





ಆಲಂಕಾರು: ಬಿ.ಜೆ.ಪಿ ಸುಳ್ಯಮಂಡಲ ಒ.ಬಿ.ಸಿ ಮೋರ್ಚಾ ವತಿಯಿಂದ ಗೋಳಿತ್ತೋಟ್ಟು ಸಿದ್ದಿ ವಿನಾಯಕ ಭಜನ ಮಂದಿರದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಸುಳ್ಯ ಮಂಡಲ ಒ.ಬಿ.ಸಿ ಮೋರ್ಚಾದ ಪ್ರದಾನ ಕಾರ್ಯದರ್ಶಿ ಸದಾನಂದ ಆಚಾರ್ಯರವರು ಸದಸ್ಯತ್ವ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು.ಕೊಣಾಲು ಬಿ.ಜೆ.ಪಿ ಶಕ್ತಿ ಕೇಂದ್ರದ ಪ್ರಮುಖ್ ಜಯಂತ ಅಂಬರಾಜೆ ಸ್ವಾಗತಿಸಿ, ಮಂಡಲ ಬಿ.ಜೆ.ಪಿ ಒ.ಬಿ.ಸಿ ಮೋರ್ಚದ ಸದಸ್ಯೆ ಅನಿತಾ ಪ್ರಕಾಶ್ ಧನ್ಯವಾದ ಸಮರ್ಪಿಸಿದರು. ಬಿ.ಜೆ.ಪಿ ಜಿಲ್ಲಾ ಒ.ಬಿ.ಸಿ ಮೋರ್ಚದ ಸದಸ್ಯೆ ಗಂಗರತ್ನಾ,ಮಂಡಲ ಒ.ಬಿ.ಸಿ ಸಮಿತಿ ಸದಸ್ಯ ಪುರಂದರ .ಕೆ ,ಗೋಳಿತ್ತೋಟ್ಟು ಗ್ರಾ.ಪಂ ಉಪಾಧ್ಯಕ್ಷರಾದ ಬಾಬು ಪೂಜಾರಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು







