ಪುತ್ತೂರು: ಮೋಸ, ವಂಚನೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತನ್ನ ವಿಳಾಸವನ್ನು ಬದಲಿಸಿ ತಲೆಮರೆಸಿಕೊಂಡಿದ್ದ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಮಹಮ್ಮದ್ ಇಕ್ಬಾಲ್ ಅಲಿಯಾಸ್ ಪ್ರವೀಣ್ ಕುಮಾರ್ ತೊಮರ್ (53ವ) ಎಂಬ ಆರೋಪಿಯನ್ನು ಸಂಪ್ಯ ಪೊಲೀಸರು ತೆಲಂಗಾಣದಲ್ಲಿ ಬಂಧಿಸಿದ್ದಾರೆ.
ಮೂಲತಃ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯವನಾಗಿದ್ದು ಪ್ರಸ್ತುತ ತೆಲಂಗಾಣ ರಾಜ್ಯದ ಹೈದರಬಾದ್ ನಲ್ಲಿ ವಾಸ್ತವ್ಯ ಹೊಂದಿದ್ದ ಮಹಮ್ಮದ್ ಇಕ್ಬಾಲ್ ಅಲಿಯಾಸ್ ಪ್ರವೀಣ್ ಕುಮಾರ್ ತೊಮರ್ 2008 ರಲ್ಲಿ ನಕಲಿ ಕ್ರೆಟಿಡ್ ಕಾರ್ಡ್ ಬಳಸಿ ಮೋಸ ವಂಚನೆ ಮಾಡಿರುವ ಕುರಿತು ಪುತ್ತೂರು ಸಂಪ್ಯ ಪೊಲೀಸ್ ಠಾಣೆಯಲ್ಲಿ ಆಗ ಠಾಣಾ ಎಸ್ ಐ ಆಗಿದ್ದ ಟಿ.ಡಿ ನಾಗರಾಜ್ ಅವರು ಆರೋಪಿ ವಿರುದ್ಧ 416, 420, 511 ಜೊತೆಗೆ 34 Ipc ಪ್ರಕರಣ ದಾಖಲಿಸಿದ್ದರು.
ಈ ಕುರಿತು ನ್ಯಾಯಾಲಯದಲ್ಲಿ ಆರೋಪಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ನ್ಯಾಯಾಲಯ ಆರೊಪಿ ವಿರುದ್ಧ ವಾರಂಟ್ ಜಾರಿ ಮಾಡಿತ್ತು. ತನಿಖೆ ಕೈಗೆತ್ತಿಕೊಂಡ ಗ್ರಾಮಾಂತರ ಪೊಲೀಸರು ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ರವಿ ಬಿ ಎಸ್ ಮತ್ತು ಎಸ್ ಐ ಜಂಬೂರಾಜ್ ಮಹಾಜನ್ ಅವರ ಮಾರ್ಗದರ್ಶನದಲ್ಲಿ ಎ.ಎಸ್ ಐ ಪರಮೇಶ್ವರ್ ಕೆ, ಹೆಡ್ ಕಾನ್ ಸ್ಟೇಬಲ್ ಮಧು ಕೆ ಎನ್, ಕಾನ್ ಸ್ಟೇಬಲ್ ಅಸ್ತಮಾ ರವರ ತಂಡ ತೆಲಂಗಾಣ ರಾಜ್ಯದ ಹೈದರಬಾದ್ ನಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ, ಬಂಧಿಸಿ ಸೆ.28 ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.