ಬಿಜೆಪಿಯಿಂದ ಸೇವಾ ಪಾಕ್ಷಿಕ ಕಾರ್ಯಕ್ರಮ – ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಸ್ವಚ್ಛತೆ

0

ಪುತ್ತೂರು: ಬಿಜೆಪಿಯಿಂದ ಸೇವಾ ಪಾಕ್ಷಿವಾಗಿ ನಡೆಯುವ ಹಲವು ಕಾರ್ಯಕ್ರಮಗಳಲ್ಲಿ ಒಂದಾದ ಸ್ವಚ್ಛತಾ ಕಾರ್ಯಕ್ರಮವಾಗಿ ಅ.1ರಂದು ನಗರಮಂಡಲದ ನೇತೃತ್ವದಲ್ಲಿ ಬೆಳಿಗ್ಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.


ನಮ್ಮ ಭವ್ಯ ಭಾರತಕ್ಕಾಗಿ ಬದುಕು ಸಮರ್ಪಿಸಿದ ರಾಷ್ಟ್ರ ಕಂಡ ಹಿರಿಯ ಮುತ್ಸದಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು, ಲಾಲ್ ಬಹಾದ್ದೂರ್ ಶಾಸ್ತ್ರಿ, ಮಹಾತ್ಮ ಗಾಂಧಿ ಹಾಗೂ ಭಾರತವನ್ನು ಪರಮ ವೈಭವದೆಡಗೆ ಕೊಂಡೊಯ್ಯುವ ಸಂಕಲ್ಪದೊಂದಿಗೆ ರಾಷ್ಟ್ರ ಕಾರ್ಯವನ್ನು ಮಾಡುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನಚಾರಣೆಗಳ ಪ್ರಯುಕ್ತ ಸೇವಾ ಪಾಕ್ಷಿಕವಾಗಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕರಾದ ಸಂಜೀವ ಮಠಂದೂರು ಹೇಳಿದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿಬಿ ಕಲ್ಲಿಮಾರ್, ನಗರ ಸಭಾ ಅಧ್ಯಕ್ಷೆ ಲೀಲಾವತಿ ಕೃಷ್ಣನಗರ, ನಗರ ಸಭಾ ಮಾಜಿ ಅಧ್ಯಕ್ಷ ಕೆ ಜೀವಂಧರ್ ಜೈನ್, ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ನಾಗೇಶ್ ಪ್ರಭು, ಜಿಲ್ಲಾ ಪ್ರಶಿಕ್ಷಣ ಪ್ರಕೋಷ್ಠ ಸಂಚಾಲಕ ಚಂದ್ರಶೇಖರ್ ರಾವ್ ಬಪ್ಪಳಿಗೆ, ಬಿಜೆಪಿ ನಗರ ಮಂಡಲ ಉಪಾಧ್ಯಕ್ಷರಾದ ಯುವರಾಜ್ ಕೆ ಪೆರಿಯತ್ತೋಡಿ , ವಸಂತಲಕ್ಷ್ಮಿ , ಬಿಜೆಪಿ ನಗರ ಮಂಡಲ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಜಯಶ್ರೀ ಎಸ್ ಶೆಟ್ಟಿ , ಬಿಜೆಪಿ ನಗರ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ , ಬಿಜೆಪಿ ನಗರ ಸಭಾ ಸದಸ್ಯರಾದ ಗೌರಿ ಬನ್ನೂರು , ದೀಕ್ಷಾ ಪೈ , ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯೆ ಜಯಶ್ರೀ ನಾಯ್ಕ್ , ಬಿಜೆಪಿ ನಗರ ಮಂಡಲ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಜಯಲಕ್ಷ್ಮಿ ಶಗ್ರಿತ್ತಾಯ, ಸುನಿತಾ , ಮಹಿಳಾ ಮೋರ್ಚಾ ಸದಸ್ಯರಾದ ಸುಮತಿ , ಸರೋಜಿನಿ , ಸುಪ್ರಭಾ , ಪೂರ್ಣಿಮಾ ಬಲ್ನಾಡು, ರಾಜೀವಿ ಕುಬಲಾಜೆ, ರವಿ ಸೇರಿದಂತೆ ಕಾರ್ಯಕರ್ತ ಬಂಧುಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here