*ಎಲ್ಲಾ ವರ್ಗದ ಜನರಿಗೆ ಕೈಗೆಟಕುವ ರೀತಿಯಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯಲಿ: ಯು.ಟಿ.ಖಾದರ್
*ಟ್ರೀಟ್ ಮೆಂಟ್ ಫಸ್ಟ್ – ಪೇಮೆಂಟ್ ನೆಕ್ಸ್ಟ್ ಇದು ಡಾ. ಅಬ್ದುಲ್ ಬಶೀರ್ ರವರ ಫಾಲಿಸಿ: ಡಾ. ಶರಣಪ್ರಕಾಶ ರುದ್ರಪ್ಪ ಪಾಟೀಲ್
*ಪೈಪೋಟಿ ಇದ್ದಲ್ಲಿ ಯಶಸ್ಸು ಸಾಧ್ಯ: ಬಿ.ರಮಾನಾಥ ರೈ
*ಡಾ. ಅಬ್ದುಲ್ ಬಶೀರ್ ಮಾನವೀಯ ಧರ್ಮ ಇರುವ ವ್ಯಕ್ತಿ: ಸಿ.ಎಂ.ಇಬ್ರಾಹಿ
*ಸಾಮಾಜಿಕ ಗುಣದಿಂದಾಗಿ ಇವರು ಈ ಹಂತಕ್ಕೆ ತಲುಪಲು ಕಾರಣವಾಗಿದೆ: ವಿನಯ ಕುಮಾರ್ ಸೊರಕೆ
ವಿಟ್ಲ: ಇದೊಂದು ಸಂತೋಷ ಸಂಭ್ರಮದ ಕ್ಷಣವಾಗಿದೆ. ಡಾ. ಅಬ್ದುಲ್ ಬಶೀರ್ ರವರ ವ್ಯಕ್ತಿತ್ವ ಬಹಳಷ್ಟು ಉತ್ತಮವಾಗಿದೆ. ಇವರ ಈ ಆಸ್ಪತ್ರೆಯಲ್ಲಿ ಎಲ್ಲಾ ವರ್ಗದ ಜನರಿಗೆ ಕೈಗೆಟಕುವ ರೀತಿಯಲ್ಲಿ ಚಿಕಿತ್ಸೆ ದೊರೆಯಲಿ. ಎಲ್ಲಾ ವರ್ಗದ ಜನರ ಸಹಕಾರದಿಂದ ಅವರು ಈ ಹಂತಕ್ಕೆ ತಲುಪಲು ಕಾರಣವಾಗಿದೆ. ಯುವ ಜನತೆಗೆ ಅವರ ವ್ಯಕ್ತಿತ್ವ ಒಂದು ಸಂದೇಶವಾಗಿದೆ. ಬಹಳಷ್ಟು ಶ್ರಮಪಟ್ಟು ತನ್ನೂರಿನ ಜನರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಸಿಗಲೆಂದು ಇಲ್ಲೊಂದು ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಿದ್ದಾರೆ ಎಂದು ಸ್ಪೀಕರ್ ಯು.ಟಿ.ಖಾದರ್ ರವರು ಹೇಳಿದರು.
ಹಾಸನದಲ್ಲಿರುವ ಜನಪ್ರೀಯ ಆಸ್ಪತ್ರೆಯ ಸಹಸಂಸ್ಥೆ, ಮಂಗಳೂರಿನ ಪಡೀಲಿನಲ್ಲಿ ನೂತನವಾಗಿ ಪ್ರಾರಂಭಗೊಂಡ ಜನಪ್ರಿಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಹಳಷ್ಟು ಕಷ್ಟಪಟ್ಟು ಅವರು ಈ ಹಂತಕ್ಕೆ ಬಂದಿದ್ದಾರೆ. ಆಸ್ಪತ್ರೆಯ ಏಳಿಗೆಗೆ ಎಲ್ಲರ ಸಹಕಾರ ಅಗತ್ಯವಿದೆ. ಪ್ರಾಮಾಣಿಕತೆ ಬದ್ದತೆಯೊಂದಿಗೆ ಕೆಲಸ ನಿರ್ವಹಿಸಿದಾಗ ಯಶಸ್ಸು ಸಾಧ್ಯ. ನಿರಂತರವಾಗಿ ಸಾಮಾಜಿಕ ಜನಜಾಗೃತಿ ಮಾಡಿಸುವ ಕೆಲಸ ಆಸ್ಪತ್ರೆಯಿಂದ ಆಗಲಿ. ರೋಗ ತಡೆಗಟ್ಟುವ ಕೆಲಸ ಸಂಘ ಸಂಸ್ಥೆಗಳಿಂದ ಆಗಲಿ. ಇದೊಂದು ಉತ್ತಮ ವೈದ್ಯರನ್ನು ನಿರ್ಮಿಸುವ ಒಂದು ಕೇಂದ್ರವಾಗಿದೆ ಎಂದವರು ಹೇಳಿದರು.
ಕರ್ನಾಟಕ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ ರುದ್ರಪ್ಪ ಪಾಟೀಲ್ ರವರು ಬರ್ತ್ & ಬ್ಲೂಮ್ ವಿಭಾಗವನ್ನು ಉದ್ಘಾಟಿಸಿ ಮಾತನಾಡಿ ಸೇವೆ ನೀಡುವ ನಿಟ್ಟಿನಲ್ಲಿ ಆರಂಭಿಸಲಾದ ಆಸ್ಪತ್ರೆ ಅತ್ಯಂತ ಯಶಸ್ಸಾಗುತ್ತದೆ. ಟ್ರೀಟ್ ಮೆಂಟ್ ಫಸ್ಟ್ ಪೇಮೆಂಟ್ ನೆಕ್ಸ್ಟ್ ಇದು ಡಾ. ಅಬ್ದುಲ್ ಬಶೀರ್ ರವರ ಪಾಲಿಸಿ. ಗುಣಮಟ್ಟದ ಸೇವೆ ನೀಡುವ ಕೆಲಸ ಸಂಸ್ಥೆಯಿಂದ ಆಗಲಿದೆ ಎನ್ನುವ ಭರವಸೆ ನನಗಿದೆ ಎಂದರು.
ಮಾಜಿ ಸಚಿವರಾದ ರಮಾನಾಥ ರೈರವರು ಮಾತನಾಡಿ ಡಾ. ಅಬ್ದುಲ್ ಬಶೀರ್ ಓರ್ವ ಸಾಮಾಜಿಕ ಕಳಕಳಿಯ ವೈದ್ಯರಾಗಿದ್ದಾರೆ. ಬಹಳ ಅಪೇಕ್ಷೆಯನ್ನು ಇಟ್ಟುಕೊಂಡು ಆರಂಭಿಸಿದ ಸಂಸ್ಥೆ ಇದಾಗಿದೆ. ಸಂಸ್ಥೆಯಲ್ಲಿ ಟ್ರೋಮೋ ಸೆಂಟರ್ ಆರಂಭಿಸಬೇಕು. ಪೈಪೋಟಿ ಇದ್ದಲ್ಲಿ ಯಶಸ್ಸು ಸಾಧ್ಯ. ಬಡವರಿಗೆ ಸಹಕಾರ ನೀಡುವ ನಿಮ್ಮ ಗುಣ ಅಭಿನಂದನೀಯ ಎಂದರು.
ಮಾಜಿ ಕೇಂದ್ರ ಸಚಿವರಾದ ಸಿ.ಎಂ.ಇಬ್ರಾಹಿಂ ರವರು ಮಾತನಾಡಿ ಬಹಳಷ್ಟು ಕ್ಲಿಷ್ಟಕರ ಆಪರೇಶನ್ ಮಾಡಿದ ಕೀರ್ತಿ ಅಬ್ದುಲ್ ಬಶೀರ್ ರವರಿಗೆ ಸಲ್ಲಬೇಕು. ಬಶೀರ್ ರವರ ಸೇವೆ ಅನನ್ಯವಾದುದು. ಮಾನವೀಯ ಧರ್ಮ ಇರುವ ವ್ಯಕ್ತಿ ಅವರು. ಹಾಸನದಲ್ಲಿ ಇವರ ಜನಪ್ರಿಯತೆ ಬಹಳಷ್ಟಿದೆ. ಇವರಿಂದಾಗಿ ಹಲವು ಬಡರೋಗಿಗಳು ಗುಣಮಟ್ಟದ ಚಿಕಿತ್ಸೆ ಪಡೆದು ತೆರಳಿರುವ ನಿದರ್ಶನಗಳು ಬಹಳಷ್ಟಿದೆ. ಇಲ್ಲಿಯೂ ಬಡವರ ಪಾಲಿಗೆ ಇದು ಸಹಕಾರಿಯಾಗಲಿದೆ ಎಂದರು.
ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆರವರು ಮಾತನಾಡಿ ಹಲವಾರು ವರುಷದ ಹಿಂದಿನ ಕಾರ್ಯಕ್ರಮವನ್ನು ನೆನಪಿಸುವ ಕಾರ್ಯಕ್ರಮ ಇದಾಗಿದೆ. ಎಲ್ಲ ವರ್ಗದ ಜನರ ಆಶ್ರಯತಾಣ ಇದಾಗಿದೆ. ವಿದ್ಯಾಭ್ಯಾಸಕ್ಕೆ ಒತ್ತು ಕೊಡುವ ಕೆಲಸ ಇವರಿಂದ ನಡೆದಿದೆ. ಜೀವ ಉಳಿಸುವ ಕೆಲಸ ಈ ಆಸ್ಪತ್ರೆಯಿಂದ ಆಗಲಿದೆ. ಇವರ ಸಾಮಾಜಿಕ ಗುಣದಿಂದಾಗಿ ಇವರು ಈ ಹಂತಕ್ಕೆ ತಲುಪಲು ಕಾರಣವಾಗಿದೆ ಎಂದರು.
ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ, ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕೆ.ಎಂ. ಅಶ್ರಫ್, ಹಾಸನದ ಸಂಸದರಾದ ಶ್ರೇಯಸ್ ಎಂ. ಪಾಟೇಲ್, ಹಾಸನದ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಎಂ.ಎನ್. ಮೋಹನ್, ಹಾಸನದ ಹಿರಿಯ ವೈದ್ಯರಾದ ಡಾ. ಶಾಮ್ ಸಂಪಿಗೆತಾಯ, ವಿಧಾನ ಪರಿಷತ್ತಿನ ಸದಸ್ಯರಾದ ಐವಾನ್ ಡಿಸೋಜಾ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮಹಮ್ಮದ್, ಇಂಡಿಯಾನ ಆಸ್ಪತ್ರೆಯ ಮುಖ್ಯಸ್ಥರಾದ ಯೂಸುಫ್ ಕುಂಬ್ಳೆ, ಮಂಗಳೂರಿನ ಹ್ಯೂಸಮ್ ಸ್ಟೀಲ್ಸ್ ನ ಮಾಲಕರಾದ ಶಾಕೀರ್ ಹಾಜಿ, ಎಸ್.ಡಿ.ಪಿ.ಐ. ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು, ಪ್ರಮುಖರಾದ ಎಸ್.ಎಂ.ರಶೀದ್ ಹಾಜಿ, ರಫೀಕ್ ಮಾಸ್ಟರ್, ಅಬ್ದುಲ್ ಕುದ್ಕೋಳಿ, ಬದ್ರಿಯಾ ಅಬ್ದುಲ್ ಖಾದರ್ , ಡಾ.ಅಣ್ಣಯ್ಯ ಕುಲಾಲ್, ಜನಪ್ರೀಯ ಫೌಂಡೇಶನ್ ನ ಉಪಾಧ್ಯಕ್ಷರಾದ ಫಾತಿಮಾ ನಸ್ರಿನಾ ಬಶೀರ್, ವೈದ್ಯರಾದ ಡಾ.ಶಾರುಕ್ ಅಬ್ದುಲ್ಲ, ಡಾ. ಜಸ್ನಿ ಬಶೀರ್, ಡಾ.ಶಫಾಕ್ ಮಹಮ್ಮದ್, ಡಾ. ಶಾಮಿಕ್ ಅಬ್ದುಲ್ ರಹಿಮಾನ್, ಜನಪ್ರೀಯ ಫೌಂಡೇಶನ್ ನ ನಿರ್ದೇಶಕರಾದ ಡಾ. ಹಸನ್ ಮುಭಾರಕ್, ಡಾ. ನೂಮನ್ ಮಹಮ್ಮದ್, ಡಾ. ಫಾತಿಮಾ ಇಸ್ಮತ್, ಡಾ. ಆಲಮ್ ನವಾಜ್, ಡಾ. ಮೊಯಿದಿನ್ ನಫ್ಸಿರ್ ಮೊದಲಾದವರು ಉಪಸ್ಥಿತರಿದ್ದರು.
