ಅ.4:ಬುಡೇರಿಯಾ ಶ್ರೀ ದೇವಿ ಉಳ್ಳಾಲ್ತಿ ಉಳ್ಳಾಕ್ಲು ಕ್ಷೇತ್ರದಲ್ಲಿ ನವರಾತ್ರಿ ಪೂಜೆ

0

ಆಲಂಕಾರು: ಶ್ರೀ ದೇವಿ ಉಳ್ಳಾಲ್ತಿ ಉಳ್ಳಾಕ್ಲು ಕ್ಷೇತ್ರ ಬುಡೇರಿಯಾದಲ್ಲಿ ಅ.4ಶುಕ್ರವಾರದಂದು ಬೆಳಿಗ್ಗೆ 9:00 ರಿಂದ ನವರಾತ್ರಿ ಪೂಜೆ ನಡೆಯಲಿದೆ.

ನವರಾತ್ರಿಯ ವಿಶೇಷ ಪೂಜೆಯ ಪ್ರಯುಕ್ತ ಬೆಳಿಗ್ಗೆ ಹೂವಿನ ಪೂಜೆ,ಸರ್ವಸೇವೆ, ಕುಂಕುಮಾರ್ಚನೆ, ಪಂಚಕಜ್ಜಾಯ ದೈವ ಸಂಕಲ್ಪದಂತೆ ಸೇವೆಗಳು ನಡೆಯಲಿದೆ.ಭಕ್ತಾದಿಗಳು ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವಿಕರಿಸುವಂತೆ ಊರ ಹತ್ತು ಸಮಸ್ತರ ಪರವಾಗಿ ಆಡಳಿತ ಪ್ರಮುಖರಾದ ಈಶ್ವರ ಗೌಡ ಪಜ್ಜಡ್ಕ,ಸಂಕಪ್ಪ ಗೌಡ ಗೌಡತ್ತಿಗೆ,ಸೂರಪ್ಪ ಪೂಜಾರಿ ಹೊಸಮಜಲು,ಅರ್ಚಕರಾದ ಅನಂತರಾಮ ಭಟ್ ತೋಟಂತಿಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here