ನಿಡ್ಪಳ್ಳಿ: ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಖ್ಯ ರಸ್ತೆಯಲ್ಲಿ ಇರುವ ವಿದ್ಯುತ್ ಕಂಬದಲ್ಲಿ ಹಗಲು ಹೊತ್ತಲ್ಲೂ ದಾರಿ ದೀಪ ಉರಿಯುತ್ತಿದೆ. ಅ.9ರಂದು ಹಗಲಿನಲ್ಲಿ ದಾರಿ ದೀಪ ಉರಿಯುತ್ತಿರುವುದು ಕಂಡು ಬಂತು. ಹಗಲು ಸಮಯದಲ್ಲಿಯೂ ದಾರಿ ದೀಪ ಉರಿದರೆ ವಿದ್ಯುತ್ ಬಿಲ್ಲು ಪಂಚಾಯತ್ ಗೆ ಮತ್ತಷ್ಟು ಹೊರೆಯಾಗುವುದಿಲ್ಲವೇ?, ಕತ್ತಲಾಗುವಾಗ ಸ್ವಿಚ್ ಹಾಕಿದವರಿಗೆ ಬೆಳಗಾದ ಕೂಡಲೇ ಸ್ವಿಚ್ ತೆಗೆಯಬೇಕೆಂಬ ನೆನಪಾದರೂ ಆಗುವುದಿಲ್ಲವೇ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಪಂಚಾಯತ್ ಸಿಬ್ಬಂದಿಗಳು ತಮ್ಮ ಕೆಲವೊಂದು ಬೇಡಿಕೆ ಈಡೇರಿಕೆಗೆ ಸರಕಾರದ ಕಣ್ಣು ತೆರೆಸುವ ನಿಟ್ಟಿನಲ್ಲಿ ಕಳೆದ ಒಂದು ವಾರದಿಂದ ಪಂಚಾಯತ್ ಬಂದ್ ಮಾಡಿ ನಡೆಸುತ್ತಿರುವ ಮುಷ್ಕರ ನಡೆಸುತ್ತಿದ್ದಾರೆ. ಮತ್ತೊಂದೆಡೆ ಚುನಾವಣಾ ನೀತಿ ಸಂಹಿತೆಯ ಕಾರಣದಿಂದ ಆಡಳಿತ ಯಂತ್ರವೇ ನಿಂತು ಹೋಗಿದೆ. ಆ ಕಾರಣದಿಂದ ಜನಸಾಮಾನ್ಯರಿಗೆ ಆಗಬೇಕಾದ ಕೆಲವು ಅಗತ್ಯ ಸೇವೆಗಳು ಸಿಗುತ್ತಿಲ್ಲ. ಹಗಲಿನಲ್ಲಿಯೂ ದಾರಿ ದೀಪ ಉರಿಯುತ್ತಿರಲು ಈ ಕಾರಣವೂ ಆಗಿರಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯ.