*ದ.ಕ.ಜಿಲ್ಲೆಯಲ್ಲಿ ಆರ್ಥಿಕ ಬೆಳವಣಿಗೆಗೆ ದೊಡ್ಡ ಕೊಡುಗೆ – ಸಂಜೀವ ಮಠಂದೂರು
*ಯಶಸ್ವಿಯಾಗಿ ಮುನ್ನಡೆಯಲು ನಮ್ಮ ಗ್ರಾಹಕ ಬಂಧುಗಳೇ ಕಾರಣ – ಚಿದಾನಂದ ಬೈಲಾಡಿ
ಪುತ್ತೂರು : 2002ರಲ್ಲಿ ಆರಂಭಗೊಂಡ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘವು ಸುದೀರ್ಘ 25 ವರ್ಷಗಳಲ್ಲಿ 10 ಶಾಖೆಗಳೊಂದಿಗೆ ಉತ್ತಮ ಬೆಳವಣಿಗೆಯನ್ನು ಹೊಂದಿದೆ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್ಥಿಕ ಬೆಳವಣಿಗೆಗೆ ಸಂಸ್ಥೆ ಬಹಳ ದೊಡ್ಡ ಕೊಡುಗೆ ನೀಡಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.
ಪುತ್ತೂರು ಎಪಿಎಂಸಿ ರಸ್ತೆ ಮಣಾಯಿ ಅರ್ಚ್‌ನಲ್ಲಿ ಸ್ವಂತ ಕಟ್ಟಡದಲ್ಲಿ ಪ್ರಧಾನ ಕಚೇರಿ ಮತ್ತು ಶಾಖೆಯನ್ನು ಹೊಂದಿರುವ, ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ, ಆಲಂಕಾರು, ಕಾಣಿಯೂರು, ಬೆಳ್ಳಾರೆ, ವಿಟ್ಲ ಶಾಖೆಗಳನ್ನು ಹೊಂದಿರುವ ಒಕ್ಕಲಿಗ ಸಮುದಾಯ ಪತ್ತಿನ ಸಂಘದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಪುತ್ತೂರು ಎಸ್‌ಎಮ್‌ಟಿ ಶಾಖೆಯಲ್ಲಿ ಅ.10ರಂದು ನಡೆದ ವಾರ್ಷಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘವು ಜನಸಾಮಾನ್ಯರಿಗೆ ಕ್ಲಪ್ತ ಸಮಯದಲ್ಲಿ ಸಾಲ ಮತ್ತು ಸೇವೆ ಕೊಡುವ ಕೆಲಸ ಮಾಡುತ್ತಿದೆ. ಈ ಸಂಸ್ಥೆ ಮುಂದೆ ಇನ್ನೂ ಹತ್ತು ಶಾಖೆಗಳನ್ನು ಆರಂಭಿಸಲಿ ಎಂದು ಹಾರೈಸಿದರು.
ಯಶಸ್ವಿಯಾಗಿ ಮುನ್ನಡೆಯಲು ನಮ್ಮ ಗ್ರಾಹಕ ಬಂಧುಗಳೇ ಕಾರಣ :
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಅವರು ಮಾತನಾಡಿ, ಕಳೆದ 25 ವರ್ಷಗಳಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಹೆಮ್ಮರವಾಗಿ ಬೆಳೆದಿದೆ. ರೂ. 542 ಕೋಟಿ ವ್ಯವಹಾರ ಮತ್ತು ಸುಮಾರು ರೂ. 1.50 ಲಕ್ಷ ಲಾಭದೊಂದಿಗೆ ಉತ್ತಮ ವ್ಯವಹಾರಕ್ಕೆ ನಮ್ಮ ಗ್ರಾಹಕರೇ ಮೂಲಕ ಕಾರಣ. ನಮ್ಮೆಲ್ಲ ಶಾಖೆಗಳ ಆರಂಭದ ದಿನಗಳನ್ನು ಧಾರ್ಮಿಕ ಕಾರ್ಯಕ್ರಮದ ಮೂಲಕವೇ ವಾರ್ಷಿಕ ಕಾರ್ಯಕ್ರಮ ಆಚರಿಸುತ್ತಿದ್ದೇವೆ ಎಂದರು.
