ಕಾವು: ಶೂನ್ಯ ಬಡ್ಡಿದರದ ಬೆಳೆ ಸಾಲ ಪಡೆದಿರುವ ಸಂಘದ ಸದಸ್ಯರ ಕುಟುಂಬದ ಅನುಕೂಲಕ್ಕಾಗಿ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಳೆದ 4 ವರ್ಷದಿಂದ ಅಪಘಾತ ವಿಮಾ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ತಿಳಿಸಿದ್ದಾರೆ.
20ರ ವಯೋಮಿತಿಯೊಳಗಿನ ಸಂಘದಿಂದ ಬೆಳೆಸಾಲ ಪಡೆದ ಸದಸ್ಯರಿಗೆ ರೂ.3 ಲಕ್ಷದವರೆಗೆ ವಿಮಾ ಸೌಲಭ್ಯ ಕಲ್ಪಿಸಲಾಗಿದ್ದು, ಸಾಲಗಾರ ಸದಸ್ಯರು ಆಕಸ್ಮಿಕ ಅವಘಡದಲ್ಲಿ ಮೃತಪಟ್ಟಲ್ಲಿ ಅವರ ಸಾಲದ ಮೊತ್ತವನ್ನು ವಿಮಾ ಕಂಪೆನಿಯು ಭರಿಸಲಿದೆ. ಮತ್ತು ವಿಮಾ ಮೊತ್ತ ರೂ.3 ಲಕ್ಷಕ್ಕಿಂತ ಸಾಲದ ಮೊತ್ತವು ಕಡಿಮೆಯಿದ್ದಲ್ಲಿ ಉಳಿಕೆ ಮೊತ್ತವನ್ನು ವಾರಿಸುದಾರರಿಗೆ ಪಡೆಯುವ ಅವಕಾಶವಿದೆ.
802 ಸದಸ್ಯರಿಗೆ ವಿಮಾಮೊತ್ತ ಪಾವತಿ:
ಸಾಲದ ಭದ್ರತೆ ಮತ್ತು ಸಂಘದ ಸದಸ್ಯರ ಹಿತದೃಷ್ಟಿಯಿಂದ ಸಂಘವು ಸೂಕ್ತ ಕ್ರಮಕೈಗೊಂಡಿದ್ದು ಈ ವರ್ಷದಲ್ಲಿ ಈಗಾಗಲೇ ಬೆಳೆ ಸಾಲ ಹೊಂದಿರುವ ಒಟ್ಟು 802 ಸದಸ್ಯರಿಗೆ ವಿಮಾ ಮೊತ್ತವನ್ನು ವಿಮಾ ಕಂಪೆನಿಗೆ ಪಾವತಿಸಲಾಗಿದೆ ಎಂದು ನನ್ಯ ಅಚ್ಚುತ್ತ ಮೂಡೆತ್ತಾಯರವರು ತಿಳಿಸಿದ್ದಾರೆ.