ಚೆಸ್ ಆಟದಿಂದ ಎಕಾಗ್ರತೆ ಮತ್ತು ಜ್ಞಾಪಕ ಶಕ್ತಿ ಹೆಚ್ಚುತ್ತದೆ – ಲೋಹಿತ್ ಅಜಯ್ ಮಸ್ಕರೇನಸ್
ಪುತ್ತೂರು: ಉಬಾರ್ ಚೆಸ್ ಅಕಾಡೆಮಿ ಇದರ ವತಿಯಿಂದ ಮಾಯಿದೆ ದೇವುಸ್ ಸಮೂಹ ಸಂಸ್ಥೆಗಳು ಮತ್ತು ದಕ್ಷಿಣ ಕನ್ನಡ ಚೆಸ್ ಅಕಾಡೆಮಿ ಇದರ ಸಹಯೋಗದಲ್ಲಿ ಅಂತರ್ ಜಿಲ್ಲಾ ಚೆಸ್ ಸ್ಪರ್ಧೆ ಉಬಾರ್ ಚೆಸ್ ಟ್ರೋಫಿ 2024 ಇದರ ಸಮಾರೋಪ ಸಮಾರಂಭ ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಅ. 4 ರಂದು ಸಂಜೆ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ಚರ್ಚ್ ಪಾಲನ ಸಮಿತಿಯ ಸಹಾಯಕ ಧರ್ಮಗುರು ರೆ.ಫಾ. ಲೋಹಿತ್ ಅಜಯ್ ಮಸ್ಕರೇನಸ್ ಮಾತನಾಡಿ ಚೆಸ್ ಆಟದಿಂದ ಎಕಾಗ್ರತೆ ಮತ್ತು ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಮತ್ತು ಯಾವುದೇ ಕ್ಲಿಷ್ಟವಾದ ಪರಿಸ್ಥಿತಿಯನ್ನು ನಿಭಾಯಿಸಲು ಸಹಕಾರಿಯಾಗುತ್ತದೆ ಇದರಿಂದ ಈ ಆಟದ ಬಗ್ಗೆ ಹೆಚ್ಚು ಆಸಕ್ತಿಯನ್ನು ಬೆಳೆಸಿಕೊಳ್ಳ ಬೇಕೆಂದರು.
ಜೋಸ್ ಅಲೂಕಾಸ್ ಚಿನ್ನದ ಮಳಿಗೆ ಪುತ್ತೂರು ಇದರ ವ್ಯವಸ್ಥಾಪಕ ರಿತೇಶ್ ಸಿ. ಪಿ.,ಸಂಗೀತ ನಿರ್ದೇಶಕ ಪ್ರಸಾದ್ ಕೆ.ಶೆಟ್ಟಿ ,ಮಾಯಿದೆ ದೇವುಸ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಜಾನೆಟ್ ಡಿ ‘ಸೋಜಾ ವಿಜೇತರಿಗೆ ಬಹುಮಾನ ವಿತರಿಸಿದರು.
ಸೈಂಟ್ ವಿಕ್ಟರ್‍ಸ್ ಶಾಲಾ ಮುಖ್ಯಗುರು ಹ್ಯಾರಿ ಡಿ ‘ಸೋಜಾ ಸ್ವಾಗತಿಸಿದರು, ಕೆಪಿಎಸ್ ಕೆಯ್ಯೂರು ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು, ಪ್ರೊ. ಭವ್ಯ ವಂದಿಸಿದರು.
ಇತಿಹಾಸ ಸೃಷ್ಠಿಸಿದ ಚೆಸ್ ಸ್ಪರ್ಧೆ
ಇಂದಿನ ಚೆಸ್ ಸ್ಪರ್ಧೆಯಲ್ಲಿ ಸುಮಾರು 600 ಕ್ಕಿಂತಲೂ ಹೆಚ್ಚಿನ ಸ್ಪರ್ಧಾಳುಗಳು ಭಾಗವಹಿಸಿ ಇತಿಹಾಸ ಸೃಷ್ಠಿಯಾಗಿದೆ. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ವಿವಿಧ ವಿಭಾಗಗಳಲ್ಲಿ ಚೆಸ್ ಸ್ಫರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತರಾದವರಿಗೆ ಅಭಿನಂದನೆಗಳು ಮತ್ತು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು- ಜಗನ್ನಾಥ ಅಡಪ ನಿರ್ದೇಶಕರು ಉಬಾರ್ ಚೆಸ್ ಅಕಾಡೆಮಿ.