ಮಣಿಕ್ಕರ ಸರಕಾರಿ ಪ್ರೌಢಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಗ್ರಾಮ ಗ್ರಾಮಗಳ ಮುಕ್ತ ವಾಲಿಬಾಲ್ ಪಂದ್ಯಾಟ

0

ಪುತ್ತೂರು : ಸರಕಾರಿ ಪ್ರೌಢಶಾಲೆ ಮಣಿಕ್ಕರ ಇದರ ಹಿರಿಯ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಿದ್ದ ಗ್ರಾಮ ಗ್ರಾಮಗಳ ಮುಕ್ತ ವಾಲಿಬಾಲ್ ಪಂದ್ಯಾಟ ಮಣಿಕ್ಕರ ಶಾಲಾ ಮೈದಾನದಲ್ಲಿ ನಡೆಯಿತು.

ನ್ಯೂ ಬ್ರದರ್ಸ್ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಪಾಲ್ತಾಡು ಇದರ ಗೌರವಾಧ್ಯಕ್ಷ ಸುನಿಲ್ ರೈ ಪಾಲ್ತಾಡು  ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಧ್ಯಕ್ಷತೆಯನ್ನು ಮಣಿಕ್ಕರ ಪ್ರೌಢಶಾಲಾ ಮುಖ್ಯ ಶಿಕ್ಷಕಿ ನಳಿನಿ ಕೆ. ಅವರು ವಹಿಸಿದ್ದರು. ಅತಿಥಿಗಳಾಗಿ ಪುತ್ತೂರು ತಾ.ಪಂ.ನ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ,ಮಣಿಕ್ಕರ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ವಿಶಾಲಾಕ್ಷಿ , ಸಾಮಾಜಿಕ ಮುಂದಾಳು  ಮನೋಜ್ ರೈ ಮಾಡಾವು ಉಪಸ್ಥಿತರಿದ್ದರು.

 ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯೆ  ಅಶ್ವಿನಿ ಪ್ರಾರ್ಥಿಸಿ ,ಹಿರಿಯ ವಿದ್ಯಾರ್ಥಿ ಸಂಘದ ಮಾರ್ಗದರ್ಶಿ ಶಿಕ್ಷಕಿ  ಗೀತಾ ಬಿ,ವಿ ಸ್ವಾಗತಿಸಿ,  ಸುಗುಣ ಎ ವಂದಿಸಿದರು.ದೈಹಿಕ ಶಿಕ್ಷಣ ಶಿಕ್ಷಕ ಕರುಣಾಕರ ಮಣಿಯಾಣಿ ಕಾರ್ಯಕ್ರಮ ನಿರೂಪಿಸಿದರು.

ಗೌರವಾರ್ಪಣೆ 
ಇದೇ ಸಂದರ್ಭದಲ್ಲಿ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟಕ್ಕೆ ಅಂಕಣವನ್ನು ಕೊಡುಗೆಯಾಗಿ ನೀಡಿದ ಮನೋಜ್ ರೈ ಮಾಡಾವು  ಅವರನ್ನು ಗೌರವಿಸಲಾಯಿತು.

 ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟದ ಸಂಘಟಕರಾಗಿ ಅದ್ಭುತ ಯಶಸ್ಸಿಗೆ ಕಾರಣೀಭೂತರಾದ ಕರುಣಾಕರ ಮಣಿಯಾಣಿ ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್ 1 ಸರಕಾರಿ ಪ್ರೌಢಶಾಲೆ ಮಣಿಕ್ಕರ ಇವರನ್ನು ಹಿರಿಯ ವಿದ್ಯಾರ್ಥಿಗಳು ಹಾಗೂ ಊರ ಕ್ರೀಡಾಭಿಮಾನಿಗಳ ಪರವಾಗಿ ಗೌರವಿಸಲಾಯಿತು.ಕ್ರೀಡಾಂಗಣದ ಉದ್ಘಾಟನೆಯನ್ನು ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಪಿ ಅಬ್ಬಾಸ್ ಪೆರ್ಜಿ ನೆರವೇರಿಸಿದರು. 

