ಪುತ್ತೂರು: ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ(ರಿ.) ತಂಡದ ಕಲಾವಿದೆ ಸ್ವಾತಿ ಮುರಳಿ ವೆಂಕಟೇಶ್ ಇವರು ಕೇರಳದ ಪಾಲಕ್ಕಾಡ್‌ನಲ್ಲಿ ಆರಂಭಿಸಿದ ‘ನೃತ್ಯೋಹಂ’ ಸ್ಕೂಲ್
ಆಫ್ ಡ್ಯಾನ್ಸ್ ಕೇಂದ್ರವನ್ನು ನೃತ್ಯೋಪಾಸನಾ ಕಲಾ ಅಕಾಡೆಮಿ ಸಂಸ್ಥಾಪಕಿ, ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಉದ್ಘಾಟಿಸಿದರು.
ದೇವರನಾಡೇ ಎಂದು ಖ್ಯಾತಿ ಪಡೆದ ಕೇರಳದಲ್ಲಿ ನನ್ನ ಶಿಷ್ಯೆ, ನಮ್ಮ ತಂಡದ ಕಲಾವಿದೆ ಸ್ವಾತಿ ಅವರು ಭರತನಾಟ್ಯ ಶಾಸ್ತ್ರೀಯ ನೃತ್ಯ ತರಗತಿಯನ್ನು ಆರಂಭಿಸುತ್ತಿರುವುದು
ಹೆಮ್ಮೆಯ ಸಂಗತಿ. ಕಲೆ, ಸಂಸ್ಕೃತಿಯನ್ನು ಎಲ್ಲರೂ ಮೈಗೂಡಿಸಿಕೊಂಡಾಗ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ. ಶಾಸ್ತ್ರೀಯ ನೃತ್ಯ ಕಲೆಗಳು ಇನ್ನಷ್ಟು ಬೆಳೆಯಲಿ ಎಂದು ವಿದುಷಿ
ಶಾಲಿನಿ ಆತ್ಮಭೂಷಣ್ ಹಾರೈಸಿದರು.
ಅಳುಕುಂಗರ ಭಗವತಿ ದೇವಸ್ಥಾನದ ಅಧ್ಯಕ್ಷ ರಿಜೋಶ್, ಮೂಡಪಳ್ಳೂರು ಕಿರಕೇತರ ಸಮುದಾಯ ಭವನದ ಅಧ್ಯಕ್ಷೆ ಮಣಿ ಕಾರ್ತಿಕೇಯನ್ ಅತಿಥಿಗಳಾಗಿ ಶುಭ ಹಾರೈಸಿದರು.
ನೃತ್ಯೋಹಂ ಕೇಂದ್ರದ ನೃತ್ಯ ಶಿಕ್ಷಕಿ ಸ್ವಾತಿ ಮುರಳಿ ವೆಂಕಟೇಶ್ ಸ್ವಾಗತಿಸಿದರು. ಪಾಲಕ್ಕಾಡ್ ಜಿಲ್ಲಾ ವನಿತಾ ಸಭಾ ಅಧ್ಯಕ್ಷೆ ರೇಖಾ ಗೋವಿಂದ್ ನಿರೂಪಿಸಿದರು.