ಜನಪ್ರೀಯ ಫೌಂಡೇಶನ್ ನ ನಿರ್ದೇಕರಾದ ಡಾ.ಕಿರಾಶ್ ಪರ್ತಿಪ್ಪಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜನಪ್ರೀಯ ಫೌಂಡೇಶನ್ ನ ನಿರ್ದೇಶಕರಾದ ನುಮಾನ್ ಆಸ್ಪತ್ರೆಯ ವಿಶೇಷತೆಯ ಬಗ್ಗೆ ತಿಳಿಸಿದರು. ಜನಪ್ರೀಯ ಫೌಂಡೇಶನ್ ನ ಅಧ್ಯಕ್ಷರಾದ ಡಾ.ಅಬ್ದುಲ್ ಬಶೀರ್ ವಿ.ಕೆ.ರವರು ಸ್ವಾಗತಿಸಿದರು. ಜನಪ್ರೀಯ ಫೌಂಡೇಶನ್ ನ ನಿರ್ದೇಶಕರಾದ ಶಾರುಕ್ ಅಬ್ದುಲ್ಲ ವಂದಿಸಿದರು.
ಹುಟ್ಟೂರಿನ ಜನತೆಗೆ ಸೇವೆ ನೀಡುವ ದೃಷ್ಟಿಯಿಂದ ಸುಸಜ್ಜಿಯ ಆಸ್ಪತ್ರೆ ನಿರ್ಮಾಣ
ನನ್ನ ಹುಟ್ಟೂರಿನ ಜನತೆಗೆ ಸೇವೆ ನೀಡುವ ದೃಷ್ಟಿಯಿಂದ ಇದೀಗ ಮಂಗಳೂರಿನ ಪಡೀಲಿನಲ್ಲಿ ಸುಸಜ್ಜಿತವಾದ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಿದ್ದೇವೆ. ಆರ್ಥಿಕ ತೊಂದರೆಯಿಂದಾಗಿ ವೈದ್ಯಕೀಯ ಸೇವೆಯಿಂದ ಯಾರೂ ವಂಚಿತರಾಗಬಾರದು ಎನ್ನುವುದು ನಮ್ಮ ಉದ್ದೇಶವಾಗಿದೆ. ನೆರೆಯ ಊರಿನಿಂದ ಉನ್ನತ ಚಿಕಿತ್ಸೆಗಾಗಿ ಮಂಗಳೂರಿಗೆ ಬರುವ ರೋಗಿಗಳಿಗೆ ಆದಷ್ಟು ಬೇಗ ಚಿಕಿತ್ಸೆ ಸಿಗಬೇಕೆನ್ನುವ ದೃಷ್ಟಿಯಿಂದ ಪಡೀಲಿನಲ್ಲಿ ಆಸ್ಪತ್ರೆಯನ್ನು ತೆರೆಯಲಾಗಿದೆ.
ನಮ್ಮಲ್ಲಿ ಆದುನಿಕ ತಂತ್ರಜ್ಞಾನದ ಉಪಕರಣಗಳನ್ನು ಅಳವಡಿಸಿಕೊಳ್ಳಲಾಗಿದೆ. ಪೇಶೆಂಟ್ ಗಳು ಆಸ್ಪತ್ರೆ ತಲುಪಿದ ಕೂಡಲೇ ಇಲ್ಲಿ ಚಿಕಿತ್ಸೆ ನೀಡಲಾಗುವುದು. ನಾವು ವೃತ್ತಿಯ ಹಿಂದೆ ಹೋಗುವವರು. ಇಲ್ಲಿ
24*7 ತಜ್ಞ ವೈದ್ಯರು ಸೇವೆ ನೀಡಲಿದ್ದಾರೆ. ಎಲ್ಲರ ಸಹಕಾರ ಅಗತ್ಯ.