ನೆಲ್ಯಾಡಿ: ಶ್ರೀಹಿರನ್ಮಯಿ ಮಹಿಳಾ ಯಕ್ಷಗಾನ ಕಲಾ ಸಂಘ ಉದ್ಘಾಟನೆ

0

ನೆಲ್ಯಾಡಿ: ಯಕ್ಷಗಾನ ಭಾಗವತ ಲಕ್ಷ್ಮೀನಾರಾಯಣ ಶೆಟ್ಟಿ ಕುಂಡಡ್ಕ ಅವರ ಸಾರಥ್ಯದಲ್ಲಿ ಮಹಿಳಾ ಯಕ್ಷಗಾನ ಕಲಾ ಸಂಘ ಅ.3ರಂದು ನೆಲ್ಯಾಡಿಯಲ್ಲಿ ಉದ್ಘಾಟನೆಗೊಂಡಿತು.


ಯಕ್ಷಪ್ರೇಮಿ ಆನಂದ ಶೆಟ್ಟಿ ಅವರು ಉದ್ಘಾಟಿಸಿ ಶುಭಹಾರೈಸಿದರು. ನೆಲ್ಯಾಡಿ ಗ್ರಾ.ಪಂ.ಸದಸ್ಯ ಜಯಾನಂದ ಬಂಟ್ರಿಯಾಲ್ ಅವರು ಮಾತನಾಡಿ, ಈ ಮಹಿಳಾ ಯಕ್ಷಗಾನ ಕಲಾತಂಡವು ಉತ್ತಮವಾದ ತಂಡವಾಗಿ ಮೂಡಿಬರಲಿ ಎಂದು ಹೇಳಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಅರಸಿನಮಕ್ಕಿ ಲತೀಶ್ ಯಕ್ಷಗಾನ ಕಲಾವಿದ ಸುಂದರ ಗೌಡ, ಮಹಾಬಲ ಶೆಟ್ಟಿ, ಚಂದ್ರಹಾಸ ಶೆಟ್ಟಿ ಕುಂಡಡ್ಕ, ಸಂತ ಚಾರ್ಜ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವಿಶ್ವನಾಥ್ ಶೆಟ್ಟಿ ಹಾಗೂ ಶ್ರೀಹಿರನ್ಮಯಿ ಮಹಿಳಾ ಯಕ್ಷಗಾನ ಕಲಾ ಸಂಘದ ಕಲಾವಿದರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here