ ಸ್ವ-ಸಹಾಯ ಗುಂಪುಗಳಿವೆ. ಇದರ ಮೂಲಕವೂ ಶೇ. 98.45 ಸಾಲ ಮರುಪಾವತಿಯಾಗಿರುತ್ತದೆ.
ಕಮಿಶನ್:
ವರದಿ ಸಾಲಿನಲ್ಲಿ ಕ್ಯಾಂಪ್ಕೋ ಸಂಸ್ಥೆಯ ಮೂಲಕ ಪಾಣಾಜೆ ಶಾಖೆಯಲ್ಲಿ ಅಡಿಕೆ ಮತ್ತು ಕೊಕ್ಕೋ ಖರೀದಿಯಲ್ಲಿ ಸಂಘಕ್ಕೆ ರೂ. 35,505 ಕಮಿಷನ್ ಬಂದಿರುತ್ತದೆ.
ಬೆಳೆವಿಮೆ:
ವರದಿ ಸಾಲಿನಲ್ಲಿ ಸಂಘದ 597 ರೈತ ಸದಸ್ಯರು ಬೆಳೆವಿಮೆ ಯೋಜನೆಯಲ್ಲಿ ನೊಂದಾಯಿಸಿಕೊಂಡಿದ್ದಾರೆ.
ಯಶಸ್ವಿನಿ:
ವರದಿ ಸಾಲಿನಲ್ಲಿ 1495 ಮಂದಿ ರೈತರು ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯಲ್ಲಿ ನೋಂದಾಯಿಸಿಕೊಂಡಿರುತ್ತಾರೆ.
ವ್ಯಾಪಾರ ಲಾಭ:
ವರದಿ ಸಾಲಿನಲ್ಲಿ ರೂ. 1.10 ಕೋಟಿ ಮೌಲ್ಯದ ಸರಕು ಮಾರಾಟ ಮಾಡಲಾಗಿದ್ದು, 2.12 ಲಕ್ಷ ವ್ಯಾಪಾಲ ಲಾಭ ಗಳಿಸಲಾಗಿದೆ.
ಮುಂದಿನ ಯೋಜನೆಗಳು:
ಸಂಘವು ರೂ. 45 ಕೋಟಿ ಠೇವಣಿ ಹೊಂದುವುದು, ರೂ. 60 ಕೋಟಿಯಷ್ಟು ರೈತರಿಗೆ ಸಾಲ ನೀಡುವುದು ಮತ್ತು ಶೇ. 100 ಸಾಲ ವಸೂಲಾತಿ ಮಾಡುವ ಕಾರ್ಯ ಯೋಜನೆ ಇರಿಸಿಕೊಂಡಿದೆ ಎಂದು ಅಧ್ಯಕ್ಷ ಪದ್ಮಾಭ ಬೋರ್ಕರ್‌ರವರು ಹೇಳಿದರು.
ಮಹಾಸಭೆಯಲ್ಲಿ ಉಪಾಧ್ಯಕ್ಷ ಡಾ. ಅಖಿಲೇಶ್ ಪಿ.ಎಂ. ಸದಸ್ಯರ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದರು. ನಿರ್ದೇಶಕರಾದ ನಾರಾಯಣ ರೈ ಕೊಪ್ಪಳ, ತಿಮ್ಮಣ್ಣ ರೈ ಆನಾಜೆ, ರವೀಂದ್ರ ಭಂಡಾರಿ ಬೈಂಕ್ರೋಡು, ಕುಮಾರ ನರಸಿಂಹ ಬುಳೆನಡ್ಕ, ರವಿಶಂಕರ ಶರ್ಮ ಬೊಳ್ಳುಕಲ್ಲು, ರಾಮ ನಾಯ್ಕ ಜರಿಮೂಲೆ, ಪ್ರೇಮ ಬರೆಂಬೊಟ್ಟು, ಗೀತಾ ಆರ್. ರೈ ಪಡ್ಯಂಬೆಟ್ಟು, ಸಂಜೀವ ಕೀಲಂಪಾಡಿ ಉಪಸ್ಥಿತರಿದ್ದರು.
