ಪುತ್ತೂರು: ನೆಹರುನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಅ.1ರಂದು ‘ಇನ್ನೊವೇಷನ್ ಕ್ಲಬ್ʼ ಉದ್ಘಾಟನೆಗೊಂಡಿತು.
ಅತಿಥಿಗಳಾಗಿ ಆಗಮಿಸಿದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜ್ ನ ಉಪನ್ಯಾಸಕರಾದ ಶ್ರೇಯಸ್ ಎಚ್. ಮತ್ತು ವೆಂಕಟೇಶ್ ವೈ. ಸಿ.ರವರು ಐಒಟಿ (internet of things)ಯ ಬಗ್ಗೆ ಸೂಕ್ತ ಮಾಹಿತಿ ಮತ್ತು ಸಲಹೆಗಳನ್ನು ನೀಡಿದರು. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜ್ ನ ಸ್ಕಿಲ್ ಡೆವಲಪ್ ಮೆಂಟ್ ಸೆಂಟರ್ ನ ತರಬೇತುದಾರವೆಂಕಟೇಶ್ ರವರು ಅನಿಲ ಸಂವೇದಕವನ್ನು ಬಳಸಿಕೊಂಡು ಹೊಗೆ ಶೋಧಕ (Smoke Detector using Gas Sensor)ಮತ್ತು ಆರ್ಡುನೊ ಜೊತೆ ಮಣ್ಣಿನ ತೇವಾಂಶ ಸಂವೇದಕ (Soil Moisture Sensor with Arduino)ದ ಬಗ್ಗೆ ಮಕ್ಕಳಿಗೆ ಪ್ರಾತ್ಯಕ್ಷಿಕೆ ನೀಡಿದರು.
ಶಾಲಾ ಪ್ರಾಂಶುಪಾಲರಾದ ಸಿಂಧು ವಿ.ಜಿ. ಸ್ವಾಗತಿಸಿ, ಧನ್ಯವಾದವಿತ್ತರು. ಕಾರ್ಯಕ್ರಮದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.