ರೂ.24,40ಕೋಟಿ ವ್ಯವಹಾರ, ರೂ.8,52ಲಕ್ಷ ಲಾಭ, ಶೇ.7.5 ಡಿವಿಡೆಂಡ್
ಪುತ್ತೂರು: ಬಪ್ಪಳಿಗೆ ರಾಧಾಕೃಷ್ಣ ಮಂದಿರ ಬಳಿಯಲ್ಲಿರುವ ಮಾಜಿ ಸೈನಿಕರ ಭವನದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಷಾತ್ರೀಯ ಸೌಹಾರ್ದ ಸಹಕಾರಿಯ 2023-24ನೇ ಸಾಲಿನಲ್ಲಿ ರೂ.24,40,33,187.72 ವಾರ್ಷಿಕ ವ್ಯವಹಾರ ನಡೆಸಿ ರೂ.8,52,750.67 ಲಾಭಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.7.5 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಉಮೇಶ್ ಕೆ ವಾರ್ಷಿಕ ಮಹಾಸಭೆಯಲ್ಲಿ ತಿಳಿಸಿದರು.
ಸಭೆಯು ಸೆ.22ರಂದು ಮಾಜಿ ಸೈನಿಕರ ಭವನದ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಆರು ವರ್ಷಗಳ ಹಿಂದೆ ಪ್ರಾರಂಭಗೊಂಡಿರುವ ನಮ್ಮ ಸಂಘವು ವರದಿ ವರ್ಷದಲ್ಲಿ 973 ಸದಸ್ಯರಿಂದ ರೂ.52,90,700 ಪಾಲು ಬಂಡವಾಳ ಹಾಗೂ ರೂ.3,13,43,225 ವಿವಿಧ ಠೇವಣಿಗಳನ್ನು ಹೊಂದಿದೆ. ರೂ.2,61,68,530ನ್ನು ವಿವಿಧ ರೂಪದ ಸಾಲಗಳನ್ನು ನೀಡಲಾಗಿದೆ. ಸಾಲ ವಸೂಲಾತಿಯಲ್ಲಿ ಶೇ.96.71 ಸಾಧನೆ ಮಾಡಿದೆ. ಸಂಘ ಗಳಿಸಿದ ವಾರ್ಷಿಕ ಲಾಭಾಂಶವನ್ನು ಉಪ ನಿಬಂಧನೆಯಂತೆ ವಿಂಗಡಿಸಲಾಗಿದೆ ಎಂದರು.
ಗೌರವಾರ್ಪಣೆ:
ಸಂಘದಲ್ಲಿ ಅತೀ ಹೆಚ್ಚು ವ್ಯವಹಾರ ಮಾಡಿದ ಸದಸ್ಯರಾದ ಸುಬ್ರಹ್ಮಣ್ಯ ಕೆಮ್ಮಿಂಜೆ, ವೆಂಕಟ್ರಮಣ ನಾೖಕ್, ಅಶ್ರಫ್ ಅಳಕೆ, ನಿತ್ಯನಿಧಿ ಸಂಗ್ರಹಕರಾದ ಅನಂತಕೃಷ್ಣ ರಾವ್ ಕೆ.ಎಸ್., ಗಗನ್ ಕುಮಾರ್ ಯು, ಸೂರಜ್ನಂದ ಕೆ., ಮಾಜಿ ವೃತ್ತಿಪರ ನಿರ್ದೇಶಕಿ ಪುಷ್ಪಲತಾ, ಮಾಜಿ ನಿರ್ದೇಶಕಿ ಚಂದ್ರಕಲಾ ಹಾಗೂ ವಾಹನ ಮೌಲ್ಯ ಮಾಪಕ ನವನೀತ್ ಬಜಾಜ್ರವರನ್ನು ಗೌರವಿಸಲಾಯಿತು.
ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ, ಸುಬ್ರಹ್ಮಣ್ಯ ಕೆಮ್ಮಿಂಜೆ, ಅರುಣ್ ಕುಮಾರ್, ನವೀನ್ಚಂದ್ರ, ಮಾಧವ ಎ., ಯಶವಂತ ಬಿ.ಎಮ್., ವಾಣಿಸುರೇಶ್ ಕುಮಾರ್ ಹಾಗೂ ವಿದ್ಯಾಲಕ್ಷ್ಮೀ ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುಷ್ಪಲತಾ ಪ್ರಾರ್ಥಿಸಿದರು. ವಿದ್ಯಾ ಬೇಕಲ್ ಸ್ವಾಗತಿಸಿದರು. ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಞಾನೇಶ್ವರಿ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕ ಜಿತೇಂದ್ರ ವಂದಿಸಿದರು.