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಣಿಕ್ಕರ ಸರಕಾರಿ ಪ್ರೌಢಶಾಲೆಯ ಕಾರ್ಯಾಧ್ಯಕ್ಷ ಶ್ರೀ ಸೈಯದ್ ಗಫೂರ್ ಸಾಹೇಬ್  ವಹಿಸಿದ್ದರು. ಅತಿಥಿಗಳಾಗಿ ಪಾಲ್ತಾಡು  ನ್ಯೂ ಬ್ರದರ್ಸ್ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಪಾಲ್ತಾಡು ಇದರ ಅಧ್ಯಕ್ಷ ಹನೀಫ್ ಕುಂಡಡ್ಕ ,ಇ ಇನ್ಶೂರೆನ್ಸ್ ಸರ್ವೆಯರ್ ಜಯರಾಮ ಗೌಡ ಹಿರಿಂಜ  ಪುತ್ತೂರು,  ಹಿರಿಯ ವಿದ್ಯಾರ್ಥಿ ಸಂಘ ಸರಕಾರಿ ಪ್ರೌಢಶಾಲೆ ಮಣಿಕ್ಕರ ಇದರ ಅಧ್ಯಕ್ಷ ಅಬ್ದುಲ್ ಸಲಾಂ ಪಿ,ಮಣಿಕರ ಹಿರಿಯ ಪ್ರಾಥಮಿಕ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಶರೀಫ್ ನೆಟ್ಟಾರು,ಮಾಜಿ ಅಧ್ಯಕ್ಷ ಅಬ್ದುಲ್ ರಹೀಮ್  , ಪಾಲ್ತಾಡು ಶ್ರೀ ಅಮ್ಮನವರ ಸೇವಾ ಸಮಿತಿ ಅಧ್ಯಕ್ಷ  ಮಧುಸೂಧನ, ಪಿಡಬ್ಲೂಡಿ ಗುತ್ತಿಗೆದಾರ ಇಸಾಕ್ ಸಾಹೇಬ್ ಪಾಲ್ತಾಡು , ಶ್ರೀದೇವಿ ಕ್ರಿಕೆಟರ್ಸ್ ಪಾಲ್ತಾಡು ಅಧ್ಯಕ್ಷ ಶರತ್ , ಉದ್ಯಮಿಗಳಾದ ಸಲೀಂ ದಿಲ್ ಶಾದ್, ಬದ್ರುದ್ದೀನ್ ಪಾಲ್ತಾಡು ಭಾಗವಹಿಸಿದ್ದರು.

ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಪಿ ಅಬ್ಬಾಸ್ ಪೆರ್ಜಿ  ಬಹುಮಾನವನ್ನು ವಿತರಿಸಿದರು .ಪಂದ್ಯಾಟದ ಪ್ರಥಮ ಬಹುಮಾನವನ್ನು ಯು ಎಫ್ ಸಿ ಬೀರಿ ಉಳ್ಳಾಲ , ದ್ವಿತೀಯ ಬಹುಮಾನವನ್ನು ಯುನೈಟೆಡ್ ಬಿಸಿ ರೋಡ್, ತೃತೀಯ ಬಹುಮಾನವನ್ನು ಫಿಟ್ ಫೈಟರ್ಸ್ ಕಾರ್ಕಳ ಇವರು ಪಡೆದುಕೊಂಡರು. 

ಮುಖ್ಯ ವೀಕ್ಷಕ ವಿವರಣೆಗಾರರಾಗಿ  ಹನೀಫ್ ಕುಂದಾಪುರ ಹಾಗೂ ಸಹ ವೀಕ್ಷಕ ವಿವರಣೆಯನ್ನು  ಪ್ರಜ್ವಲ್ ರೈ ಚೆನ್ನಾವರ ,  ತೀರ್ಪುಗಾರರಾಗಿ ರಫೀಕ್ ಆತೂರು, ಮೋಹಿತ್ ಏನೇಕಲ್, ಕರುಣಾಕರ ಮಣಿಯಾಣಿ ,ಜಿಯಾ ಬೊಳ್ಳಾಯಿ ಜಾನ್ ಪಟ್ಟೆ ,ವಿಕಾಸ್ ಗಾಣಿಗ, ಅನ್ವರ್ ಬೀರಿ, ಆಸಿಫ್ ಮಾಡಾವು ಸಹಕರಿಸಿದರು. ಲೈನ್ ರೆಫ್ರಿಯಾಗಿ ಅಕ್ಷಯ್ ,ಸುಜನ್, ಅವಿನಾಶ್ ಮತ್ತು ಪ್ರೌಢಶಾಲಾ ವಾಲಿಬಾಲ್ ತಂಡವು ಸಹಕರಿಸಿತು.

ಸ್ಕೋರರಾಗಿ ಸೂರಜ್, ರೂಪಿತ್ ,ರವಿ, ಲೋಕೇಶ್ ,ವಿನೋದ್ ,ಶಮಂತ್ ಸಹಕರಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಸರ್ವ ಸದಸ್ಯರು ಊರ ಪರ ಊರ ಕ್ರೀಡಾಭಿಮಾನಿಗಳು ಭಾಗವಹಿಸಿ ಪಂದ್ಯಾಟವನ್ನು ಯಶಸ್ವಿಗೊಳಿಸಿದರು.ಸರಕಾರಿ ಪ್ರೌಢಶಾಲೆ ಮಣಿಕ್ಕರ ಇಲ್ಲಿನ ಹಿರಿಯ ವಿದ್ಯಾರ್ಥಿ ಸಂಘ  ಪ್ರಪ್ರಥಮ ಬಾರಿ ಆಯೋಜಿಸಿದ ಪಂದ್ಯಾಟವು ಅತ್ಯಂತ ವಿಜ್ರಂಭಣೆಯಿಂದ ಯಶಸ್ವಿಯಾಗಿ ನಡೆಯಿತು.

LEAVE A REPLY

Please enter your comment!
Please enter your name here