ಪುತ್ತೂರು: ವಿನೂತನ ಶೈಲಿಯ ಚಿನ್ನಾಭರಣಗಳ ಅಪೂರ್ವ ಸಂಗ್ರಹದ, ಗ್ರಾಹಕರ ನೆಚ್ಚಿನ ಮಳಿಗೆ ಕೋರ್ಟ್‌ರಸ್ತೆಯ ಮುಳಿಯ ಜ್ಯುವೆಲ್ಸ್‌ನಲ್ಲಿ ಅ.3ರಿಂದ ನ.5ರವರೆಗೆ ನಡೆಯಲಿರುವ ಚಿನ್ನದ ಹಬ್ಬ “ಮುಳಿಯ ಚಿನ್ನೋತ್ಸವ”ಕ್ಕೆ ಅ.3ರಂದು ಚಾಲನೆ ನೀಡಲಾಯಿತು.
ಮುಳಿಯದಲ್ಲಿ ಅತ್ಯದ್ಭುತ ಕಲೆಕ್ಷನ್-ಉಮಾ ವಿ.ಎಸ್.ಕೆದಿಲಾಯ:
ಮುಖ್ಯ ಅತಿಥಿ ವಿಟ್ಲ ಜೆಸಿಐ ಸ್ಕೂಲ್‌ನ ನಿವೃತ್ತ ಶಿಕ್ಷಕಿ ಉಮಾ ವಿ.ಎಸ್.ಕೆದಿಲಾಯ ದೀಪ ಪ್ರಜ್ವಲನೆ ಮಾಡಿ ಚಿನ್ನೋತ್ಸವ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸುಮಾರು 85ನೇ ಇಸವಿಯಿಂದ ನಾನು ಮುಳಿಯದ ಗ್ರಾಹಕನಾಗಿದ್ದೇನೆ. ಮುಳಿಯ ಸಂಸ್ಥೆಯು ಸೇವೆಗೆ ಹೆಸರುವಾಸಿಯಾಗಿದೆ. ಅಲ್ಲದೆ ಮುಳಿಯ ಮಳಿಗೆಯಲ್ಲಿ ಚಿನ್ನಾಭರಣಗಳ ಕಲೆಕ್ಷನ್ ಅತ್ಯದ್ಭುತವಾಗಿದೆ. ಸಂಸ್ಥೆ ಇವತ್ತು ದೊಡ್ಡದಾಗಿ ಬೆಳೆದಿದೆ. ಇಲ್ಲಿನ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯವರ ಕೋಆರ್ಡಿನೇಟ್ ಚೆನ್ನಾಗಿದೆ ಎಂದು ಹೇಳಿ ಮುಳಿಯ ಸಂಸ್ಥೆ ಇನ್ನೂ ಎತ್ತರಕ್ಕೇರಲಿ ಎಂದು ಹಾರೈಸಿದರು.
ಮುಳಿಯದಿಂದ ನಿಷ್ಕಲ್ಮಶ ಸೇವೆ-ಸುಹಾಸ್ ಮರಿಕೆ:
ಅಮೃತ ಸಾವಯವ ಮಳಿಗೆಯ ಮಾಲಕ ಸುಹಾಸ್ ಮರಿಕೆ ಮಾತನಾಡಿ ಮುಳಿಯ ಮತ್ತು ನಮಗೆ ಅವಿನಾಭಾವ ಸಂಬಂಧ. ಮುಳಿಯದಿಂದ ನಿಷ್ಕಲ್ಮಶ ಸೇವೆ ಇದೆ. ಪುತ್ತೂರಿನಲ್ಲಿ ಇರುವವರೆಲ್ಲರೂ ನಮ್ಮವರು ಎಂಬ ಭಾವನೆ ಮುಳಿಯದವರಲ್ಲಿದೆ. ಇಲ್ಲಿನ ಚಿನ್ನಾಭರಣಗಳ ಸಂಗ್ರಹ, ಶೈಲಿ ಶ್ಲಾಘನೀಯವಾದುದು. ನನ್ನ ವ್ಯವಹಾರಕ್ಕೂ ತುಂಬಾ ಪ್ರೋತ್ಸಾಹ ನೀಡಿದ್ದಾರೆ ಎಂದ ಅವರು ಅವಕಾಶ ನೀಡಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.
