ವಿದ್ಯುತ್ ಗುತ್ತಿಗೆದಾರನಿಗೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಕರೆ-ದೂರು ದಾಖಲು

0

ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ವಿದ್ಯುತ್ ಲೈನ್ ಕಾಮಗಾರಿ ಮಾಡುವ ಹಿರಿಯ ವಿದ್ಯುತ್ ಗುತ್ತಿಗೆದಾರರೊಬ್ಬರಿಗೆ ಅಪರಿಚಿತ ವ್ಯಕ್ತಿಯೊಬ್ಬರು ಅ.9 ರಂದು ರಾತ್ರಿ ಮೊಬೈಲ್ ಫೋನ್ ನಿಂದ ಕರೆಮಾಡಿ ಅವ್ಯಾಚ ಶಬ್ದಗಳಿಂದ ಬೈಯ್ದು ಜೀವ ಬೆದರಿಕೆ ಹಾಕಿರುವ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.


ವಿದ್ಯುತ್ ಪರವಾನಿಗೆ ಚಾಲ್ತಿ ಇಲ್ಲದ ವ್ಯಕ್ತಿಯೊಬ್ಬರು‌ ಮೆಸ್ಕಾಂ ಗುತ್ತಿಗೆಯ ಹಲವು ಕೆಲಸ ನಿರ್ವಹಿಸುತ್ತಿರುವುದನ್ನು ಮತ್ತು ಹಗರಣ ಬಯಲು ಮಾಡಿದರೆ ನಿನ್ನನ್ನು ಬಿಡುವುದಿಲ್ಲ ಎಂದು ಅಪರಿಚಿತ ವ್ಯಕ್ತಿ ಕರೆ ಮಾಡಿ ಬೆದರಿಕೆಯೊಡ್ಡಿದ್ದಾರೆಂದು ದೂರುದಾರರು ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ದೂರು ನೀಡಿದವರ ಮತ್ತು ಹಗರಣದ ಆರೋಪ ಹೊತ್ತಿರುವ ವ್ಯಕ್ತಿಯ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ.

LEAVE A REPLY

Please enter your comment!
Please enter your name here