
ಕಡಬ: ಇಲ್ಲಿನ ಪಣೆಮಜಲು ಶ್ರೀ ಸಬ್ಬಮ್ಮ ದೇವಿ ಸನ್ನಿಧಿಯಲ್ಲಿ ನವರಾತ್ರಿ ಪ್ರಯುಕ್ತ ಶ್ರೀ ದೇವಿಗೆ ವಿಶೇಷ ಮಹಾಪೂಜೆ, ಹೊಸ್ತಾರೋಹಣ ಹಾಗೂ ಆಯುಧ ಪೂಜೆ ಕಾರ್ಯಕ್ರಮ ಕೆಂಚಭಟ್ರೆ ಶ್ರೀ ಸುಬ್ರಹ್ಮಣ್ಯ ಬೈಪಾಡಿತ್ತಾಯರ ನೇತೃತ್ವದಲ್ಲಿ ಅ.8ರಂದು ನಡೆಯಿತು.
ಪೂರ್ವಾಹ್ನ ಕೃತಿ ಶಶಿಧರ್ ಹಾಗೂ ಮಕ್ಕಳಿಂದ ತಂಬಿಲ ಸೇವೆ ನಡೆಯಿತು. ಬಳಿಕ ಹೊಸ್ತಾರೋಹಣ ಹಾಗೂ ವಾಹನಗಳಿಗೆ ಆಯುಧ ಪೂಜೆ ನಡೆದು ಶ್ರೀ ದೇವಿಗೆ ಮಹಾಪೂಜೆ,ಪ್ರಸಾದ ವಿತರಣೆ ನಡೆಯಿತು. ಬಳಿಕ ನಡೆದ ಅನ್ನಸಂತರ್ಪಣೆಯ ಸೇವೆಯನ್ನು ಈಶ್ವರ ವೆಂಕಟಸುಬ್ಬ ಗಾನವಿ, ಕು.ಶ್ವೇತಾ ಪತ್ತೆಕೊಲ್ಲು, ಲಂಡನ್ ಇವರು ನಡೆಸಿದ್ದರು.
ಕಾರ್ಯಕ್ರಮಕ್ಕೆ ಕಡಬ ಸಿ.ಎ.ಬ್ಯಾಂಕ್ ಮಾಜಿ ಅಧ್ಯಕ್ಷ ಚಂದ್ರಶೇಖರ ಕೋಡಿಬೈಲು, ಸೀತಾರಾಮ ಗೌಡ ಎ, ಪ್ರಸಾದ್ ಅಲೂಂಗೂರು, ಕುಶಾಲಪ್ಪ ಗೌಡ ಅಂಙಣ, ಕಡಬ ಪ್ರಾ.ಕೃ.ಪ.ಸಹಕಾರ ಸಂಘದ ನಿದರ್ೇಶಕ ಸತೀಶ್ ನಾಕ್ ಮೇಲಿನ ಮನೆ, ವಿವೇಕಾನಂದ ಬೊಳ್ಳಾಜೆ, ಸೀತಾರಾಮ ಗೌಡ ಹೊಸಮನೆ, ಕಡಬ ಗ್ರಾ.ಪಂ. ಮಾಜಿ ಅಧ್ಯಕ್ಷೆ ನೀಲಾವತಿ ಶಿವರಾಮ, ಮಾಜಿ ಸದಸ್ಯ ಕೃಷ್ಣಪ್ಪ ಪೂಜಾರಿ ಬೈಲಂಗಡಿ ಮೊದಲಾದವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಕುಟುಂಬದ ಮುಖ್ಯಸ್ಥ ಜಣಾರ್ದನ ಗೌಡ, ಧಾರ್ಮಿಕ ಸಮಿತಿಯ ಅಧ್ಯಕ್ಷ ಗಣಪಯ್ಯ ಗೌಡ ಅಂಙಣ ಉಪಸ್ಥಿತರಿದ್ದರು. ಪ್ರಮುಖರಾದ ಪಣೆಮಜಲಿನ ಕೇಶವ ಗೌಡ, ರೋಹಿತ್ ಪಿ.ಜೆ. ಹರಿಪ್ರಸಾದ್, ನಾಗೇಶ್, ನಾರ್ಣಪ್ಪ ಗೌಡ, ಜತ್ತಪ್ಪ ಗೌಡ, ಸುಂದರ ಗೌಡ, ಸಂತೋಷ್, ಅಕ್ಷಿತ್, ಪವನ್, ಗಂಗಾಧರ ಗೌಡ, ನಾರಾಯಣ ಗೌಡ, ಶಶಿಧರ ಗೌಡ, ಜನಾರ್ದನ ಮೆಕ್ಯಾನಿಕ್, ಕಮಲ, ದಮಯಂತಿ, ಹರಿಣಾಕ್ಷಿ, ಚಂದ್ರಾವತಿ, ವಿಮಲ, ಗೀತಾ ಲೋಕೇಶ್, ಗೀತಾ ಜನಾರ್ದನ, ಆತರ್ಿಲದ ಲೋಕೇಶ್, ಸುಂದರ ಗೌಡ, ಗಣೇಶ್, ಸೀತಾರಾಮ, ನಾರಾಯಣ, ಅಂಙಣದ ದಾಮೋಧರ ಗೌಡ, ವೆಂಕಟ್ರಮಣ ಗೌಡ, ಶೇಖರ ಗೌಡ, ಈಶ್ವರ ಗೌಡ, ದಯಾನಂದ ಕಾಯಾರ, ಚಿದಾನಂದ ಗೌಡ ದೇವುಪಾಲ್, ಲಿಂಗಪ್ಪ ಗೌಡ ಕೆರೆಮುದೇಲು ಇವರುಗಳು ಸಹಕರಿಸಿದರು.