ಪುತ್ತೂರು: ಪ್ರಸ್ತುತ ಮಂಗಳೂರಿನ ದೇರಳಕಟ್ಟೆಯಲ್ಲಿರುವ ಪ್ರತಿಷ್ಠಿತ ಕೆಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆಯನ್ನು ಸಲ್ಲಿಸುತ್ತಿರುವ ಡಾ. ಪ್ರಜ್ವಲ್ ಚಂದ್ರಶೇಖರ್ ಅವರು ಸೆ.28ರಿಂದ ಪ್ರತಿ ಶನಿವಾರ ಸಂಜೆ ಹಾಗೂ ಆದಿತ್ಯವಾರ ಬೆಳಗ್ಗೆ ಉಷಾ ಪಾಲಿ ಕ್ಲಿನಿಕ್ ನಲ್ಲಿ ಸೇವೆಗೆ ಲಭ್ಯ.
ಶಸ್ತ್ರಚಿಕಿತ್ಸಾ ಕ್ಷೇತ್ರದಲ್ಲಿ ಸುದೀರ್ಘ 10 ವರ್ಷಗಳ ಅಪಾರ ಅನುಭವ ಇವರು ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆಯಲ್ಲಿ ಹಾಗೂ ಎಂಡೋಸ್ಕೋಪಿಯಲ್ಲಿ ಫೆಲೋಶಿಪ್ ಪಡೆದಿದ್ದು, ಪ್ರಮಾಣೀಕೃತ ಲೇಸರ್ ಪ್ರೊಕ್ಟಾಲಜಿಸ್ಟ್ ಆಗಿರುತ್ತಾರೆ.
ಇವರು ಲ್ಯಾಪ್ರೋಸ್ಕೋಪಿಕ್ ಸರ್ಜರಿಗಳು, ಎಂಡೋಸ್ಕೋಪಿ, ಲೇಸರ್ ವೆರಿಕೋಸ್ ವೇನ್ಸ್ ಸರ್ಜರಿ, ಲೇಸರ್ ಪೈಲ್ಸ್, ಫಿಸ್ಟುಲಾ, ಫಿಶರ್ ಚಿಕಿತ್ಸೆ, ಹರ್ನಿಯಾ, ಹೈಡ್ರೋಸಿಲ್,ಅಪೆಂಡಿಕ್ಸ್, ಪಿತ್ತಕೋಶದ ಕಲ್ಲುಗಳು, ಥೈರಾಯ್ಡ್ ಮತ್ತು ಸ್ತನ ಸಂಬಂಧಿತ ರೋಗಗಳು, ಮಧುಮೇಹ ರೋಗಿಗಳ ಪಾದ ಸಂರಕ್ಷಣೆ ನಿರ್ವಹಣೆಯ ತಜ್ಞರಾಗಿರುತ್ತಾರೆ.
ಸಾವಿತ್ರಿ ಹಾಗೂ ಚಂದ್ರಶೇಖರ್ ಇವರ ಸುಪುತ್ರನಾಗಿರುವ ಡಾ. ಪ್ರಜ್ವಲ್ ಇವರು ತಮ್ಮ ಎಂ.ಬಿ.ಬಿ.ಎಸ್ ಪದವಿಯನ್ನು ಕೆ.ವಿ.ಜಿ ವೈದ್ಯಕೀಯ ಕಾಲೇಜಿನಲ್ಲಿ ಪೂರ್ಣಗೊಳಿಸಿ ಎಂಡಿ ಪದವಿಯನ್ನು ಭಗವಾನ್ ಮಹಾವೀರ್ ಜೈನ ಹಾಸ್ಪಿಟಲ್ ನಲ್ಲಿ ಪಡೆದಿರುತ್ತಾರೆ. ಇವರು ಪುತ್ತೂರು ಬಪ್ಪಳಿಗೆ ನಿವಾಸಿ ಪ್ರಮೀಳಾ ಹಾಗೂ ಪಾಂಡುರಂಗ ಆಚಾರ್ಯ ಇವರ ಅಳಿಯನಾಗಿದ್ದು,ಪತ್ನಿ ಡಾ.ಪ್ರಜ್ಞಾ , ಮಂಗಳೂರಿನ ಎಸ್. ಸಿ. ಎಸ್ ಹಾಸ್ಪಿಟಲ್ ನಲ್ಲಿ ಅರಿವಳಿಕೆ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಅಪ್ಪೋಯಿಂಟ್ಮೆಂಟ್ ಗಾಗಿ 9008256005 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.