ಸಂಘದ ಸದಸ್ಯರಾದ ಕೆಎಂಎಫ್ ನಿರ್ದೇಶಕರೂ ಆದ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್, ಸಂಘದ ಕಾನೂನು ಸಲಹೆಗಾರ ನ್ಯಾಯವಾದಿ ಕೃಪಾಶಂಕರ್ ಅರ್ಧಮೂಲೆ, ಬಾಲಕೃಷ್ಣ ಭಟ್ ನೆಲ್ಲಿತ್ತಿಮಾರ್, ಹರೀಶ್ ಬೋರ್ಕರ್, ಸರ್ವೋತ್ತಮ ಬೋರ್ಕರ್, ಶಂಕರ ನಾರಾಯಣ ಭಟ್ ಕೊಂದಲ್ಕಾನ, ಸದಾಶಿವ ರೈ ಸೂರಂಬೈಲು, ಈಶ್ವರ ಭಟ್ ಕಡಂದೇಲು, ಪಿ.ಜಿ. ಶಂಕರನಾರಾಯಣ ಭಟ್, ನಿಡ್ಪಳ್ಳಿ ಗ್ರಾ.ಪಂ. ಅಧ್ಯಕ್ಷ ವೆಂಕಟ್ರಮಣ ಬೋರ್ಕರ್, ರಾಮಯ್ಯ ರೈ ನುಳಿಯಾಲು, ನಾಗೇಶ್ ಗೌಡ ಪುಳಿತ್ತಡಿ ಮತ್ತಿತರರು ವಿವಿಧ ಸಲಹೆ ಸೂಚನೆ ನೀಡಿದರು.
ಬೀಳ್ಕೊಡುಗೆ ಸಮಾರಂಭ
ಸಂಘದ ಕಚೇರಿ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿ ಇತ್ತೀಚೆಗೆ ನಿವೃತ್ತರಾದ ಜಿ. ಪದ್ಮನಾಭ ಮೂಲ್ಯರವರಿಗೆ ಸಂಘದ ವತಿಯಿಂದ ವಿದಾಯ ಸಮಾರಂಭ ಮಹಾಸಭೆಯ ಬಳಿಕ ಜರಗಿತು. ಪದ್ಮನಾಭ ಮತ್ತು ಜಯಂತಿ ದಂಪತಿಯನ್ನು ಸಂಘದ ಅಧ್ಯಕ್ಷರು ಮತ್ತು ನಿರ್ದೇಶಕರು ಸನ್ಮಾನಿಸಿದರು. ಸಿಬಂದಿಗಳ ಪರವಾಗಿಯೂ ದಂಪತಿಯನ್ನು ಗೌರವಿಸಲಾಯಿತು.
ಸಿಇಒ ಹರೀಶ್ ಕುಮಾರ್ ರವರು ಸ್ವಾಗತಿಸಿ, ಲೆಕ್ಕಪತ್ರ ಮಂಡಿಸಿದರು. ಗುಮಾಸ್ತೆ ತೃಪ್ತಿ ಬಿ. ಪ್ರಾರ್ಥಿಸಿದರು. ಲೆಕ್ಕಿಗ ಪ್ರದೀಪ್ ರೈ ಎಸ್. ವಂದಿಸಿದರು. ನಿಡ್ಪಳ್ಳಿ ಶಾಖಾ ವ್ಯವಸ್ಥಾಪಕ ಸಂದೇಶ್ ಬಿ., ಸಿಬಂದಿಗಳಾದ ಕೃಷ್ಣಕುಮಾರ್ ಎಂ., ಅನುರಾಧ ಕೆ., ಬಿ. ಸುಧಾಕರ ಭಟ್, ಪದ್ಮನಾಭ ಮೂಲ್ಯ, ಎ. ರಮೇಶ ನಾಯ್ಕ, ಚಿತ್ರಕುಮಾರ್, ಅವಿನಾಶ್, ಹರೀಶ್, ಜಯಶ್ರೀ ರವರು ವಿವಿಧ ರೀತಿಯಲ್ಲಿ ಸಹಕರಿಸಿದರು.