ಪುತ್ತೂರು: ವಿಟ್ಲದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ರಾಷ್ಠ್ರೀಯ ಸೇವಾ ಯೋಜನಾ ಘಟಕ, ಐ.ಎಮ್.ಸಿ ಸರಕಾರಿ ಐ.ಟಿ.ಐ ವಿಟ್ಲ ಜಂಟಿಯಾಗಿ ಅ.2ರಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಜನ್ಮ ದಿನಾಚರಣೆ ಹಾಗೂ ವಿಟ್ಲ ಪಟ್ಟಣ ಪಂಚಾಯತ್ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಐ.ಎಮ್.ಸಿ ಸದಸ್ಯ ಸಿ.ಎಪ್ ಸಿಕ್ವೇರಾ ಮಾತನಾಡಿ, ಯಾವುದೇ ಕೆಲಸ ಕೀಳಲ್ಲ. ಗುಲಾಮರಂತೆ ದುಡಿದು ರಾಜನಾಗಿ ತೆರಳುವ ದಿಟ್ಟತನದ ಪೌರ ಕಾರ್ಮಿಕರ ಕಾರ್ಯ ಶ್ರೇಷ್ಟ್ರವಾದದ್ದು. ಬಾಹ್ಯ ಶುಚಿತ್ವದ ಜೊತೆಗೆ ಆಂತರಿಕ ಮನಸ್ಸಿನ ಸಂಸ್ಕಾರಯುತ ಶುಚಿತ್ವದೊಂದಿಗೆ ಸಮೃದ್ಧ ಭಾರತ ನಿರ್ಮಾಣವಾಗಲಿ ಎಂದರು.
ವಿಟ್ಲ ಪ.ಪಂನ ಪೌರ ಕಾರ್ಮಿಕರಾದ ಹನುಮಂತ ಹಾಗೂ ಕುಮಾರಿಯವರನ್ನು ಸನ್ಮಾನಿಸಲಾಯಿತು. ಸ್ವಚ್ಛತಾ ಸಪ್ತಾಹದ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕಿರಿಯ ತರಬೇತಿ ಅಧಿಕಾರಿ ಮಂಜೇಶ್ ಪ್ರಾರ್ಥಿಸಿದರು. ಜೋಯ್ಲಿನ್ ಕ್ರಾಸ್ತಾ ಸ್ವಚ್ಛತಾ ಪ್ರತಿಜ್ಞೆ ಬೋಧಿಸಿದರು. ಪ್ರಾಚಾರ್ಯ ಹರೀಶ ರಾಷ್ಟ್ರಪಿತರಿಗೆ ನುಡಿನಮನ ಸಲ್ಲಿಸಿದರು, ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಶರತ್‌ಕುಮಾರ್ ಎಸ್.ಎಚ್ ಕಾರ್ಯಕ್ರಮ ಸಂಯೋಜಿಸಿದರು. ವಿದ್ಯಾರ್ಥಿಗಳಾದ ದೀಪಾಕ್ಷ ಸ್ವಾಗತಿಸಿ, ಅಕ್ಷಯ್ ವಂದಿಸಿದರು. ಪವನ್ ಕಾರ್ಯಕ್ರಮ ನಿರ್ವಹಿಸಿದರು. ಹಾಗೂ ಎಲ್ಲಾ ಕಿರಿಯ ತರಬೇತಿ ಅಧಿಕಾರಿಗಳು ಸಹಕರಿಸಿದರು.