ಅ.3 ರಿಂದ ಬಪ್ಪಳಿಗೆ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

0

ಪುತ್ತೂರು : ಇತಿಹಾಸ ಪ್ರಸಿದ್ಧ ಬಪ್ಪಳಿಗೆ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ನವರಾತ್ರಿ ಉತ್ಸವ ಅ. 3 ರಿಂದ 11 ರವರೆಗೆ ನಡೆಯಲಿದೆ. 3 ರಂದು ಬೆಳಗ್ಗೆ ಮಹಾಪೂಜೆ ಬಳಿಕ ಕದಿರು ವಿತರಣೆ ನಡೆಯಲಿದೆ.


ಪ್ರತಿ ದಿನವು ಸಂಜೆ 7 ರಿಂದ ಭಜನೆ ನಂತರ ಅಮ್ಮನವರಿಗೆ ಮಹಾಪೂಜೆ ನಡೆಯಲಿದೆ. ದಿ. 11 ರಂದು ಸಂಜೆ‌ ಅಮ್ಮನವರಿಗೆ ಮತ್ತು ಸ-ಪರಿವಾರ ದೈವಗಳಿಗೆ ವಿಶೇಷ ತಂಬಿಲ ಸೇವೆ ನಂತರ ಮಹಾಪೂಜೆ ಮತ್ತು ಆಯುಧ ಪೂಜೆ ನಡೆಯಲಿದೆ.‌ ಭಗವದ್ಬಕ್ತರಾದ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗುವಂತೆ ಮಾರಿಯಮ್ಮ ಪೂಜಾ ಸೇವಾ ಸಮಿತಿ ಬಪ್ಪಳಿಗೆ ಇದರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here