ಪುತ್ತೂರು: ವಿದ್ಯಾಭಾರತಿ ಅಖಿಲ ಭಾರತೀ ಶಿಕ್ಷಣ ಸಂಸ್ಥೆ ಆಯೋಜಿಸಿರುವ ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯ ನಗರ ಪಾಲಿಕೆ ಪರಿಷದ್, ಪಂಡಿತ್ ದೀನ್ ದಯಾಳ್ ತರಂತಾಲ್ ನಲ್ಲಿ ಸೆಪ್ಟೆಂಬರ್ 02 ಮತ್ತು 03 ರಂದು ನಡೆದ ವಿದ್ಯಾ ಭಾರತಿ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ
9ನೇ ತರಗತಿ ವಿದ್ಯಾರ್ಥಿನಿ ಕು|ಸಿಯಾ ಭವಿನ್ ಸವಜಾನಿ (ಭವಿನ್ ಸವಜಾನಿ ಮತ್ತು ಸಹನಾ ಭವಿನ್ ಸವಜಾನಿ ದಂಪತಿ ಪುತ್ರಿ )ಇವರು, 200 ಮೀಟರ್ ಫ್ರೀ ಸ್ಟೈಲ್ ಮತ್ತು 4×100 ಮೆಡ್ಲೆಯ್ ರಿಲೇ, 4×100 ರಿಲೇ ಫ್ರೀ ಸ್ಟೈಲ್ ನಲ್ಲಿ ಚಿನ್ನದ ಪದಕ,100ಮೀಟರ್ ಬ್ಯಾಕ್ ಸ್ಟ್ರೋಕ್, 100 ಮೀಟರ್ ಫ್ರೀ ಸ್ಟೈಲ್ ನಲ್ಲಿ ಬೆಳ್ಳಿಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.
ಹಾಗೆಯೇ 8 ನೇ ತರಗತಿಯ ವಿದ್ಯಾರ್ಥಿನಿಯಾದ ಲಾಸ್ಯ ಕಿಶನ್ ( ಕಿಶನ್ ಡಿ. ಪಿ ಮತ್ತು ದೀನಾ ಕಿಶನ್ ದಂಪತಿ ಪುತ್ರಿ )50 ಮೀಟರ್ ಫ್ರೀ ಸ್ಟೈಲ್ , 50 ಮೀಟರ್ ಬ್ಯಾಕ್ ಸ್ಟ್ರೋಕ್ ಸ್ಟೈಲ್ , 50 ಮೀಟರ್ ಬ್ರೆಸ್ಟ್ ಸ್ಟ್ರೋಕ್ ಸ್ಟೈಲ್ ಮತ್ತು 4×100 ಮೀಟರ್ ರಿಲೇ ಫ್ರೀ ಸ್ಟೈಲ್ ಈಜು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದಿದ್ದಾರೆ.
ಇವರು ರಾಜಕೋಟ್ ನಲ್ಲಿ ನಡೆಯುವ ಎಸ್ ಜಿ ಐ ಎಫ್ ಮೀಟ್ ಗೆ ಆಯ್ಕೆಯಾಗಿರುತ್ತಾರೆ.
ಇವರು, ಪುತ್ತೂರಿನ ಬಾಲವನದ ಈಜು ತರಬೇತಿದಾರ ಪಾರ್ಥ ವಾರಣಾಸಿ, ನಿರೂಪ್ ಕೋಟ್ಯಾನ್ ಮತ್ತು ದೀಕ್ಷಿತ್ ಇವರಿಂದ ಸುಮಾರು 10 ವರ್ಷಗಳಿಂದ ತರಬೇತಿ ಪಡೆಯುತ್ತಿದ್ದಾರೆ.