ಈ ಸಂದರ್ಭ ಒಕ್ಕಲಿಗ ಗೌಡ ಸಂಘದ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಮತ್ತು ಎಸ್‌ಎಮ್‌ಟಿ ಶಾಖೆಯ ಉಪಾಧ್ಯಕ್ಷ ಪ್ರವೀಣ್ ಕುಂಟ್ಯಾನ, ರಾಮಕೃಷ್ಣ ಗೌಡ ಕೆ, ನಿರ್ದೇಶಕರಾದ ಶಿವರಾಮ ಗೌಡ ಇಡ್ಯಪೆ, ವಿಜಯ ಕೇಶವ ಗೌಡ, ಒಕ್ಕಲಿಗ ಗೌಡ ಮಹಿಳಾ ಸಂಘದ ಅಧ್ಯಕ್ಷೆ ವಾರಿಜ ಕೆ ಗೌಡ, ಯುವ ಗೌಡ ಸೇವಾ ಸಂಘದ ಅಧ್ಯಕ್ಷ ಅಮರನಾಥ್ ಗೌಡ ಬಪ್ಪಳಿಗೆ, ಎಸ್‌ಎಮ್‌ಟಿ ಶಾಖೆಯ ಸಲಹಾ ಸಮಿತಿ ಸದಸ್ಯರಾದ ಸುರೇಶ್ ಗೌಡ ಕಲ್ಲಾರೆ, ಸೋಮಪ್ಪ ಗೌಡ ಬಡಾವು, ಸೀತಾರಾಮ ಗೌಡ ಪೆರಿಯತ್ತೋಡಿ, ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಗೌರಿ ಬನ್ನೂರು, ಮೀನಾಕ್ಷಿ ಡಿ ಗೌಡ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಆಂತರಿಕ ಲೆಕ್ಕ ಪರಿಶೋಧಕ ಶ್ರೀಧರ್ ಗೌಡ ಕಣಜಾಲು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಧಾಕರ್ ಕೆ, ಎಪಿಎಂಸಿ ಶಾಖೆಯ ಸಲಹಾ ಸಮಿತಿ ಸದಸ್ಯರಾದ ವಿಶ್ವನಾಥ ಗೌಡ ಕೆ, ಲಿಂಗಪ್ಪ ಗೌಡ ತೆಂಕಿಲ, ದಯಾನಂದ ಕೆ.ಎಸ್, ಸಂಧ್ಯಾ ಶಶಿಧರ್, ಎಸ್‌ಸಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಹರೀಶ್, ಸಿಬ್ಬಂದಿ ಕೊರಗಪ್ಪ ಗೌಡ, ಒಕ್ಕಲಿಗ ಸ್ವ ಸಹಾಯ ಸಂಘದ ಅಧ್ಯಕ್ಷ ಮನೋಹರ್ ಡಿ.ವಿ, ಕುಂಬ್ರ ಸಲಹಾ ಸಮಿತಿ ಶ್ರೀಧರ್ ಗೌಡ ಅಂಗಡಿಹಿತ್ಲು, ಆಲಂಕಾರು ಸಲಹಾ ಸಮಿತಿ ಸದಸ್ಯ ಚಕ್ರಪಾಣಿ, ಸ್ಥಾಪಕ ಪ್ರವರ್ತಕ ಗಣಪಣ್ಣ ಗೌಡ ಕೆಮ್ಮಿಂಜೆ, ಶ್ರೀ ಮಹಾಲಿಂಗೇಶ್ವರ ಐಟಿಐ ಸಂಸ್ಥೆಯ ಸಲಹಾ ಸಮಿತಿಯ ಉಮೇಶ್ ಗೌಡ ಮಳವೇಲು, ಆನಂದ ಗೌಡ, ರಾಧಾಕೃಷ್ಣ ಗೌಡ ನೆಲ್ಲಿಕಟ್ಟೆ, ಎಪಿಎಂಸಿ ಶಾಖೆಯ ಸಿಬ್ಬಂದಿಗಳಾದ ಅಮಿತ್ ಡಿ, ಯಶ್ವಿತ್, ವಿಟ್ಲ ಶಾಖೆಯ ಸಿಬ್ಬಂದಿ ಪ್ರಕಾಶ್ ಸಹಿತ ಸಂಘದ ಸದಸ್ಯರು ಮತ್ತು ಗ್ರಾಹಕರು ಉಪಸ್ಥಿತರಿದ್ದರು.
ಎಸ್‌ಎಮ್‌ಟಿ ಶಾಖೆಯ ಶಾಖಾ ವ್ಯವಸ್ಥಾಪಕಿ ನಿಶ್ಚಿತ ಯು.ಡಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ರಕ್ಷಿತ್ ಜಿ.ಎನ್, ದೇವರಾಜ, ಯಶವಂತ, ಭವ್ಯಶ್ರೀ ಸಹಕರಿಸಿದರು.
ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಹರೀಶ್ ಭಟ್ ಅವರ ನೇತೃತ್ವದಲ್ಲಿ ಗಣಪತಿ ಹೋಮ, ಲಕ್ಷ್ಮೀ ಪೂಜೆ ನಡೆಯಿತು. ಎಸ್‌ಎಮ್‌ಟಿ ಶಾಖೆಯ ಅಧ್ಯಕ್ಷ ಜಿನ್ನಪ್ಪ ಗೌಡ ಮಳವೇಲು ಅವರು ಪೂಜೆಯಲ್ಲಿ ಪಾಲ್ಗೊಂಡರು.