ಮುಳಿಯ ಅಂದರೆ ಚಿನ್ನ ಎಂಬಂತಾಗಿದೆ-ಲಲಿತಾ ಭಟ್:
ಎಲ್‌ಜಿಎಲ್ ಫುಡ್ಸ್‌ನ ನಿರ್ದೇಶಕಿ ಲಲಿತಾ ಭಟ್ ಮಾತನಾಡಿ ಚಿನ್ನ ಅಂದರೆ ಮುಳಿಯ, ಮುಳಿಯ ಅಂದರೆ ಚಿನ್ನ ಎಂದು ಪ್ರಸಿದ್ಧವಾಗಿದೆ. ಚಿನ್ನ ಅಂದರೆ ಶುಭವೂ ಹೌದು. ಎಲ್ಲಾ ಶುಭ ಸಂದರ್ಭಗಳಲ್ಲಿಯೂ ಚಿನ್ನ ಬಳಸುತ್ತೇವೆ. ನವರಾತ್ರಿ ಹಬ್ಬದ ಸಂದರ್ಭದಲ್ಲಿ ಚಿನ್ನೋತ್ಸವ ಆರಂಭವಾಗಿದೆ. ಚಿನ್ನ ನಮ್ಮ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿ ಶುಭಹಾರೈಸಿದರು.
ನಂಬಿಕೆಗೆ ಹೆಸರುವಾಸಿ ಮುಳಿಯ-ಗಣೇಶ್ ಭಟ್:
ಪ್ರಥಮ ಖರೀದಿದಾರರಾದ ದರ್ಬೆ ಉಷಾ ಮೆಡಿಕಲ್ ಮಾಲಕ ಗಣೇಶ್ ಭಟ್ ಮಾತನಾಡಿ ಯಾವುದೇ ವ್ಯವಹಾರದಲ್ಲಿ ನಂಬಿಕೆ ಮುಖ್ಯ. ಅದನ್ನು ನಿರ್ವಹಣೆ ಮಾಡಿಕೊಂಡು ಬರುವುದು ಕಷ್ಟ. ಮುಳಿಯ ಸಂಸ್ಥೆ ಹಲವು ವರ್ಷಗಳಿಂದ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಇದರಿಂದ ಸಂಸ್ಥೆ ದೊಡ್ಡ ಮಟ್ಟಕ್ಕೆ ಬೆಳೆದಿದೆ. ಕುಟುಂಬದ ಎರಡು ಮೂರು ತಲೆಮಾರು ಕೂಡ ಮುಳಿಯ ಗ್ರಾಹಕರಾಗಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ: ಮುಳಿಯ ಚಿನ್ನೋತ್ಸವದ ಪ್ರಯುಕ್ತ 1ರಿಂದ 5ನೇ ತರಗತಿ ಹಾಗೂ 6ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದ್ದು ಇದರ ಫಲಿತಾಂಶ ಅ.12ರಂದು ಘೋಷಣೆಯಾಗಲಿದೆ.
ಚಿನ್ನೋತ್ಸವದ ನೂತನ ಆಭರಣಗಳ ಪ್ರದರ್ಶನ ನಡೆಯಿತು. ಮುಳಿಯ ಜ್ಯುವೆಲ್ಸ್ ನಿರ್ದೇಶಕಿ ಅಶ್ವಿನಿಕೃಷ್ಣ ಮುಳಿಯ, ಶೋರೂಮ್ ಮ್ಯಾನೇಜರ್ ರಾಘವೇಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಬಂದಿಗಳಾದ ಯತೀಶ್ ಆಚಾರ್ಯ ಸ್ವಾಗತಿಸಿ ಆನಂದ ಕುಲಾಲ್ ವಂದಿಸಿದರು. ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು.
