ಚಾರ್ವಾಕ ಶಾಲೆಯಲ್ಲಿ ಮಹಾತ್ಮಾ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜನ್ಮ ದಿನಾಚರಣೆ

0

ಕಾಣಿಯೂರು: ಚಾರ್ವಾಕ ಸ.ಉ.ಹಿ.ಪ್ರಾ.ಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಎಸ್ ಡಿ ಎಂ ಸಿ ಅಧ್ಯಕ್ಷ ಲೋಕೇಶ್ ಎಣ್ಮೂರುವರು ದೀಪ ಬೆಳಗಿಸುವ ಮೂಲಕ ರಾಷ್ಟ್ರೀಯ ಹಬ್ಬಕ್ಕೆ ಶುಭ ಹಾರೈಸಿದರು.

ಐಕ್ಯತಾ ಗೀತೆ “ರಘುಪತಿ ರಾಘವ ರಾಜಾರಾಮ್..ಪತೀತ ಪಾವನ ಸೀತಾರಾಮ್!” ಸಾಮೂಹಿಕವಾಗಿ ಹಾಡಲಾಯಿತು. ಮುಖ್ಯಗುರುಗಳಾದ ರಾಮೇಶಿ ಎಸ್.ರವರು ಇಬ್ಬರು ಮಹಾನ್ ನಾಯಕರ ಉದಾತ್ತ ಧ್ಯೇಯಗಳು ಮತ್ತು ಜೀವನ ಮೌಲ್ಯಗಳ ಬಗ್ಗೆ ವಿವರಿಸಿದರು.

ಎಸ್ ಡಿ ಎಂ ಸಿ ಸದಸ್ಯ ವಿಶ್ವನಾಥ್ ಕಂಚನರವರು ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟದ ಮೂಲಕ ಪಾನಮುಕ್ತ ಸಮಾಜ ನಿರ್ಮಿಸುವ ಆಶಯ ವ್ಯಕ್ತಪಡಿಸಿದರು. ಗಾಂಧೀಜಿ ಮತ್ತು ಶಾಸ್ತ್ರೀಯವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು. ಸಹಶಿಕ್ಷಕರಾದ ನಯನರವರು ಕಾರ್ಯಕ್ರಮ ನಿರೂಪಿಸಿ, ಆಶಾಲತಾರವರು ವಂದಿಸಿದರು.

LEAVE A REPLY

Please enter your comment!
Please enter your name here