ಪುತ್ತೂರು: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಪುತ್ತೂರು ಇದರ ಸಹಸಂಸ್ಥೆ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾಮಾಜಿಕ ಜಾಗೃತಿಯಡಿಯಲ್ಲಿ ʼಸರಳ ಕಾನೂನುಗಳ ಅರಿವಿಲ್ಲದೆ ಮೋಸಹೋಗದಿರಿʼ ಎಂಬ ಪುಸ್ತಕ ಬಿಡುಗಡೆ ಮತ್ತು ಹಿರಿಯ ನಾಗರಿಕರ ಕಾಯ್ದೆ ಕುರಿತು ಉಪನ್ಯಾಸ ಕಾರ್ಯಕ್ರಮವು ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಸಹಕಾರ ರತ್ನ ಎಸ್. ಆರ್. ಸತೀಶ್ಚಂದ್ರ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.
ʼಸರಳ ಕಾನೂನುಗಳ ಅರಿವಿಲ್ಲದೆ ಮೋಸಹೋಗದಿರಿʼ ಪುಸ್ತಕವನ್ನು ಪುತ್ತೂರಿನ ಖ್ಯಾತ ವಕೀಲರಾದ ಬೆಟ್ಟ ಅಸೋಸಿಯೇಟ್ಸ್ ನ ಬೆಟ್ಟ ಪಿ ಈಶ್ವರ ಭಟ್ ಬಿಡುಗಡೆಗೊಳಿಸಿ, ಕಾನೂನಿನ ಜ್ಞಾನದ ಮಹತ್ವದ ಕುರಿತು ಬೆಳಕು ಚೆಲ್ಲಿ ಶುಭ ಹಾರೈಸಿದರು.
ಪುಸ್ತಕದ ಲೇಖಕರು, ವಕೀಲರು ಮತ್ತು ನೋಟರಿ ಆಗಿರುವ ಡಾ. ಅಕ್ಷತಾ ಆದರ್ಶ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತಮ್ಮ ಚೊಚ್ಚಲ ಕೃತಿಯ ಕುರಿತು ಮಾತನಾಡುತ್ತಾ, ಕಾನೂನಿನ ಸಾಮಾನ್ಯ ಜ್ಞಾನದ ಕೊರತೆಯಿಂದಾಗುವ ಸಮಸ್ಯೆಗಳನ್ನು ಹಾಗೂ ಅದರ ಪರಿಹಾರ ಕ್ರಮಗಳನ್ನು ವಿವರಿಸುತ್ತಾ ತಮ್ಮ ಕೃತಿಯನ್ನು ಜನರು ಓದಿ ಸದುಪಯೋಗವನ್ನು ಪಡೆದುಕೊಂಡರೆ ತಮ್ಮ ಈ ಪ್ರಯತ್ನವು ಸಾರ್ಥಕ ಎಂದು ಹೇಳಿದರು.
ಕಾರ್ಯಕ್ರಮದ ಮತ್ತೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಕೀಲರು, ಅಧಿವಕ್ತಾ ಪರಿಷತ್ ಮಂಗಳೂರು ವಿಭಾಗ ಸಂಚಾಲಕರು ಚೇತನ್ ನಾಯಕ್, ಹಿರಿಯ ನಾಗರಿಕ ಕಾಯ್ದೆ ಕುರಿತು ಮಾಹಿತಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಸಹಕಾರ ರತ್ನ ಎಸ್. ಆರ್. ಸತೀಶ್ಚಂದ್ರ ಇವರು ಸರಸ್ವತಿ ಸಹಕಾರಿಯ ಆರ್ಥಿಕ ಸೇವಾ ಸೌಲಭ್ಯಗಳ ಜೊತೆಗೆ ಸಾಮಾಜಿಕ ಬದ್ದತೆಯ ಅಂಗವಾಗಿ ಟ್ರಸ್ಟ್ ವತಿಯಿಂದ ನಡೆಸಿಕೊಂಡು ಬರುತ್ತಿರುವ ಸಾಮಾಜಿ ಸೇವಾ ಚಟುವಟಿಕೆಗಳ ಕುರಿತು ವಿಸ್ತೃತವಾಗಿ ತಿಳಿಸಿ, ಟ್ರಸ್ಟ್‌ನ ಮುಂದಿನ ಸೇವಾ ಕಾರ್ಯ ಯೋಜನೆಗಳ ಕುರಿತು ತಿಳಿಸಿದರು.
ಕಾರ್ಯಕ್ರಮದಲ್ಲಿ ಪುಸ್ತಕದ ಲೇಖಕಿ ಡಾ| ಅಕ್ಷತಾ ಆದರ್ಶ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸರಸ್ವತಿ ಸಹಕಾರಿಯ ಹಾಲಿ ಮತ್ತು ಮಾಜಿ ನಿರ್ದೇಶಕರುಗಳು, ಟ್ರಸ್ಟಿಗಳು ಪ್ಯತ್ತೂರಿನ ಖ್ಯಾತ ವಕೀಲರಾದ ಭಾಸ್ಕರ ಕೋಡಿಂಬಾಳ, ಕೃಷ್ಣಪ್ರಸಾದ್ ನಡ್ಸಾರ್, ವಿರೂಪಾಕ್ಷ, ಪಶುಪತಿ ಎಲೆಕ್ಟ್ರಿಕಲ್ಸ್ ನ ಪಶುಪತಿ ಶರ್ಮ. ಹಾಗೂ ಸಹಕಾರಿಯ ಉಪಪ್ರಧಾನ ವ್ಯವಸ್ಥಾಪಕರಾದ ಭವಾನಿ ಪ್ರಭು ಸಹಕಾರಿಯ ಸದಸ್ಯರು ಸಿಬಂದಿಗಳು ಸಾರ್ವಜನಿಕರು ಸೇರಿದಂತೆ ಸುಮಾರು 60ಕ್ಕೂ ಅಧಿಕ ಜನರು ಭಾಗವಹಿಸಿದ್ದರು.
ಸಹಕಾರಿಯ ದರ್ಬೆ ಶಾಖೆಯ ಕುಮಾರಿ ಗಾನಶ್ರೀ ಪ್ರಾರ್ಥಿಸಿದರು, ಆಡಳಿತ ಕಚೇರಿಯ ಬಿಪಿನ್ ಚಂದ್ರ ಸ್ವಾಗತಿಸಿ ವಂದಸಿದರು ಸಹಕಾರಿಯ ದರ್ಬೆ ಶಾಖೆಯ ವ್ಯವಸ್ಥಾಪಕರಾದ ದೇವಿಪ್ರಸಾದ್ ಎ ಕಾರ್ಯಕ್ರಮವನ್ನು ನಿರೂಪಿಸಿದರು. ಆಡಳಿತ ಕಚೇರಿಯ ಚಂದ್ರಶೇಖರ್ ಸಹಕರಿಸಿದರು.