ಪುತ್ತೂರು : ಬೊಳುವಾರಿನ ಸೂರ್ಯಪ್ರಭಾ ಸಂಕೀರ್ಣ ಇದರ ಮೊದಲನೆಯ ಮಹಡಿಯಲ್ಲಿ ವ್ಯವಹರಿಸುತ್ತಿರುವ ಕೀರ್ತನ ಸೌಹಾರ್ದ ಸಹಕಾರಿ ನಿ. ಇದರ 23 -24 ನೇಯ ಸಾಲಿನ ವಾರ್ಷಿಕ ಮಹಾಸಭೆಯು ಸೆ. 22 ರಂದು ಬೊಳುವಾರು ಪ್ರಗತಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು.
ಕೀರ್ತನ ಸೌಹಾರ್ದ ಸಹಕಾರಿಯ ಅಧ್ಯಕ್ಷರು ಹಾಗೂ ಪ್ರಗತಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ. ಶ್ರೀಪತಿ ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರು ವರ್ಷದ ಅವಧಿಯಲ್ಲಿ ಪ್ರಥಮ ಬಾರಿಗೆ ನಮ್ಮ ಸಹಕಾರಿ ಸಂಸ್ಥೆಯು ಪ್ರಗತಿಪಥದತ್ತ ಸಾಗಿ ಲಾಭದಾಯಕ ಹೆಜ್ಜೆಯನ್ನು ಇಟ್ಟಿದೆ. ಇದಕ್ಕೆಲ್ಲಾ ಕಾರಣ ನಮ್ಮ ಸಹಕಾರಿಯ ಗ್ರಾಹಕರ ಹಾಗೂ ಸದಸ್ಯರ ಶ್ರಮ ಮತ್ತು ಬೆಂಬಲ. ಹಾಗಾಗಿ ಪ್ರಸಕ್ತ ಸಾಲಿನಲ್ಲಿ ಸದಸ್ಯ ಗ್ರಾಹಕರಿಗೆ 4% ಡಿವಿಡೆಂಟ್ ವಿತರಿಸಲಿದ್ದೇವೆಯೆಂದು ಘೋಷಣೆ ಮಾಡಿದ ಅವರು , ಕ್ಲಪ್ತ ಸಮಯಕ್ಕೆ ಸಾಲ ಮರುಪಾವತಿ ಮಾಡಿದ ಸದಸ್ಯ ಗ್ರಾಹಕರಿಗೆ ಕೃತಜ್ಞತೆಯನ್ನು ಸಲ್ಲಿಸಿ , ಮುಂದೆಯೂ ನಿಮ್ಮೆಲ್ಲರ ಸಹಕಾರ ಹಾಗೂ ಪ್ರೋತ್ಸಾಹ ಇದೇ ರೀತಿಯಲ್ಲಿ ಇರಲಿಯೆಂದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನ್ನಪೂರ್ಣೇಶ್ವರಿ ಕೆ ಆರ್ ವರದಿ ವಾಚಿಸಿದರು.ಸಿಬ್ಬಂದಿ ಕುಮಾರಿ ಧನ್ಯ ಮತ್ತು ಪಿಗ್ಮಿ ಸಂಗ್ರಾಹಕಿ ಮನೋರಮ ಸಹಕರಿಸಿದರು. ನಿರ್ದೇಶಕರಾದ ವಸಂತ್ ಕಾಮತ್.ಕೆ, ಗೋವಿಂದ ನಾಯಕ್ ಎಸ್ ಎಲ್, ದಿವಾಕರ್ ಬಲ್ಲಾಳ್ , ವೀಣಾ ಕುಮಾರಿ , ದೀಪಾ ನಾಯಕ್ ಮತ್ತು ಉದಯಕುಮಾರ್ ಎನ್ ಬಿ, ಉಪಸ್ಥಿತರಿದ್ದರು. ಉಪಾಧ್ಯಕ್ಷ ಪ್ರಸನ್ನ ಕುಮಾರ್ ಕೆ.ಆರ್ ಸ್ವಾಗತಿಸಿ , ಸದಸ್ಯೆ ಯಶೋದಾ ಬಿ ಪ್ರಾರ್ಥಿಸಿದರು. ಪಿಗ್ಮಿ ಸಂಗ್ರಾಹಕ ಹರೀಶ್ ಕೆ.ಎನ್ ಮತ್ತು ಕಿಶೋರ್ ಭಟ್ ವಿವಿಧ ರೀತಿ ಸಹಕರಿಸಿದರು.