ಪುತ್ತೂರು: ಅಮ್ಮ ಮಗಳ ಬಾಂಧವ್ಯ ಹೊಂದಿರುವ “ಉಡಲಗುಡಿತ ದೇವೆರ್” ಎಂಬ ತುಳು ಆಲ್ಬಮ್ ಸಾಂಗ್‌ನ ಚಿತ್ರಿಕರಣ ಮುಕ್ತಾಯಗೊಂಡಿದ್ದು ಅ.06 ರಂದು ಬಿಡುಗಡೆಗೊಳ್ಳಲಿದೆ.
ಅಮಿತಾ ರಘುನಾಥ್ ಗೋಳ್ತೀಲರವರ ನಿರ್ಮಾಣದಲ್ಲಿ ಮೂಡಿಬರಲಿರುವ ಆಲ್ಬಮ್ ಸಾಂಗ್‌ಗೆ ತೇಜಸ್. ಎಲ್. ಕೆ ದರ್ಬೆತ್ತಡ್ಕ ಅವರ ಗಾಯನ ಹಾಗೂ ಮೋಹನ್ ದರ್ಬೆತ್ತಡ್ಕ ಸಾಹಿತ್ಯ ಬರೆದಿದ್ದಾರೆ. ಪ್ರಣಮ್ ಎನ್.ಪಿ ಸ್ಟುಡಿಯೋ ಬೆಳ್ಳಾರೆ ಇವರ ಛಾಯಾಗ್ರಾಹಣವಿದೆ. ಪ್ರಮುಖ ಮಗಳ ಪಾತ್ರದಲ್ಲಿ ಕು.ಆಧ್ಯ ಆರ್. ಜೆ, ಗೊಳ್ತಿಲ, ಅಮ್ಮನ ಪಾತ್ರದಲ್ಲಿ ರವಿಕಲಾ ಸಿಂಹವನ, ಮಗುವಿನ ಪಾತ್ರದಲ್ಲಿ ಬೇಬಿ ದ್ರುವಿ ದರ್ಬೆತ್ತಡ್ಕ , ಮಕ್ಕಳ ಪಾತ್ರದಲ್ಲಿ ಬೇಬಿ ದಿಶಾ ದರ್ಬೆತ್ತಡ್ಕ , ಬೇಬಿ ದಿಯಾ ದರ್ಬೆತ್ತಡ್ಕ , ಬೇಬಿ ದ್ರುವಿ ದರ್ಬೆತ್ತಡ್ಕ, ಬೇಬಿ ಛಾಯಾ ದರ್ಬೆತ್ತಡ್ಕ ಕಾಣಿಸಿಕೊಂಡಿದ್ದಾರೆ.
ಗಣೇಶ್ ಕೆಯ್ಯೂರು ನಿರ್ದೇಶನವಿದ್ದು, ಹಿರಿಯರಾದ ದರ್ಬೆತ್ತಡ್ಕ ಸೀತಮ್ಮ ಕೊಪ್ಪಳ ಮತ್ತು ಮನೆಯವರ ಹಾಗೂ ಶ್ರೀ ವಿಷ್ಣು ಸೇವಾ ಬಳಗ ದರ್ಬೆತ್ತಡ್ಕ, ಪ್ರಮೋದೀನಿ ನವೀನ್ ರೈ, ರವೀಂದ್ರ ದರ್ಬೆತ್ತಡ್ಕ, ಭರತ್ ದರ್ಬೆತ್ತಡ್ಕ, ಗುರುರಾಜ್ ಸುಳ್ಯ, ಸುಪ್ರಿತಾ ಶ್ರೀಕಾಂತ್ ಬಡಕ್ಕೋಡಿ,ನವೀನ್ ಪುತ್ತೂರು, ವಿನಯ್ ಕುಂಬ್ರ, ಮನೋಜ್ ಕುಂಬ್ರ, ಲೋಕನಾಥ ಕುಂಬ್ರ ಹಾಗೂ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶ್ರೀ ವಿಷ್ಣು ಯುವಶಕ್ತಿ ಬಳಗ ಮಜ್ಜಾರಡ್ಕ ಸಂಘಟನೆಯ ಸಹಕಾರದೊಂದಿಗೆ ಆಲ್ಬಂ ಸಾಂಗ್ ಮೂಡಿಬಂದಿದೆ.