ರಾಮಕುಂಜ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ, ಉಪನಿರ್ದೇಶಕರ ಕಛೇರಿ ಸುಳ್ಯ, ಪಿ.ಎಂ.ಶ್ರೀ ಸ.ಮಾ.ಹಿ.ಪ್ರಾ ಶಾಲೆ ಗುತ್ತಿಗಾರು ಹಾಗೂ ಸ.ಪ.ಪೂ ಕಾಲೇಜು ಗುತ್ತಿಗಾರು (ಪ್ರೌಢಶಾಲಾ ವಿಭಾಗ) ಇವರ ಸಂಯುಕ್ತ ಆಶ್ರಯದಲ್ಲಿ ಗುತ್ತಿಗಾರುನಲ್ಲಿ ನಡೆದ ಪ್ರೌಢಶಾಲಾ ಬಾಲಕ-ಬಾಲಕಿಯರ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾಟದ ಬಾಲಕಿಯರ ವಿಭಾಗದಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಬಾಲಕಿಯರ ತಂಡವು ಪ್ರಥಮ ಸ್ಥಾನ ಪಡೆದುಕೊಂಡು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.
ಧನ್ವಿ ಎಂ. (ಮನೆಜಾಲು ದುಗ್ಗಣ್ಣ ಗೌಡ ಹಾಗೂ ಅಮಿತಾ ದಂಪತಿ ಪುತ್ರಿ) ಆಲ್‌ರೌಂಡರ್ ಹಾಗೂ ದೀಕ್ಷಾ ಎಸ್.(ತಿಂಗಳಾಡಿ ಶಿವಪ್ರಸಾದ್ ಎ ಹಾಗೂ ಅನುಪಮಾ ದಂಪತಿ ಪುತ್ರಿ ) ಬೆಸ್ಟ್ ಡಿಫೆಂಡರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ರಮ್ಯಾ ಕೆ.ಎಸ್.(ಕರಡಿಹಳ್ಳಿ ಶಶಿಧರ ಕೆ.ವಿ ಹಾಗೂ ಪ್ರೇಮ ಬಿ.ಎಂ.ದಂಪತಿ ಪುತ್ರಿ ), ಸಿಂಚನ ಎಸ್.(ನಗ್ರಿ ಶಿವಾನಂದ ಹಾಗೂ ಶಾಲಿನಿ ದಂಪತಿ ಪುತ್ರಿ ), ತನ್ವಿ ಕೆ.ಸಿ.(ಕಜಿಪಿತ್ತಿಲ ಚಂದ್ರ ಕೆ ಹಾಗೂ ಯೋಗಿತಾ ಕೆ ದಂಪತಿ ಪುತ್ರಿ), ಪ್ರತೀಕ್ಷಾ (ಗುಜ್ಜಾಲ ಭುವನೇಶ್ವರ ಹಾಗೂ ಪ್ರೇಮ ದಂಪತಿ ಪುತ್ರಿ), ಶಾಯದ ಕಜೇಸಾಬ್ ಕೊರಬು (ಬಿಜಾಪುರ ಖಾಜಾಸಾಬ್ ಹಾಗೂ ಮಮ್ತಾಜ್ ದಂಪತಿ ಪುತ್ರಿ ), ಶ್ರಾವ್ಯ ಬಿ (ಬೊಳೋಳಿ ಜಗದೀಶ್ ಹಾಗೂ ಜಯಶ್ರೀ ದಂಪತಿ ಪುತ್ರಿ ), ದೀಕ್ಷಾಶ್ರೀ(ಕುದ್ರಡ್ಕ ರಾಮಣ್ಣ ನಾಯ್ಕ ಹಾಗೂ ಗೀತಾ ದಂಪತಿ ಪುತ್ರಿ ), ಯಕ್ಷಿತಾ ಯು ( ರಾಮಕುಂಜ ಯಾದವ ಯು ಹಾಗೂ ಗಿರಿಜಾ ದಂಪತಿ ಪುತ್ರಿ ), ದಿವ್ಯ ದ್ಯಾಮಣ್ಣ ಬಾನಿ (ಜಿಗಣಿ ದ್ಯಾಮಣ್ಣ ಬಾನಿ ಹಾಗೂ ನೇತ್ರಾವತಿ ದಂಪತಿ ಪುತ್ರಿ ), ಸುರಕ್ಷಾ ಪಿ ( ಪಲ್ಲಡ್ಕ ಜನಾರ್ದನ ಗೌಡ ಹಾಗೂ ಯಶೋಧ ದಂಪತಿ ಪುತ್ರಿ ) ತಂಡವನ್ನು ಪ್ರತಿನಿಧಿಸಿದ್ದರು.
ವಿದ್ಯಾರ್ಥಿಗಳಿಗೆ ಮಾಧವ ಬಿ.ಕೆ., ಜಶ್ವಂತ್ ಹಾಗೂ ಮಂಜುನಾಥ್ ತರಬೇತಿ ನೀಡಿದ್ದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲ ರೈಯವರು ಮಾರ್ಗದರ್ಶನ ನೀಡಿದ್ದರು. ಶಾಲಾ ಮುಖ್ಯ ಗುರು ಸತೀಶ್ ಭಟ್ ಹಾಗೂ ಶಿಕ್ಷಕ ವೃಂದದವರು ಸಹಕರಿಸಿದ್ದರು.