ಚಿನ್ನೋತ್ಸವದಲ್ಲಿ ಮೆರುಗು ನೀಡಲಿರುವ ಆಭರಣಗಳು
ಚಿನ್ನೋತ್ಸವದಲ್ಲಿ ಟರ್ಕಿ ರೂಬಿ ಡಿಸೈನ್, ಕಿಸ್ನ ಡೈಮಂಡ್, ಅಮೂಲ್ಯ ಡೈಮಂಡ್, ರೂಬಿ ಎಮರಾಲ್ಡ್ ಕಲೆಕ್ಷನ್, ಅರ್ಧ ಗ್ರಾಂ.ನಿಂದ ಪ್ರಾರಂಭವಾದ ಲೈಟ್‌ವೈಟ್ ನೆಕ್ಲೆಸ್‌ಗಳು, ಆಂಟಿಕ್ ದೇವರ ಪೆಂಡೆಂಟ್, ಇಲೆಕ್ಟ್ರೋಫಾರ್ಮಿಂಗ್ ಆಭರಣಗಳು, 1200ಕ್ಕೂ ಹೆಚ್ಚಿನ ಡಿಸೈನ್‌ಗಳು ವಿಶೇಷವಾಗಿದೆ.
ಚಿನ್ನೋತ್ಸವದ ಪ್ರಥಮ ಖರೀದಿ
ಚಿನ್ನೋತ್ಸವದಲ್ಲಿ ದರ್ಬೆ ಉಷಾ ಮೆಡಿಕಲ್ ಮಾಲಕ ಗಣೇಶ್ ಭಟ್ ದಂಪತಿ ಹಾಗೂ ನಿವೃತ್ತ ಶಿಕ್ಷಕಿ ಉಮಾ ವಿ.ಎಸ್.ಕೆದಿಲಾಯ ದಂಪತಿ ಪ್ರಥಮ ಖರೀದಿ ಮಾಡಿದರು.
ಚಿನ್ನ ಎಂಬುದು ಎನಿವೇರ್ ಮತ್ತು ಎನಿಟೈಮ್ ಮನಿ
ಈಗ ಹಬ್ಬಗಳ ಸಮಯ. ಜಗತ್ತಿನಲ್ಲಿ ಚಿನ್ನ ಮತ್ತು ಭೂಮಿ ಮೌಲ್ಯಯುತವಾದದ್ದು. ಉಪಯೋಗ ಮಾಡಿದರೂ ಅದರ ಮೌಲ್ಯ ಕಡಿಮೆಯಾಗುವುದಿಲ್ಲ. ಚಿನ್ನ ಎಂದರೆ ಎನಿವೇರ್ ಮತ್ತು ಎನಿಟೈಮ್ ಮನಿ. ಒಂದುಸಾವಿರ ವರ್ಷದ ಹಿಂದೆಯೂ, ಇನ್ನು ಮುಂದೆಯೂ ಚಿನ್ನಕ್ಕೆ ಮೌಲ್ಯ ಇದೆ. ಪ್ರಪಂಚದ ಎಲ್ಲಿಯೂ ಚಿನ್ನಕ್ಕೆ ಮೌಲ್ಯ ಸಿಕ್ಕಿಯೇ ಸಿಗುತ್ತದೆ. ಚಿನ್ನವನ್ನು ಸಂಭ್ರಮಾಚರಣೆಯೊಂದಿಗೆ ಖರೀದಿ ಮಾಡುವ ಉದ್ದೇಶದಿಂದ ಚಿನ್ನೋತ್ಸವ ಆರಂಭಿಸಿದ್ದೇವೆ. ಗ್ರಾಹಕರು ಖರೀದಿ ಮಾಡಿ ಸಂಭ್ರಮಾಚರಣೆ ಮಾಡಿ…
ಕೃಷ್ಣಪ್ರಸಾದ್ ಮುಳಿಯ
ಮ್ಯಾನೇಜಿಂಗ್ ಡೈರೆಕ್ಟರ್