ವಿಧಾನ ಪರಿಷತ್ ಚುನಾವಣೆಯ ಗೆಲುವಿಗೆ ಶಕ್ತಿ ಮೀರಿ ಕೆಲಸ ಮಾಡಿ : ಸುಭಾಶ್ಚಂದ್ರ ಶೆಟ್ಟಿ ಕುಳಾಲು
ವಿಟ್ಲ: ಮುಂಬರುವ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಪಂಚಾಯತ್ ರಾಜ್ ಸಂಘಟನೆಗೆ ಮಹತ್ತರ ವಾದ ಜವಾಬ್ದಾರಿ ಇದೆ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಮತದಾರರಾಗಿರುವುದರಿಂದ ಅಭ್ಯರ್ಥಿಗಳು ಯಾರೇ ಆಗಿರಲಿ ನಾವು ಈಗಿಂದಲೇ ಮತ ಕ್ರೋಡೀಕರಣಕ್ಕೆ ಮುಂದಾಗಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದು ಪಂಚಾಯತ್ ರಾಜ್ ಸಂಘಟನೆ ಯ ಜಿಲ್ಲಾಧ್ಯಕ್ಷರಾದ
ಸುಭಾಷ್ಚಂದ್ರ ಶೆಟ್ಟಿ ಕುಳಾಲು ಹೇಳಿದರು.
ಅವರು ದ. ಕ ಜಿಲ್ಲಾ ಕಾಂಗ್ರೆಸ್ ಕಚೇರಿ ಯಲ್ಲಿ ನಡೆದ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷ ತೆ ವಹಿಸಿ ಮಾತನಾಡಿದರು.
ಪಂಚಾಯತ್ ರಾಜ್ ಕಾರ್ಯಪಡೆ ರಚನೆಗಾಗಿ ಈಗಾಗಲೇ ಜಿಲ್ಲೆಯ ಗ್ರಾಮ ಭೇಟಿ ಮಾಡಿ ನಮೂನೆ ಪ್ರತಿ ಹಂಚಲಾಗಿದೆ. ಪ್ರತಿ ಗ್ರಾಮದಲ್ಲಿ ಕನಿಷ್ಠ 25 ಜನರ ಜಿ.ಪ. ತಾ.ಪಂ ಹಾಗೂ ಗ್ರಾಮ ಪಂಚಾಯತ್ ಗಳಲ್ಲಿ ಸದಸ್ಯರ, ಮಾಜಿ ಸದಸ್ಯರ ಮತ್ತು ಸೋತ ಅಭ್ಯರ್ಥಿ ಗಳ ತಂಡ ರಚನೆ ಮಾಡಿ ಗ್ರಾಮ ಮಟ್ಟದಲ್ಲಿ ಸಂಘಟಿತರಾಗಬೇಕು. ಈ ಸದಸ್ಯರಿಗೆ ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಕಾರ್ಯಾಗಾರ ಆಯೋಜಿಸಿ ಮುಂದಿನ ಜಿ. ಪಂ, ತಾ. ಪಂ ಮತ್ತು ಗ್ರಾಮ ಪಂಚಾಯತ್ ಚುನಾವಣೆ ಗೆ ಕಾರ್ಯೋನ್ಮುಖರಾಗಲು ಮಾಹಿತಿ, ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲೆಯಲ್ಲಿ ನಮ್ಮ ಶಾಸಕರು ಕಡಿಮೆ ಇರುವುದರಿಂದ ವಿಶೇಷ ಅನುದಾನ ತರುವಂತೆ ಮಂಜುನಾಥ್ ಭಂಡಾರಿ ಯವರಿಗೆ ಮನವಿ ಮಾಡಲು ನಿರ್ಣಯಿಸಲಾಯಿತು. ಮುಂದಿನ ಜನವರಿಯಲ್ಲಿ ನಡೆಯುವ ಹೊಂಬೆಳಕು ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕರಿಸಿ ಯಶಸ್ವಿ ಗೊಳಿಸಲು ಮನವಿ ಮಾಡಿದರು. ವೇದಿಕೆ ಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶುಭೋದಯ ಆಳ್ವ, ವೃಂದಾ ಪೂಜಾರಿ, ಹೈದರ್ ಕೈರಂಗಳ, ರಾಜಶೇಖರ್ ರೈ ಬೆಳ್ತಂಗಡಿ, ಲೀಲಾ ಮನ್ಮೋಹನ್ ಸುಳ್ಯ ಉಪಸ್ಥಿತರಿದ್ದರು.