ಬೆಳ್ಳಾರೆ ಮಸೀದಿಯ ಕುರಿತು ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಸಂದೇಶ ರವಾನೆ ಆರೋಪ-ಇಬ್ರಾಹಿಂ ಖಲೀಲ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು

0

ಪುತ್ತೂರು: ಬೆಳ್ಳಾರೆ ಮಸೀದಿಯ ಕುರಿತು ಫೇಸ್‌ಬುಕ್‌ನಲ್ಲಿ ಅಪಪ್ರಚಾರ ನಡೆಸಿ ಸಂದೇಶ ಹಾಕಿರುವ ವ್ಯಕ್ತಿಯೊಬ್ಬರ ವಿರುದ್ಧ ಬೆಳ್ಳಾರೆ ಝಕರಿಯಾ ಜುಮಾ ಮಸೀದಿ ಆಡಳಿತ ಕಮಿಟಿ ವತಿಯಿಂದ ಬೆಳ್ಳಾರೆ ಪೊಲೀಸ್ ಠಾಣೆಗೆ ಸೆ.27ರಂದು ದೂರು ನೀಡಲಾಗಿದೆ.


ನಿಂತಿಕಲ್ ಸಮೀಪದ ಸಮಹಾದಿ ನಿವಾಸಿ ಇಬ್ರಾಹಿಂ ಖಲೀಲ್ ಎಂಬವರು ಹಲವಾರು ಸಮಯಗಳಿಂದ ಸುಳ್ಳು ದ್ವೇಷ ಬರಹಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬರೆಯುತ್ತಿದ್ದು ಪಂಗಡ ಮತ್ತು ಜಾತಿ ಧರ್ಮಗಳ ನಡುವೆ ವೈಷಮ್ಯ ವೈರಾಗ , ಕೋಮು ಪ್ರಚೋದನೆ ಬರುವ ರೀತಿಯಲ್ಲಿ ಬರೆಯುತ್ತಿದ್ದಾರೆ, ಬೆಳ್ಳಾರೆ ಜುಮಾ ಮಸೀದಿ ಬಗ್ಗೆಯೂ ಆಕ್ಷೇಪಾರ್ಹ ಬರಹಗಳನ್ನು ಬರೆದಿದ್ದು ಆ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಜಮಾಅತ್ ಅಧ್ಯಕ್ಷ ಯು.ಹೆಚ್ ಅಬೂಬಕ್ಕರ್ ಹಾಜಿ, ಕಾರ್ಯದರ್ಶಿ ಬಶೀರ್ ಕಲ್ಲಪಣೆ, ಸದಸ್ಯರಾದ ಹಮೀದ್ ಹೆಚ್ ಎಂ, ಹನೀಪ್ ನೆಟ್ಟಾರ್, ಜಮಾಅತರಾದ ಆರಿಫ್ ಬಿ ಎಂ, ಬಿ ಎ ಮಹಮೂದ್, ಕಲಂದರ್ ಹಾಜಿ, ಸವದ್, ಜಮಾಲುದ್ದೀನ್ ಕೆ.ಎಸ್, ಸಿದ್ದೀಕ್ ಮಾಲೆಂಗ್ರಿ, ಜಮಾಲ್ ಮಣಿಮಜಲ್, ಆಶಿಕ್ ಮಂಗಳ, ಶರೀಫ್ ನೆಟ್ಟಾರ್, ರಹೀಂ ನೆಟ್ಟಾರ್, ಇಸ್ಮಾಯಿಲ್ ಹಾಜಿ, ಅಝರುದ್ದೀನ್, ಮಹಮ್ಮದ್, ತೌಸೀಪ್, ಇಬ್ರಾಹಿಂ, ಮಹಮ್ಮದ್, ಇಸ್ಮಾಯಿಲ್ ನೆಟ್ಟಾರ್, ಅಝೀಝ್ ಸಹಿತ ಹಲವಾರು ಮಂದಿ ಜಮಾಅತರು ತೆರಳಿ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here