ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧೀಜಿ ಮತ್ತು ಶಾಸ್ತ್ರೀಜಿ ಸಂಸ್ಮರಣೆ ಹಾಗೂ ಕಾರ್ಯಾಗಾರ

0

puttur: ಭಾರತ ದೇಶ ಕಂಡ ಇಬ್ಬರು ಅನರ್ಘ್ಯ ರತ್ನಗಳಾದ ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಜೀವನ ಆದರ್ಶಗಳು ನಮ್ಮ ಜೀವನಕ್ಕೆ ಮಾರ್ಗದರ್ಶಕವಾಗಲಿ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಡಾ. ಎಮ್ ಶಿವಪ್ರಕಾಶ್ ಹೇಳಿದರು.

ಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧೀಜಿ ಮತ್ತು ಶಾಸ್ತ್ರೀಯವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿ ಗಾಂಧೀಜಿಯವರ ಸರಳತೆ ಹಾಗೂ ಶಾಸ್ತ್ರೀಜಿಯವರ ಆಡಳಿತ ಹಾಗೂ ಸರಳ ಜೀವನ ಪದ್ಧತಿ ನಮ್ಮೆಲ್ಲರಿಗೂ ಆದರ್ಶಪ್ರಾಯ ಎಂದು ತಿಳಿಸಿದರು.

ಶಾಲಾ ಶಿಕ್ಷಕಿಯರಾದ ಸೌಮ್ಯ ಕುಮಾರಿ,ಸುಜಾತ, ಜ್ಯೋತಿಲಕ್ಷ್ಮಿ “ವೈಷ್ಣವ ಜನತೋ” ಹಾಡನ್ನು ಹಾಡಿದರು. ಸ್ವಚ್ಛತಾ ಪ್ರತಿಜ್ಞಾ ವಿಧಿಯೂ ನಡೆಯಿತು. ಈ ಸಂದರ್ಭದಲ್ಲಿ ಪುತ್ತೂರು ಲಯನ್ಸ್ ಕ್ಲಬ್ ವತಿಯಿಂದ “ಹದಿಹರೆಯದ ವಿದ್ಯಾರ್ಥಿಗಳ ಕೌಶಲ್ಯಗಳು” ಎಂಬ ವಿಚಾರದಲ್ಲಿ ಸುತ್ತಮುತ್ತಲಿನ ವಿವಿಧ ಶಾಲೆಗಳ ಶಿಕ್ಷಕಿಯರಿಗೆ ಎರಡು ದಿನಗಳ ಕೌಶಲ್ಯಾಭಿವೃದ್ಧಿ ಕಾರ್ಯಾಗಾರ ಆಯೋಜಿಸಲಾಗಿದೆ. ಲಯನ್ಸ್ ಕ್ಲಬ್ಬಿನ ವಿವಿಧ ಪದಾಧಿಕಾರಿಗಳು ಹಾಗೂ ತರಬೇತುದಾರರು ಈ ಕಾರ್ಯಾಗಾರದಲ್ಲಿ ಭಾಗವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ಕೌಶಲ್ಯಗಳ ಗುರುತಿಸುವಿಕೆ, ಪೋಷಣೆ ಇತ್ಯಾದಿ ವಿಷಯಗಳ ಕುರಿತಾಗಿ ತರಬೇತಿದಾರರು ಕಾರ್ಯಾಗಾರದಲ್ಲಿ ವಿವಿಧ ಚಟುವಟಿಕೆಗಳೊಂದಿಗೆ ತಿಳಿಸಿಕೊಡಲಿದ್ದಾರೆ ಎಂದು ಲಯನ್ಸ್ ಕ್ಲಬ್ ಪುತ್ತೂರಿನ ಪದಾಧಿಕಾರಿಗಳು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here